ಟ್ಯಾನ್‌ ಸಂಪೂರ್ಣ ನಿವಾರಣೆಯಾಗಿ ತ್ವಚೆ ಪಳಪಳ ಹೊಳಿಬೇಕು ಅಂದ್ರೆ ಈ ಫೇಸ್‌ಪ್ಯಾಕ್‌ ಬಳಸಿ

By Reshma
Jul 29, 2024

Hindustan Times
Kannada

ಸೂರ್ಯನ ಕಿರಣಗಳು, ಧೂಳು, ಕಲುಷಿತ ವಾತಾವರಣ ಹೀಗೆ ಹಲವು ಕಾರಣಗಳಿಂದ ಚರ್ಮದ ಅಂದಗೆಡುವುದು ಸಾಮಾನ್ಯ. ಟ್ಯಾನಿಂಗ್‌ ಕಾರಣದಿಂದ ಚರ್ಮ ಕಳೆಗುಂದುತ್ತದೆ. 

ಬೇಸಿಗೆ ಮಾತ್ರವಲ್ಲ ಎಲ್ಲಾ ಕಾಲದಲ್ಲೂ ಯುವಿ ಕಿರಣಗಳ ಪ್ರಭಾವದಿಂದ ತ್ವಚೆ ಕಳೆಗುಂದಿದಂತೆ ಕಾಣುವುದು ಸಹಜ. 

ನಿಮ್ಮ ತ್ವಚೆಯ ಹೊಳಪು ಕಳೆದುಕೊಂಡಿದ್ದರೆ ಸುಲಭವಾಗಿ ಚರ್ಮದ ಅಂದ, ಹೊಳಪು ಹೆಚ್ಚಿಸಿಕೊಳ್ಳಬಹುದು. ಹೇಗೆ ಅಂತೀರಾ, ಅದು ಹಣ್ಣುಗಳಿಂದ. 

ಬಾಳೆಹಣ್ಣಿನಲ್ಲಿ ಸಾಕಷ್ಟು ವಿಟಮಿನ್‌, ಪೊಟ್ಯಾಶಿಯಂ ಮತ್ತು ಕಬ್ಬಿಣಾಂಶವಿದೆ. ಇದು ದೇಹ ಹಾಗೂ ಚರ್ಮ ಎರಡಕ್ಕೂ ಒಳ್ಳೆಯದು.

ಕಳಿತ ಬಾಳೆಹಣ್ಣನ್ನು ಚೆನ್ನಾಗಿ ಸ್ಮ್ಯಾಶ್‌ ಮಾಡಿ. ಅದನ್ನು ಮುಖಕ್ಕೆ ಹಚ್ಚಿ, 20 ನಿಮಿಷಗಳ ಕಾಲ ಹಾಗೇ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಇದರಿಂದ ಟ್ಯಾನ್‌ ಹಾಗೂ ಪಿಗ್ಮಂಟೇಷನ್‌ ಎರಡೂ ನಿವಾರಣೆಯಾಗುತ್ತದೆ. 

ಕಿತ್ತಳೆ ತಿನ್ನುವುದರಿಂದ ವಿಟಮಿನ್‌ ಸಿ ಕೊರತೆಯನ್ನು ನೀಗಿಸಬಹುದು. ಇದು ಚರ್ಮಕ್ಕೆ ಹೊಳಪನ್ನು ತರುತ್ತದೆ. ಕಿತ್ತಳೆ ಸಿಪ್ಪೆ ಫೇಸ್‌ಪ್ಯಾಕ್‌ ಬಳಸುವುದರಿಂದ ಟ್ಯಾನ್‌ ನಿವಾರಣೆಯಾಗುತ್ತದೆ. 

ಕಿತ್ತಳೆ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿ, ನಂತರ ಮೊಸರು ಮತ್ತು ನೀರಿನಲ್ಲಿ ಬೆರೆಸಿ ಪೇಸ್ಟ್‌ ತಯಾರಿಸಿ. ಇದನ್ನು ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ತೊಳೆಯಿರಿ. 

ಸ್ಟ್ರಾಬೆರಿ ಹಲವು ವಿಧದ ಜೀವಸತ್ವ ಹಾಗೂ ಖನಿಜಾಂಶಗಳಲ್ಲಿ ಸಮೃದ್ಧವಾಗಿದೆ. ಸ್ಟ್ರಾಬೆರಿಗಳನ್ನು ಸ್ಮ್ಯಾಶ್‌ ಮಾಡಿ ಹಾಗೂ ಅದಕ್ಕೆ ಜೇನುತುಪ್ಪ ಸೇರಿಸಿ.

ಈ ಪೇಸ್ಟ್‌ ಅನ್ನು ತ್ವಚೆಗೆ ಹಚ್ಚಿ 10 ರಿಂದ 15 ನಿಮಿಷಗಳ ಕಾಲ ಇರಿಸಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದರಿಂದ ಮುಖದ ಮೇಲಿನ ಟ್ಯಾನ್‌ ಹಾಗೂ ಕಲೆ ನಿವಾರಣೆಯಾಗುತ್ತದೆ. 

ಮಾವು ವಿಟಮಿನ್‌ ಸಿ ಮತ್ತು ಇಯಂತಹ ಹಲವು ಪೋಷಕಾಂಶ ಸಮೃದ್ಧವಾಗಿದೆ. ಮಾವಿನಹಣ್ಣಿನ ಫೇಸ್‌ಪ್ಯಾಕ್‌ ಟ್ಯಾನ್‌ ನಿವಾರಣೆಗೆ ಹೇಳಿ ಮಾಡಿಸಿದ್ದು. 

ಮಾವಿನ ಹಣ್ಣಿನ ತಿರುಳನ್ನು ತೆಗೆದು ಅದಕ್ಕೆ ಮೊಸರು ಬೆರೆಸಿ, ಪೇಸ್ಟ್‌ ತಯಾರಿಸಿ. ಈ ಫೇಸ್‌ ಪ್ಯಾಕ್‌ ಅನ್ನು ಹಚ್ಚಿ 20 ನಿಮಿಷಗಳ ಕಾಲ ಬಿಡಿ. 

ಐಪಿಎಲ್‌ 18ನೇ ಆವೃತ್ತಿಯಲ್ಲಿ ಕೆಕೆಆರ್ ತಂಡವನ್ನು ಅಜಿಂಕ್ಯ ರಹಾನೆ ಮುನ್ನಡೆಸಲಿದ್ದಾರೆ.