ಕೂದಲಿಗೆ ಮುತ್ತಿನ ಮೆರುಗು, ಹೆಂಗಳೆಯರ ಅಂದ ಹೆಚ್ಚಿಸುವ ಹೇರ್‌ ಸ್ಟೈಲ್‌ಗಳಿವು

By Reshma
Jul 18, 2024

Hindustan Times
Kannada

ಇತ್ತೀಚಿನ ದಿನಗಳಲ್ಲಿ ಮೇಕಪ್‌ ವಿಚಾರದಲ್ಲಿ ಹೇರ್‌ಸ್ಟೈಲ್‌ಗೂ ಹೆಚ್ಚಿನ ಪ್ರಾಶಸ್ತ್ಯವಿದೆ. ನೀಟಾಗಿ ಹೇರ್‌ಸ್ಟೈಲ್‌ ಮಾಡಿದ ನಂತರ ಆಕ್ಸೆಸರಿಗಳಿಂದ ಅಲಂಕರಿಸಿಕೊಳ್ಳುವುದು ಕೂಡ ಟ್ರೆಂಡ್‌ ಆಗಿದೆ. ಕೂದಲ ಅಂದ ಹೆಚ್ಚಿಸುವ ಅಲಂಕಾರಿಕ ವಸ್ತುಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. 

ನೀವು ನಿಮ್ಮ ನೀಳ ಕೂದಲನ್ನು ಅಲಂಕರಿಸಿಕೊಳ್ಳಲು ಬಯಸಿದರೆ ನಿಮಗಾಗಿ ಇಲ್ಲಿದೆ ಒಂದು ಹೊಸ ಟ್ರೆಂಡ್‌ನ ಹೇರ್‌ಸ್ಟೈಲ್‌. 

ಹೂವಿನ ಚಿತ್ತಾರದಲ್ಲಿ, ಮುತ್ತು ಜೋಡಿಸಿರುವ ವಿನ್ಯಾಸದ ಕಿಪ್ಲ್‌ನಿಂದ ನಿಮ್ಮ ಕೂದಲನ್ನು ಸಿಂಗರಿಸಬಹುದು. 

ಹೂವಿನ ಚಿತ್ತಾರವಿರುವ ಗುಂಡಗಿನ ಗಜ್ರಾವನ್ನು ಬನ್‌ ಹೇರ್‌ಸ್ಟೈಲ್‌ ಮಾಡಿ ಧರಿಸಬಹುದು. ಇದು ಹಿಂದಿನಿಂದ ನಿಮಗೆ ಸೊಗಸಾದ ನೋಟ ಸಿಗುವಂತೆ ಮಾಡುತ್ತದೆ.

ಬನ್‌ ಹೇರ್‌ಸ್ಟೈಲ್‌ ಮಾಡಿ ಹರಳುಗಳ ಡಿಸೈನ್‌ ಇರುವ ಹೇರ್‌ ಬಂಜ್‌ ಬಳಸಬಹುದು. ಇದು ಕೂಡ ಸಖತ್‌ ಟ್ರೆಂಡ್‌ ಲುಕ್‌ ಸಿಗುವಂತೆ ಮಾಡುತ್ತದೆ.

ಕೂದಲನ್ನು ಹಿಂದಿನಿಂದ ಹರಡಿ ಬಿಟ್ಟು ಅದರ ಮೇಲೆ ಚಿಟ್ಟೆ ಆಕಾರದ ಕ್ಲಿಪ್‌ಗಳಿಂದ ಸಿಂಗರಿಸಿ. 

ಕೂದಲನ್ನು ಹಿಂದಿನಿಂದ ಸಡಿಲವಾಗಿ ಮಡಿಸಿ. ಬದಿಯಲ್ಲಿ ಮುತ್ತಿನ ಗೊಂಚಲಿನ ಕ್ಲಿಪ್‌ ಜೋಡಿಸಿ. ಇದು ನಿಮಗೆ ಸಖತ್‌ ಸ್ಟೈಲಿಶ್‌ ಲುಕ್‌ ಸಿಗುವಂತೆ ಮಾಡುತ್ತದೆ. 

ಹಕ್ಕಿ ಚಿತ್ತಾರ ಮುತ್ತಿನ ಜೋಡಣೆ: ಹಕ್ತಿ ಹಾಗೂ ಮುತ್ತಿನ ಚಿತ್ತಾರ ಕ್ಲಿಪ್‌ನೊಂದಿಗೆ ಕೂದಲಿನ ಅಂದವನ್ನು ಹೆಚ್ಚಿಸಿಕೊಳ್ಳಬಹುದು.

ಕಡಿಮೆ ಕೂದಲಿನಿಂದ ಬನ್‌ ಮಾಡಿದ್ದರೆ ಹೂವಿನ ಚಿತ್ತಾರದ ರಬ್ಬರ್‌ನಿಂದ ಬನ್‌ ಅನ್ನು ಸಿಂಗರಿಸಬಹುದು. 

ನೀವು ಉದ್ದ ಕೂದಲು ಹೊಂದಿದ್ದರೆ ಸಡಿಲವಾದ ಜಡೆ ಹಾಕಿ ಹೂಗಳಿಂದ ಅಲಂಕರಿಸಬಹುದು. ಇದು ನಿಮ್ಮ ಕೂದಲಿನ ಅಂದವನ್ನು ಹೆಚ್ಚಿಸುತ್ತದೆ. 

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS