ಐದೇ ನಿಮಿಷದಲ್ಲಿ ಗಾಜಿನಂತೆ ಹೊಳೆಯುವ ತ್ವಚೆ ನಿಮ್ಮದಾಗಲು ಹೀಗೆ ಮಾಡಿ 

By Reshma
Aug 08, 2024

Hindustan Times
Kannada

ಚರ್ಮವು ಯಾವುದೇ ಕಲ್ಮಶವಿಲ್ಲದೇ ಹೊಳೆಯಬೇಕು ಅಂದ್ರೆ ಚರ್ಮವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಸೂರ್ಯನ ಬೆಳಕು, ಧೂಳು, ಮಾಲಿನ್ಯದಿಂದ ತ್ವಚೆ ಮಂದವಾಗಿ ಕಾಣುತ್ತದೆ. 

ಅಷ್ಟೇ ಅಲ್ಲದೇ ತ್ವಚೆಯನ್ನು ಸ್ವಚ್ಛ ಮಾಡಿಲ್ಲ ಎಂದರೆ ನಿರ್ಜೀವ ಚರ್ಮದ ಕೋಶಗಳು ಶೇಖರಣೆಯಾಗಲು ಆರಂಭವಾಗುತ್ತವೆ. ಇದಕ್ಕಾಗಿ ಎಕ್ಸ್‌ಫೋಲಿಯೇಟ್‌ ಮಾಡುವುದು ಬಹಳ ಮುಖ್ಯ. 

ಎಕ್ಸ್‌ಫೋಲಿಯೇಟ್‌ ಮಾಡುವುದರಿಂದ ನಿರ್ಜೀವ ಕೋಶಗಳನ್ನು ತೊಡೆದು ಹಾಕಬಹುದು ಹಾಗೂ ಇದರಿಂದ ಚರ್ಮ ಹೊಳಪು ಹೆಚ್ಚುತ್ತದೆ 

ಅದಕ್ಕಾಗಿ ನೀವು ಪಾರ್ಲರ್‌ಗೆ ಹೋಗಬೇಕು ಅಂತೇನಿಲ್ಲ, ಮನೆಯಲ್ಲೇ ಸುಲಭವಾಗಿ ಎಕ್ಸ್‌ಫೋಲಿಯೇಟ್‌ ಮಾಡಿಕೊಳ್ಳಬಹುದು. 

ಮೊದಲಿಗೆ ಒಂದು ಬಟ್ಟಲು ಆಲಿವ್‌ ಎಣ್ಣೆ ತೆಗೆದುಕೊಳ್ಳಿ. ಅದಕ್ಕೆ ಸಕ್ಕರೆ ಸೇರಿಸಿ. ನಂತರ ಸ್ಪಲ್ವ ಜೇನುತುಪ್ಪ ಹಾಗೂ ಸಾರಭೂತ ತೈಲಗಳನ್ನು ಸೇರಿಸಿ. 

ಇದನ್ನು ಮುಖಕ್ಕೆ ಹಚ್ಚಿ ಎರಡು ನಿಮಿಷಗಳ ಕಾಲ ನಿಧಾನಕ್ಕೆ ಮಸಾಜ್‌ ಮಾಡಿ. ಸ್ವಲ್ಪ ಹೊತ್ತು ಬಿಟ್ಟು ಮುಖ ತೊಳೆಯಿರಿ. 

ಇದರಿಂದ ನಿರ್ಜೀವ ಚರ್ಮದ ಕೋಶಗಳನ್ನು ತೊಡೆದು ಹಾಕಬಹುದು. ಇದರಿಂದ ಚರ್ಮಕ್ಕೆ ಪೋಷಣೆ ಸಿಗುತ್ತದೆ ಮತ್ತು ಚರ್ಮವು ಹೊಳೆಯುತ್ತದೆ. ವಾರಕ್ಕೊಮ್ಮೆ ಹೀಗೆ ಮಾಡುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ. 

ಈ ಮನೆಮದ್ದಿನಿಂದ ಅಡ್ಡಪರಿಣಾಮಗಳು ಕಡಿಮೆಯಾದರೂ ನಿಮ್ಮದು ಸೂಕ್ಷ್ಮಚರ್ಮವಾಗಿದ್ದರೆ ತಜ್ಞರನ್ನು ಸಂಪರ್ಕಿಸುವುದು ಉತ್ತಮ. 

ಕಲಬುರಗಿಯಲ್ಲಿ ಅಯೋಧ್ಯೆ ಬಾಲರಾಮನ ಅವತಾರಿ