ಬೇಸಿಗೆಯಲ್ಲಿ ಬೆವರು, ಧೂಳಿನ ಕಾರಣದಿಂದ ಕೂದಲು ಅಂದಗೆಟ್ಟಿದ್ದರೆ ಈ ಹೇರ್‌ಪ್ಯಾಕ್‌ ಬಳಸಿ ನೋಡಿ 

By Reshma
May 25, 2024

Hindustan Times
Kannada

ಬೇಸಿಗೆಯಲ್ಲಿ ಧೂಳು, ಬಿಸಿಲು, ಬೆವರು, ಮಾಲಿನ್ಯದ ಕಾರಣದಿಂದ ಕೂದಲಿನ ಆರೋಗ್ಯ ಹದಗೆಟ್ಟು ನಿರ್ಜೀವವಾದಂತೆ ಕಾಣಿಸುತ್ತದೆ. 

ಅಂತಹ ಸಮಯದಲ್ಲಿ ಕೂದಲಿಗೆ ಸರಿಯಾದ ಆರೈಕೆ, ಪೋಷಣೆ ನೀಡುವುದು ಅತ್ಯಗತ್ಯ. ಅದಕ್ಕೆ ನೀವು ಮನೆಯಲ್ಲೇ ಇರುವ ವಸ್ತುಗಳನ್ನು ಬಳಸಬಹುದು. 

ಶುಷ್ಕ ಹಾಗೂ ನಿರ್ಜೀವ ಕೂದಲಿಗೆ ಜೀವಕಳೆ ನೀಡಿ ಪೋಷಿಸಲು ನೀವು ಈ ಹೇರ್‌ಪ್ಯಾಕ್‌ ಅನ್ನು ತಪ್ಪದೇ ಬಳಸಬೇಕು. 

ಬೇಸಿಗೆಯಲ್ಲಿ ಅಂದಗೆಟ್ಟ ಕೂದಲಿಗೆ ಮರುಜೀವ ನೀಡಲು ಸಹಾಯ ಮಾಡುವ ಹೇರ್‌ಪ್ಯಾಕ್‌ಗೆ ಬೇಕಾಗಿರುವುದು ಎರಡೇ ವಸ್ತುಗಳು. ಅದು ಅಲೊವೆರಾ ಜೆಲ್‌ ಹಾಗೂ ಅಗಸೆ ಬೀಜ. 

ಬಾಣಲಿಯಲ್ಲಿ ನೀರು ಬಿಸಿ ಮಾಡಿ. ಅದಕ್ಕೆ ಅಗಸೆಬೀಜ, ಅಲೊವೆರಾ ಜೆಲ್‌ ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಅದನ್ನು ಫಿಲ್ಟರ್‌ ಮಾಡಿ.

ಈ ಮಿಶ್ರಣವನ್ನು ಕೂದಲು ಹಾಗೂ ನೆತ್ತಿಯ ಬುಡಕ್ಕೆ ಹಚ್ಚಿ ಚೆನ್ನಾಗಿ ಮಸಾಜ್‌ ಮಾಡಿ. ಸ್ವಲ್ಪ ಹೊತ್ತು ಒಣಗಲು ಬಿಡಿ. ನಂತರ ತಲೆಸ್ನಾನ ಮಾಡಿ. 

ಸ್ನಾನ ಮಾಡಿದ ಕೂದಲು ಒಣಗಿದ ನಂತರ ಮುಂಚೆಗಿಂತ ನಿಮ್ಮ ಕೂದಲು ಹೆಚ್ಚು ಹೊಳೆಯುತ್ತದೆ. ಕೂದಲಿಗೆ ಕಳೆ ಬರುತ್ತದೆ. ವಾರಕೊಮ್ಮೆ ಈ ಹೇರ್‌ಪ್ಯಾಕ್‌ ಬಳಸಿ ನೋಡಿ.

ಈ ಮಾಹಿತಿಯು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ನಿಮಗೆ ಯಾವುದೇ ರೀತಿಯ ಅಲರ್ಜಿ ಇದ್ದರೆ ಈ ಹೇರ್‌ಪ್ಯಾಕ್‌ ಬಳಸುವ ಮುನ್ನ ತಜ್ಞರನ್ನ ಸಂಪರ್ಕಿಸಿ. 

ಉಯ್ಯಾಲೆಯಾಡಿದ ಕೆಎಲ್ ರಾಹುಲ್; ಸ್ಪೇನ್​ನಲ್ಲಿ ಸಖತ್ ಸುತ್ತಾಟ