ಬಿಸಿಲಿಗೆ ಸೊರಗಿದ ಚರ್ಮದ ಕಾಂತಿ ಒಂದೇ ದಿನದಲ್ಲಿ ಅರಳಬೇಕು ಅಂದ್ರೆ ಈ ಫೇಸ್‌ಪ್ಯಾಕ್ ಬಳಸಿ
By Reshma May 21, 2024
Hindustan Times Kannada
ಬೇಸಿಗೆಯಲ್ಲಿ ಧೂಳು, ಬಿಸಿಲಿನ ಕಾರಣದಿಂದ ತ್ವಚೆ ಕಾಂತಿ ಕಳೆದುಕೊಳ್ಳುವುದು ಸಹಜ. ಸೂರ್ಯನ ಅತಿ ನೇರಳೆ ಕಿರಣಗಳಿಂದ ಚರ್ಮ ಕಪ್ಪಾಗುತ್ತದೆ. ಹಾಗಾಗಿ ಅಂದ ಹೆಚ್ಚಿಸಿಕೊಳ್ಳಲು ಹಲವರು ವಿವಿಧ ರೀತಿಯ ಫೇಶ್‌ವಾಶ್ ಹಾಗೂ ಕ್ರೀಮ್‌ಗಳನ್ನು ಬಳಸಲು ಪ್ರಾರಂಭಿಸುತ್ತಾರೆ.
ಆದರೆ ಇವುಗಳಲ್ಲಿ ರಾಸಾಯನಿಕ ಅಂಶಗಳಿರುವ ಕಾರಣ ಹಲವರು ಚರ್ಮದ ಗ್ಲೋ ಹೆಚ್ಚಿಸಿಕೊಳ್ಳಲು ಮನೆಮದ್ದುಗಳನ್ನು ಬಳಸಲು ಇಷ್ಟಪಡುತ್ತಾರೆ. ಚರ್ಮದ ಕಾಂತಿ ಹೆಚ್ಚಲು ನೀವು ಮೊಸರು ಹಾಗೂ ಕಡಲೆಹಿಟ್ಟಿನ ಫೇಸ್‌ಪ್ಯಾಕ್ ಬಳಸಬಹುದು.
ಮೊಸರು-ಕಡಲೆಹಿಟ್ಟಿನ ಫೇಸ್‌ಪ್ಯಾಕ್ ಬಳಸುವುದರಿಂದ ಕಲೆಗಳು, ಸುಕ್ಕು ನಿವಾರಣೆಯಾಗಿ ಮುಖದ ಕಾಂತಿ ಹೆಚ್ಚುತ್ತದೆ. ಇದರೊಂದಿಗೆ ಈ ಒಂದು ವಸ್ತು ಸೇರಿಸಿದ್ರೆ ಸಾಕು ಮುಖ ಕಾಂತಿ ದುಪ್ಪಟ್ಟಾಗುತ್ತದೆ.
ಮೊಸರು ಹಾಗೂ ಕಡಲೆಹಿಟ್ಟಿನ ಫೇಸ್‌ಪ್ಯಾಕ್‌ನಲ್ಲಿ ನೀವು ಒಂದು ಚಿಟಿಕೆ ಅರಿಸಿನವನ್ನು ಸೇರಿಸಬೇಕು. ಅರಿಸಿನದಲ್ಲಿ ಆಂಟಿ ಆಕ್ಸಿಡೆಂಟ್ ಅಂಶವಿದ್ದು, ಇದು ಚರ್ಮವನ್ನು ಒಳಗಿನಿಂದ ಸ್ವಚ್ಛಗೊಳಿಸಿ ಚರ್ಮಕ್ಕೆ ಕಾಂತಿ ನೀಡುತ್ತದೆ.
ಫೇಸ್‌ಪ್ಯಾಕ್ ತಯಾರಿಸಲು 2 ಚಮಚ ಕಡಲೆಹಿಟ್ಟಿಗೆ 2 ಚಮಚ ಮೊಸರು ಸೇರಿಸಿ. ಮೊದಲು ಈ ಪೇಸ್ಟ್ ಅನ್ನು ಮಿಶ್ರಣ ಮಾಡಿ. ನಂತರ ಆ ಪೇಸ್ಟ್‌ಗೆ ಚಿಟಿಕೆ ಅರಿಸಿನ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ.
ಈ ಫೇಸ್‌ಪ್ಯಾಕ್ ಅನ್ನು ಮುಖ ಹಾಗೂ ಕುತ್ತಿಗೆಯ ಭಾಗಕ್ಕೆ ಹಚ್ಚಿ 30 ನಿಮಿಷಗಳ ಕಾಲ ಒಣಗಲು ಬಿಡಿ.
ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆದುಕೊಳ್ಳಿ. ಸ್ವಚ್ಛವಾದ ಟವೆಲ್‌ನಿಂದ ಮುಖ ಒರೆಸಿ.
ಈ ಫೇಸ್‌ಪ್ಯಾಕ್ ಬಳಸುವುದರಿಂದ ತ್ವಚೆ ತ್ವರಿತವಾಗಿ ತಾಜಾತನ ಪಡೆಯುತ್ತದೆ. ಇದರಿಂದ ಮುಖದ ಚರ್ಮದ ಸೋಂಕುಗಳು ನಿವಾರಣೆಯಾಗುತ್ತವೆ.
ಈ ಫೇಸ್‌ಪ್ಯಾಕ್ ಅನ್ನು ನೀವು ವಾರದಲ್ಲಿ ಎರಡು ಬಾರಿ ಅನ್ವಯಿಸಬಹುದು. ಆಗ ಮಾತ್ರ ಈ ಫೇಸ್‌ಪ್ಯಾಕ್ ಚೆನ್ನಾಗಿ ಕೆಲಸ ಮಾಡುತ್ತದೆ.
ನಿಮ್ಮದು ಸೂಕ್ಷ್ಮ ಚರ್ಮವಾಗಿದ್ದರೆ ಯಾವುದೇ ರೀತಿಯ ಸೋಂಕು ಹೊಂದಿದ್ದರೆ ಈ ಫೇಸ್‌ಪ್ಯಾಕ್ ಅನ್ನು ಬಳಸದೇ ಇರುವುದು ಉತ್ತಮ.