ಸೌಂದರ್ಯ ಹೆಚ್ಚಿಸುವ ಹಣ್ಣಿನ ಸಿಪ್ಪೆಗಳು, ಈ ಹಣ್ಣುಗಳನ್ನು ತಿಂದು ತಪ್ಪಿಯೂ ಸಿಪ್ಪೆ ಎಸಿಬೇಡಿ

By Reshma
Apr 18, 2024

Hindustan Times
Kannada

ಹಣ್ಣುಗಳ ಸೇವನೆ ಆರೋಗ್ಯಕ್ಕೆ ತುಂಬಾ ಉತ್ತಮ. ಇವು ದೇಹದ ಆರೈಕೆಯ ಜೊತೆಗೆ ತ್ವಚೆಯ ಅಂದವನ್ನೂ ಹೆಚ್ಚಿಸುತ್ತವೆ. ಕೇವಲ ಹಣ್ಣು ಮಾತ್ರವಲ್ಲ ಹಣ್ಣಿನ ಸಿಪ್ಪೆ ಕೂಡ ಸೌಂದರ್ಯ ಹೆಚ್ಚಿಸುತ್ತೆ ಅನ್ನೋದು ಸುಳ್ಳಲ್ಲ.

ಕೆಲವು ಹಣ್ಣುಗಳ ಸಿಪ್ಪೆಯನ್ನು ಎಸೆಯದೇ ಅವುಗಳನ್ನು ಒಣಗಿಸಿ, ಪುಡಿಮಾಡಿ ಫೇಸ್‌ಪ್ಯಾಕ್‌ ರೀತಿ ಬಳಸುವುದರಿಂದ ಅಂದ ಹೆಚ್ಚುವುದು ಸುಳ್ಳಲ್ಲ. 

ಹಣ್ಣಿನ ಸಿಪ್ಪೆಯಲ್ಲಿ ಅಗತ್ಯ ವಿಟಮಿನ್‌ ಅಂಶಗಳಿದ್ದು, ಇವು ಚರ್ಮದ ಆರೋಗ್ಯ ವೃದ್ಧಿಸಿ, ಕಾಂತಿ ಹೆಚ್ಚಲು ನೆರವಾಗುತ್ತವೆ. ಹಾಗಾದರೆ ಯಾವೆಲ್ಲಾ ಹಣ್ಣಿನ ಸಿಪ್ಪೆ ತ್ವಚೆಗೆ ಉತ್ತಮ ನೋಡಿ. 

ದಾಳಿಂಬೆ ಸಿಪ್ಪೆ ಉತ್ತಮ ಎಕ್ಸ್‌ಫೋಲಿಯೇಟಿಂಗ್‌ ಅಂಶವನ್ನು ಹೊಂದಿದೆ. ಇದು ಚರ್ಮದ ಟೋನ್‌ ಅನ್ನು ಸಮತೋಲನಗೊಳಿಸುತ್ತದೆ. ಚರ್ಮ ಸುಕ್ಕು ನಿವಾರಣೆಗೂ ಇದು ಉತ್ತಮ. 

ಬಾಳೆಹಣ್ಣಿನ ಸಿಪ್ಪೆಯು ಚರ್ಮ ವಯಸ್ಸಾದ ವಿರೋಧಿ ಗುಣಲಕ್ಷಣಗಳನ್ನು ನಿವಾರಿಸುತ್ತದೆ. ಕಣ್ಣಿನ ಸುತ್ತಲಿನ ಕಪ್ಪುಕಲೆಗಳ ನಿವಾರಣೆಗೂ ಇದು ಉತ್ತಮ. 

ಪಪ್ಪಾಯದ ಸಿಪ್ಪೆಯು ಟ್ಯಾನ್‌ ನಿವಾರಣೆಗೆ ಉತ್ತಮ. ನಿರ್ಜೀವ ಚರ್ಮದ ಕೋಶಗಳನ್ನು ತೊಡೆದುಹಾಕಲು ಇದು ಸಹಕಾರಿ. ಇದು ಚರ್ಮಕ್ಕೆ ತೇವಾಂಶ ಒದಗಿಸುತ್ತದೆ. 

ಕಿತ್ತಳೆ ಸಿಪ್ಪೆಯನ್ನು ಹಲವರು ಫೇಸ್‌ಪ್ಯಾಕ್‌ ಆಗಿ ಬಳಸುತ್ತಾರೆ. ಇದರಲ್ಲಿ ವಿಟಮಿನ್‌ ಸಿ ಸಮೃದ್ಧವಾಗಿದ್ದು ಇದು ತ್ವಚೆಗೆ ಬಹಳ ಉತ್ತಮ. 

ಮುಖಕ್ಕೆ ತಾಜಾತನ ನೀಡುವ ಸೇಬುಹಣ್ಣಿನ ಸಿಪ್ಪೆ ಉತ್ತಮ. ಸೇಬುಹಣ್ಣಿನ ಸಿಪ್ಪೆಗಳನ್ನು ನೀರಿನಲ್ಲಿ ಕುದಿಸಿ, ಇದನ್ನು ಟೋನರ್‌ ಆಗಿ ಬಳಸಬಹುದು. 

ಕಿವಿಫ್ರೂಟ್‌ನ ಸಿಪ್ಪೆ ಕೂಡ ವಿಟಮಿನ್‌ ಸಿ ಸಮೃದ್ಧವಾಗಿರುವ ಕಾರಣ ತ್ವಚೆಯ ಆರೋಗ್ಯಕ್ಕೆ ಉತ್ತಮ. ಇದನ್ನು ಒಣಗಿಸಿ ಪುಡಿ ಮೊಸರಿನೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಿ. 

ಅವಕಾಡೊ ಸಿಪ್ಪೆಯಲ್ಲಿ ವಿಟಮಿನ್‌ ಇ, ಬಿ ಹಾಗೂ ಅಮೈನೋ ಆಸಿಡ್‌ಗಳಿದ್ದು, ಇದು ಚರ್ಮದ ಆರೋಗ್ಯಕ್ಕೆ ಉತ್ತಮ. 

ವಿರಾಟ್ ಕೊಹ್ಲಿ ಅನುಭವಕ್ಕೆ ಸರಿಸಾಟಿ ಯಾರೂ ಇಲ್ಲ: ರಿಕಿ ಪಾಂಟಿಂಗ್