ಕಲೆಗಳಿಲ್ಲದ, ಸ್ವಚ್ಛ-ಸುಂದರ ತ್ವಚೆ ನಿಮ್ಮದಾಗಬೇಕಾ, ಮನೆಯಲ್ಲೇ ತಯಾರಿಸಿ ಬಳಸಿ ಈ ಸ್ಕ್ರಬ್
By Reshma
Aug 21, 2024
Hindustan Times
Kannada
ಕಲೆಗಳಿಲ್ಲದ ಸ್ವಚ್ಛ ತ್ವಚೆ ನಮ್ಮದಾಗಬೇಕು ಎಂದರೆ ಬಾಡಿ ಸ್ಕ್ರಬ್ ಬಳಸಬೇಕು. ಇದು ಚರ್ಮವನ್ನು ಮೃದುವಾಗಿಸಿ, ಸುಂದರವಾಗಿ ಕಾಣುವಂತೆ ಮಾಡುತ್ತದೆ
ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಸ್ಕ್ರಬ್‌ಗಳು ಸಿಗುತ್ತವೆಯಾದರೂ ಮನೆಯಲ್ಲೇ ತಯಾರಿಸಿದ ಸ್ಕ್ರಬ್ ಬಳಸುವುದರಿಂದ ಚರ್ಮಕ್ಕೆ ಹಾನಿಯಾಗುವುದು ಕಡಿಮೆ
ಇದಕ್ಕೆ ಅರಿಶಿನ ಉತ್ತಮ ಮಾರ್ಗ. ಪ್ರತಿ ಅಡುಗೆಮನೆಯಲ್ಲೂ ಅರಿಸಿನ ಇದ್ದೇ ಇರುತ್ತದೆ. ಅರಿಸಿನವು ಹಲವು ಔಷಧೀಯ ಗುಣಗಳನ್ನು ಹೊಂದಿದೆ. ಇದನ್ನು ಫೇಸ್‌ಪ್ಯಾಕ್ ರೂಪದಲ್ಲೂ ಬಳಸಲಾಗುತ್ತದೆ
ಈ ವಿಶೇಷವಾದ ಸ್ಕ್ರಬ್ ತಯಾರಿಸಲು ನಿಮಗೆ ಸಕ್ಕರೆ, ತೆಂಗಿನೆಣ್ಣೆ ಹಾಗೂ ಅರಿಸಿನ ಪುಡಿ ಬೇಕು
ಒಂದು ಬಟ್ಟಲಿನಲ್ಲಿ ಅರಿಸಿನ ಹಾಗೂ ಸಮಾನ ಪ್ರಮಾಣದಲ್ಲಿ ಸಕ್ಕರೆ ತೆಗೆದುಕೊಂಡು ಮಿಶ್ರಣ ಮಾಡಿ. ಅದಕ್ಕೆ ತೆಂಗಿನೆಣ್ಣೆ ಸೇರಿಸಿ ಪೇಸ್ಟ್ ತಯಾರಿಸಿ
ಸ್ನಾನಕ್ಕೂ ಮುನ್ನ ಮುಖ, ಕೈಕಾಲುಗಳ ಚರ್ಮಕ್ಕೆ ಹಚ್ಚಿ ಮೃದುವಾಗಿ ಮಸಾಜ್ ಮಾಡಿ. ನಂತರ ಉಗುರ ಬೆಚ್ಚಗಿನ ನೀರಿನಿಂದ ಸ್ವಚ್ಛ ಮಾಡಿ
ಈ ಸ್ಕ್ರಬ್‌ಗೆ ಬಳಸುವ ಮೂರು ಅಂಶಗಳು ತ್ವಚೆಗೆ ಉತ್ತಮ. ಇದರಿಂದ ಚರ್ಮ ಎಕ್ಸ್‌ಫೋಲಿಯೇಟ್ ಆಗುವುದು ಮಾತ್ರವಲ್ಲ ಹೊಳಪು ಹೆಚ್ಚಾಗುತ್ತದೆ.
ಈ ಸುದ್ದಿಯ ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗೆ ತಜ್ಞರನ್ನು ಸಂಪರ್ಕಿಸುವುದು ಉತ್ತಮ
ಎಚ್ಚರ!
ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ
PEXELS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ