ಪ್ರೇಮಿಗಳ ದಿನದಂದು ಸುಂದರವಾಗಿ ಕಾಣಿಸಲು ಈ ಫೇಶಿಯಲ್ ಟ್ರೈ ಮಾಡಿ

By Priyanka Gowda
Feb 12, 2025

Hindustan Times
Kannada

ಪ್ರೇಮಿಗಳ ದಿನದಂದು ಸುಂದರವಾಗಿ ಕಾಣಿಸಬೇಕು ಎಂಬ ಆಸೆ ಇರುವುದು ಸಹಜ. ಮುಖದ ಸೌಂದರ್ಯಕ್ಕಾಗಿ ಈ ಫೇಶಿಯಲ್‌ಗಳನ್ನು ಬಳಸಿ ನೋಡಿ. ನಿಮ್ಮ ತ್ವಚೆ ಹೊಳೆಯುತ್ತದೆ.

Image Credits: Adobe Stock

ಹಂತ-1: ಹಬೆ ತೆಗೆದುಕೊಳ್ಳುವುದು

Image Credits: Adobe Stock

ನೀರನ್ನು ಚೆನ್ನಾಗಿ ಕುದಿಸಿ ಅದಕ್ಕೆ 4 ರಿಂದ 6 ಹನಿ ಎಸೆನ್ಶಿಯಲ್ ಆಯಿಲ್ ಅಥವಾ ಗುಲಾಬಿ ಎಲೆಗಳನ್ನು ಜಜ್ಜಿ ನೀರಿನಲ್ಲಿ ಹಾಕಿ. ನಂತರ 5 ರಿಂದ 7 ನಿಮಿಷಗಳ ಕಾಲ ಹಬೆ ತೆಗೆದುಕೊಳ್ಳಿ.

Image Credits: Adobe Stock

ಹಂತ-2: ಗುಲಾಬಿ ಎಲೆ-ಹಾಲಿನ ಫೇಶಿಯಲ್

Image Credits: Adobe Stock

5 ರಿಂದ 6 ಗುಲಾಬಿ ಎಲೆಗಳನ್ನು ಚೆನ್ನಾಗಿ ಜಜ್ಜಿ. ಇದಕ್ಕೆ 1 ಚಮಚ ಹಾಲು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಇದನ್ನು ಮುಖಕ್ಕೆ ಹಚ್ಚಿ, 5 ನಿಮಿಷಗಳ ಕಾಲ ವೃತ್ತಾಕಾರದ ಚಲನೆಯಲ್ಲಿ ಮಸಾಜ್ ಮಾಡಿ. ನಂತರ ಹತ್ತಿಯನ್ನು ರೋಸ್ ವಾಟರ್‌ನಲ್ಲಿ ಅದ್ದಿ ಮುಖವನ್ನು ಒರೆಸಿ.

Image Credits: Adobe Stock

ಹಂತ-3: ಫೇಸ್ ಸ್ಕ್ರಬ್

Image Credits: Adobe Stock

10 ರಿಂದ 12 ಗುಲಾಬಿ ದಳಗಳನ್ನು ಪುಡಿ ಮಾಡಿ. ಇದಕ್ಕೆ ಕಾಲು ಚಮಚ ಸಕ್ಕರೆ, ಕಾಲು ಚಮಚ ರೋಸ್ ವಾಟರ್ ಬೆರೆಸಿ. ಇದಕ್ಕೆ ಬಾದಾಮಿ ಹಾಗೂ ಹಾಲಿನ ಕೆನೆಯನ್ನು ಮಿಶ್ರಣ ಮಾಡಿ ಮುಖಕ್ಕೆ ಸ್ಕ್ರಬ್ ಮಾಡಿ. ನಂತರ ಹತ್ತಿಯನ್ನು ರೋಸ್ ವಾಟರ್‌ನಲ್ಲಿ ಅದ್ದಿ ಚರ್ಮವನ್ನು ಸ್ವಚ್ಛಗೊಳಿಸಿ.

Image Credits: Adobe Stock

ಹಂತ-4: ಮಸಾಜ್

Image Credits: Adobe Stock

20 ಗುಲಾಬಿ ದಳಕ್ಕೆ ರೋಸ್ ವಾಟರ್ ಬೆರೆಸಿ ರುಬ್ಬಿಕೊಳ್ಳಿ. ಈ ಪೇಸ್ಟ್‌ಗೆ ಒಂದು ಚಮಚ ಜೇನುತುಪ್ಪ ಮತ್ತು ವಿಟಮಿನ್ ಇ ಕ್ಯಾಪ್ಸೂಲ್ ಅನ್ನು ಬೆರೆಸಿ. ಇದನ್ನು ಮುಖಕ್ಕೆ ಹಚ್ಚಿ ವೃತ್ತಾಕಾರದ ಚಲನೆಯಲ್ಲಿ 5 ನಿಮಿಷಗಳ ಕಾಲ ಮಸಾಜ್ ಮಾಡಿ. ಉಗುರುಬೆಚ್ಚಗಿನ ನೀರಿನಿಂದ ಚರ್ಮವನ್ನು ಸ್ವಚ್ಛಗೊಳಿಸಿ.

Image Credits: Adobe Stock

ಹಂತ-5: ಪ್ರತಿದಿನ ಫೇಸ್ ಮಾಸ್ಕ್

Image Credits: Adobe Stock

20 ಗುಲಾಬಿ ದಳಕ್ಕೆ ರೋಸ್ ವಾಟರ್ ಬೆರೆಸಿ ರುಬ್ಬಿ. ಈ ಪೇಸ್ಟ್‌ಗೆ ಒಂದು ಚಮಚ ಶ್ರೀಗಂಧದ ಪುಡಿ ಬೆರೆಸಿ. ಈ ಫೇಸ್ ಪ್ಯಾಕ್ ಅನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿ 15 ರಿಂದ 20 ನಿಮಿಷಗಳ ಕಾಲ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ಚರ್ಮವನ್ನು ಸ್ವಚ್ಛಗೊಳಿಸಿ.

Image Credits: Adobe Stock

ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ

Pixabay

ಈ 5 ರೋಗಗಳಿಗೆ ವಿಟಮಿನ್ ಬಿ12 ಕೊರತೆಯೇ ಮುಖ್ಯ ಕಾರಣ

pexels