ಮೊಡವೆ ನಿವಾರಣೆಗೆ ಮನೆಯಲ್ಲೇ ತಯಾರಿಸಿ ಕ್ಲೇ ಫೇಸ್‌ಪ್ಯಾಕ್‌, ಎಣ್ಣೆ ಚರ್ಮಕ್ಕೂ ಇದೇ ಮದ್ದು 

By Reshma
May 28, 2024

Hindustan Times
Kannada

ಪ್ರತಿಯೊಬ್ಬರ ಚರ್ಮದ ಪ್ರಕಾರವು ವಿಭಿನ್ನವಾಗಿರುತ್ತದೆ. ಕೆಲವರು ಒಣ ಚರ್ಮವನ್ನು ಹೊಂದಿದ್ದರೆ ಇನ್ನೂ ಕೆಲವರು ಎಣ್ಣೆ ಚರ್ಮ ಹೊಂದಿರುತ್ತಾರೆ. 

ಎಣ್ಣೆ ಚರ್ಮ ಹೊಂದಿರುವವರು ಮೊಡವೆ ಮತ್ತು ಕಲೆಗಳಿಂದ ಬಳಲುತ್ತಿರುತ್ತಾರೆ. ಎಣ್ಣೆಯುಕ್ತ ಚರ್ಮ ಜಿಗುಟಾದ ಕಾರಣ ಮೇಕಪ್‌ ಕೂಡ ಹೆಚ್ಚು ಕಾಲ ಉಳಿಯುವುದಿಲ್ಲ. 

ನಿಮ್ಮದೂ ಎಣ್ಣೆ ಚರ್ಮವಾಗಿದ್ದು, ಮೊಡವೆ ತೊಂದರೆಯಿಂದ ನೀವು ಬಳಲುತ್ತಿದ್ದರೆ ಮನೆಯಲ್ಲಿ ತಯಾರಿಸಿ ಈ ಫೇಸ್‌ಪ್ಯಾಕ್‌ಗಳನ್ನು ಬಳಸುವ ಮೂಲಕ ಪರಿಹಾರ ಕಂಡುಕೊಳ್ಳಬಹುದು.

ನೀವು ಮನೆಯಲ್ಲೇ ಸುಲಭವಾಗಿ ಮಣ್ಣಿನ ಅಥವಾ ಕ್ಲೇ ಫೇಸ್‌ಪ್ಯಾಕ್‌ ತಯಾರಿಸಬಹುದು. ಇದು ಎಣ್ಣೆ ಚರ್ಮಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. 

ಇದನ್ನು ತಯಾರಿಸಲು 2 ಚಮಚ ಜೇಡಿಮಣ್ಣು, 1 ಚಮಚ ರೋಸ್‌ ವಾಟರ್‌, 1 ಚಮಚ ವಿಚ್‌ ಹ್ಯಾಝೆಲ್‌ ಬಳಸಿ.  

2 ಚಮಚ ಜೇಡಿಮಣ್ಣಿಗೆ 1 ಚಮಚ ವಿಚ್‌ ಹ್ಯಾಜೆಲ್‌ ಮತ್ತು  ಚಮಚ ರೋಸ್‌ ವಾಟರ್‌ ಸೇರಿಸಿ ಈ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. 

ಈ ಫೇಸ್‌ಪ್ಯಾಕ್‌ ಅನ್ನು ಮುಖಕ್ಕೆ ಹಚ್ಚಿ 20 ನಿಮಿಷಗಳ ಕಾಲ ಇರಿಸಿ. ಇದು ಚೆನ್ನಾಗಿ ಆರಿದ ಮೇಲೆ ತಣ್ಣೀರಿನಿಂದ ಮುಖ ತೊಳೆಯಿರಿ. 

ಮುಖದ ತೊಳೆದ ನಂತರ ಸ್ವಲ್ಪ ಹೊತ್ತು ಮುಖಕ್ಕೆ ಏನು ಹಚ್ಚಬಾರದು. ವಾರಕ್ಕೆ ಎರಡು ಬಾರಿ ಈ ಫೇಸ್‌ಪ್ಯಾಕ್‌ ಅನ್ನು ಮುಖಕ್ಕೆ ಹಚ್ಚಬೇಕು. 

ಕ್ಲೇ ಫೇಸ್‌ಪ್ಯಾಕ್‌ ಮೊಡವೆ ಸಮಸ್ಯೆಯನ್ನು ನಿವಾರಿಸುತ್ತದೆ. ಇದು ಚರ್ಮದ ಜಿಗುಟಾಗುವುದನ್ನು ತಡೆಯುತ್ತದೆ. ಚರ್ಮದಿಂದ ಎಣ್ಣೆಯನ್ನು ಕಡಿಮೆ ಮಾಡುತ್ತದೆ. 

ಎಣ್ಣೆ ಚರ್ಮ ಹೊಂದಿರುವವರಿಗೆ ಮಾತ್ರ ಕ್ಲೇ ಫೇಸ್‌ಪ್ಯಾಕ್‌ ಒಳ್ಳೆಯದು. ಒಣ ಚರ್ಮದವರು ಇದನ್ನು ಬಳಸುವಂತಿಲ್ಲ. 

ವಿಟಮಿನ್ ಕೆ ಸಮೃದ್ಧವಿರುವ ಆಹಾರಗಳಿವು

Pinterest