ಈ ಒಂದು ವಸ್ತು ಬಳಸಿದ್ರೆ ಸಾಕು, ತಲೆಹೊಟ್ಟು ಮಾಯ ಆಗೋದು ಖಂಡಿತ
By Reshma Apr 12, 2024
Hindustan Times Kannada
ಇತ್ತೀಚಿನ ದಿನಗಳಲ್ಲಿ ತಲೆಹೊಟ್ಟಿನ ಸಮಸ್ಯೆ ಸಹಜವಾಗಿದೆ. ತಲೆಹೊಟ್ಟು ನಿವಾರಣೆಗಾಗಿ ದುಬಾರಿ ಚಿಕಿತ್ಸೆಯಿಂದ ದುಬಾರಿ ಉತ್ಪನ್ನಗಳ ಬಳಕೆವರೆಗೆ ಏನೇನೋ ಸರ್ಕಸ್ ಮಾಡುತ್ತಾರೆ. ಆದರೆ ಈ ಯಾವುದು ಉತ್ತಮ ಫಲಿತಾಂಶ ನೀಡುವುದಿಲ್ಲ.
ಆದರೆ ಕೆಲವೊಮ್ಮೆ ತಲೆಹೊಟ್ಟಿಗೆ ಮನೆಮದ್ದುಗಳೇ ಉತ್ತಮ ಪರಿಹಾರ ಎನ್ನಿಸುತ್ತದೆ. ಅವುಗಳನ್ನು ಬಳಸುವುದು ಸುಲಭ ಹಾಗೂ ಇದು ಪರಿಣಾಮಕಾರಿ ಪ್ರಯೋಜನಗಳನ್ನು ನೀಡುವುದು ಖಂಡಿತ.
ನಿಮ್ಮ ಮನೆಯಲ್ಲಿ ಈ ಒಂದು ವಸ್ತು ಇದ್ದರೆ ಸಾಕು ತಲೆಹೊಟ್ಟಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು. ಹಾಗಾದರೆ ಆ ವಸ್ತು ಯಾವುದು, ಅದರ ಬಳಕೆ ಹೇಗೆ ತಿಳಿಯಿರಿ.
ಆಪಲ್ ಸೀಡರ್ ವಿನೇಗರ್ ಇದ್ದರೆ ನೀವು ಸುಲಭವಾಗಿ ತಲೆಹೊಟ್ಟಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಇದನ್ನು ಬಳಸುವ ಮಾರ್ಗ ಕೂಡ ಸುಲಭವಾಗಿದೆ.
ಆಪಲ್ ಸೀಡರ್ ವಿನೇಗರ್ ಹಲವು ರೀತಿಯ ಪ್ರಯೋಜನಗಳನ್ನು ಹೊಂದಿದೆ. ಇದರಲ್ಲಿ ಬ್ಯಾಕ್ಟೀರಿಯಾ ನಾಶ ಮಾಡುವ ಅಂಟಿಮೈಕ್ರೋಬಿಯಲ್ ಗುಣಲಕ್ಷಣಗಳಿವೆ. ಇದು ತಲೆಹೊಟ್ಟು ನಿವಾರಿಸುವ ಜೊತೆಗೆ ಕೂದಲಿನ ಬೆಳವಣಿಗೆಗೂ ಸಹಕರಿಸುತ್ತದೆ.
ಆಪಲ್ ಸೀಡರ್ ವಿನೇಗರ್ ಅನ್ನು ಹಲವು ವಿಧಗಳಲ್ಲಿ ಕೂದಲಿಗೆ ಅನ್ವಯಿಸಬಹುದು. ಆದರೆ ಇದನ್ನು ನೇರವಾಗಿ ಕೂದಲಿಗೆ ಹಚ್ಚಬೇಡಿ. ಬದಲಿಗೆ ಇದರೊಂದಿಗೆ ನೀರು ಮಿಶ್ರಣ ಮಾಡಲು ಮರೆಯಬೇಡಿ.
ಆಪಲ್ ಸೀಡರ್ ವಿನೇಗರ್ ಅನ್ನು ನೀರಿನೊಂದಿಗೆ ಮಿಶ್ರಣ ಮಾಡಿ ಕೂದಲಿನ ಬುಡ ಹಾಗೂ ನೆತ್ತಿಯ ಭಾಗಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ಸ್ವಲ್ಪ ಹೊತ್ತು ಬಿಟ್ಟು ರಾಸಾಯನಿಕ ಮುಕ್ತ ಶಾಂಪೂವಿನಿಂದ ತಲೆಸ್ನಾನ ಮಾಡಿ.
ಆಲೊವೆರಾ ಜೆಲ್ ಹಾಗೂ ಆಪಲ್ ಸೀಡರ್ ವಿನೇಗರ್ ಅನ್ನು ಮಿಶ್ರಣ ಮಾಡಿದ ಕೂದಲು ಹಾಗೂ ನೆತ್ತಿಯ ಬುಡಕ್ಕೆ ಹಚ್ಚಿ ನಂತರ ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ.
ನೆನಪಿಡಿ ಈ ವಸ್ತುಗಳಲ್ಲಿ ಯಾವುದಾದರು ನಿಮಗೆ ಅಲರ್ಜಿ ಇದ್ದರೆ ಅಥವಾ ಕೂದಲಿಗೆ ಬೇರೆ ಚಿಕಿತ್ಸೆ ಮಾಡುತ್ತಿದ್ದರೆ, ಇದನ್ನು ಬಳಸುವ ಮುನ್ನ ತಜ್ಞರನ್ನು ಸಂಪರ್ಕಿಸಿ.