ಐಬ್ರೋ ತೆಳ್ಳಗಿದ್ಯಾ, ಒಂದೇ ತಿಂಗಳಲ್ಲಿ ಹುಬ್ಬಿನ ಕೂದಲು ದಟ್ಟವಾಗಿ ಬೆಳೆಯಲು ಹೀಗೆ ಮಾಡಿ 

By Reshma
Oct 06, 2024

Hindustan Times
Kannada

ಹೆಣ್ಣುಮಕ್ಕಳು ತಮ್ಮ ಹುಬ್ಬು ದಪ್ಪವಾಗಿ, ಕಪ್ಪಗಿರಬೇಕು ಎಂದು ಬಯಸುವುದು ಸಹಜ. ಹುಬ್ಬನ್ನು ದಪ್ಪವಾಗಿಸಿಕೊಳ್ಳುವ ಸಲುವಾಗಿ ಸಿಕ್ಕ ಸಿಕ್ಕ ಉತ್ಪನ್ನಗಳನ್ನು ಬಳಸುತ್ತಾರೆ 

ಕೆಲವರಿಗೆ ದೇಹದ ಇತರ ಭಾಗಗಳಲ್ಲಿ ಕೂದಲು ಕಡಿಮೆ ಇರುವಂತೆ ಹುಬ್ಬಿನಲ್ಲೂ ಕಡಿಮೆ ಇರುತ್ತದೆ 

ನಿಮ್ಮ ಹುಬ್ಬಿನ ಕೂದಲು ತೆಳುವಾಗಿದ್ದು, ದಪ್ಪವಾಗಿಸಲು ಬಯಸಿದರೆ ಈ ನೈಸರ್ಗಿಕ ವಿಧಾನಗಳನ್ನು ಅನುಸರಿಸಿ ನೋಡಿ 

ನಿಮ್ಮ ಹುಬ್ಬುಗಳನ್ನು ದಪ್ಪವಾಗಿಸಲು ಪ್ರತಿದಿನ ಮಸಾಜ್ ಮಾಡಬೇಕು. ಹುಬ್ಬಿಗೆ ಎಣ್ಣೆ ಮಸಾಜ್ ಮಾಡುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ ಹಾಗೂ ಕೂದಲಿನ ಬೆಳವಣಿಗೆಯೂ ವೃದ್ಧಿಯಾಗುತ್ತದೆ 

ತೆಂಗಿನೆಣ್ಣೆ ಅಥವಾ ಆಲಿವ್ ಎಣ್ಣೆಯನ್ನು ಕೊಂಚ ಬಿಸಿ ಮಾಡಿ. ರಾತ್ರಿಗಳ ಮಲಗುವ ಮುನ್ನ 5 ನಿಮಿಷಗಳ ಕಾಲ ಮಸಾಜ್ ಮಾಡಿ 

ಹುಬ್ಬನ್ನು ಸ್ವಚ್ಛವಾಗಿಡುವುದು ಕೂಡ ಅದರ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿದಿನ ಮುಖ ತೊಳೆಯುವಾಗ ಹುಬ್ಬಿನ ಕಡೆ ಗಮನ ಕೊಡಿ, ಆದರೆ ಜೋರಾಗಿ ಉಜ್ಜಬೇಡಿ 

ಹುಬ್ಬಿನ ಭಾಗದಲ್ಲಿ ಮಾಯಿರೈಸ್ ಹಚ್ಚುವದು ಕೂಡ ಮುಖ್ಯವಾಗುತ್ತದೆ. ಇದು ಹುಬ್ಬಿನ ಕೂದಲು ಹಾಗೂ ಹುಬ್ಬಿನ ಭಾಗ ಒಣಗದಂತೆ ನೋಡಿಕೊಳ್ಳುತ್ತದೆ 

ಹುಬ್ಬನ್ನು ಹೊಂದಿಸಲು ಬ್ರಷ್ ಬಳಸಿ. ಇದು ಹುಬ್ಬುಗಳನ್ನ ಹೊಂದಿಸುತ್ತದೆ ಮತ್ತು ಹುಬ್ಬಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ 

ಮಸಾಜ್‌, ಮಾಯಿಶ್ಚರೈಸಿಂಗ್, ಸ್ವಚ್ಛ ಮಾಡುವುದು ಈ ಯಾವುದೇ ಕೆಲಸವನ್ನು ದಿನಕ್ಕೆ ಒಮ್ಮೆ ಮಾತ್ರ ಮಾಡಬೇಕು 

ಗಮನಿಸಿ: ನಿಮ್ಮ ಚರ್ಮವು ಸೂಕ್ಷ್ಮವಾಗಿದ್ದರೆ ಹುಬ್ಬುಗಳ ಮೇಲೆ ವಸ್ತುಗಳನ್ನು ಹಚ್ಚುವ ಮೊದಲು ಪ್ಯಾಚ್ ಟೆಸ್ಟ್ ಮಾಡಿಸಿ 

ಅಶ್ವಿನ್ ಸೇರಿ ವಿದಾಯ ಪಂದ್ಯವಾಡದ ಭಾರತದ ದಿಗ್ಗಜ ಕ್ರಿಕೆಟಿಗರು