ಕಲೆಗಳಿಲ್ಲದ ಸುಂದರ ತ್ವಚೆ ನಿಮ್ಮದಾಗಲು ಸ್ನಾನಕ್ಕೂ ಮೊದಲು ಹೀಗೆ ಮಾಡಿ

By Reshma
Sep 09, 2024

Hindustan Times
Kannada

ತ್ವಚೆಯ ಅಂದ, ಹೊಳಪು ಕಾಪಾಡಿಕೊಳ್ಳಲು ಹೆಣ್ಣುಮಕ್ಕಳು ಸಾಕಷ್ಟು ಖರ್ಚು ಮಾಡುತ್ತಾರೆ. ಸೌಂದರ್ಯವರ್ಧಕಗಳ ಬಳಕೆಯಿಂದ ಅಂದ ಹೆಚ್ಚಿಸಿಕೊಳ್ಳಲು ನೋಡುತ್ತಾರೆ

ಕೆಲವರು ಹೊರಗಡೆ ಸಿಗುವ ಕ್ರೀಮ್‌ಗಳಿಗಿಂತ ಮನೆಮದ್ದಿನ ಮೇಲೆ ಹೆಚ್ಚು ಅವಲಂಬಿತರಾಗಿರುತ್ತಾರೆ 

ನಿಮ್ಮ ತ್ವಚೆ ಕಪ್ಪಾಗಿದ್ದರೆ ಅಥವಾ ಟ್ಯಾನಿಂಗ್‌ನಿಂದ ಮುಖದ ಹೊಳಪು ಮಾಯವಾಗಿದ್ದರೆ ಸ್ನಾನ ಮಾಡುವ ಮುನ್ನ ಈ ವಸ್ತುಗಳನ್ನು ಮುಖಕ್ಕೆ ಹಚ್ಚಿಕೊಳ್ಳಿ 

ಮನೆಯಲ್ಲೇ ಇರುವ ಈ ವಸ್ತುಗಳಿಂದ ಅಂದ ಹೆಚ್ಚಿಸಿಕೊಳ್ಳಬಹುದು. ಅದಕ್ಕಾಗಿ ಸ್ನಾನಕ್ಕೂ ಮುನ್ನ ಈ ವಸ್ತುಗಳನ್ನು ಬಳಸುವ ಅಭ್ಯಾಸ ಮಾಡಿ

ಅರಿಸಿನ ಮತ್ತು ಕಡಲೆಹಿಟ್ಟನ್ನು ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿ. ಇದನ್ನು ಸ್ನಾನಕ್ಕೂ ಮುನ್ನ ಮುಖಕ್ಕೆ ಹಚ್ಚಿ 20 ನಿಮಿಷಗಳ ಕಾಲ ಇರಿಸಿ. ನಂತರ ಸ್ನಾನ ಮಾಡಿ

ಸೌತೆಕಾಯಿ ರಸವು ಚರ್ಮದ ಮೇಲಿನ ಕಂದುಬಣ್ಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಟ್ಯಾನಿಂಗ್ ಅನ್ನು ತೆಗೆದು ಹಾಕುತ್ತದೆ. ಸ್ನಾನ ಮಾಡುವ ಮೊದಲು ಸೌತೆಕಾಯಿ ರಸದಿಂದ ಮುಖಕ್ಕೆ ಮಸಾಜ್ ಮಾಡಿ 

ಮುಲ್ತಾನಿಮಿಟ್ಟಿ ಮುಖಕ್ಕೆ ಉಪಯುಕ್ತವಾಗಿದೆ. ಇದರಿಂದ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ, 30 ನಿಮಿಷಗಳ ನಂತರ ಸ್ನಾನ ಮಾಡಿ 

ಶ್ರೀಗಂಧ ಚರ್ಮಕ್ಕೆ ಒಳ್ಳೆಯದು. ಇದು ಚರ್ಮಕ್ಕೆ ಹೊಳಪು ತರುತ್ತದೆ. ಸ್ನಾನ ಮಾಡುವ ಮೊದಲು ಶ್ರೀಗಂಧದ ಫೇಸ್‌ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿಕೊಳ್ಳಿ 

ಸ್ನಾನ ಮಾಡಲು 15 ನಿಮಿಷ ಇರುವಾಗ ಆಲೊವೆರಾ ಜೆಲ್ ಅನ್ನು ಮುಖಕ್ಕೆ ಹಚ್ಚಿ, ಇದು ಚರ್ಮವನ್ನು ಸುಧಾರಿಸುತ್ತದೆ ಮತ್ತು ಕಲೆಗಳನ್ನು ತೆಗೆದುಹಾಕುತ್ತದೆ 

ಸ್ನಾನ ಮಾಡುವಾಗ ಮುಖದ ಚರ್ಮವನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ನಿಮ್ಮ ಚರ್ಮಕ್ಕೆ ಅನುಗುಣವಾಗಿ ಫೇಸ್‌ವಾಶ್ ಬಳಸಿ ಅಥವಾ ಮುಖ ತೊಳೆಯಲು ಹಸಿ ಹಾಲನ್ನೂ ಕೂಡ ಬಳಸಬಹುದು 

ದಿನಕ್ಕೆ ಎಷ್ಟು ಬಾರಿ ಅನ್ನ ತಿಂದರೆ ಆರೋಗ್ಯಕ್ಕೆ ಒಳ್ಳೆಯದು