ಸದಾ ಹೊಳೆಯುವ ತ್ವಚೆ ನಿಮ್ಮದಾಗಲು ಮನೆಯಲ್ಲೇ ತಯಾರಿಸಿ ಪಪ್ಪಾಯ ಫೇಸ್‌ಕ್ರೀಮ್‌

By Reshma
Jul 05, 2024

Hindustan Times
Kannada

ಸದಾ ಹೊಳೆಯುವ, ತರುಣಿಯಂತೆ ಮೃದುವಾದ ತ್ವಚೆ ತಮ್ಮದಾಗಿರಬೇಕು ಎಂದು ಎಲ್ಲರೂ ಬಯಸುತ್ತಾರೆ. ಆದರೆ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಿಜಕ್ಕೂ ಸವಾಲು. 

ತ್ವಚೆಯ ಯೌವನ ಕಾಪಾಡಿಕೊಳ್ಳಲು ಜನರು ಹಲವು ವಿಧಾನಗಳನ್ನು ಅನುಸರಿಸುತ್ತಾರೆ. ಇದಕ್ಕಾಗಿ ದುಬಾರಿ ಖರ್ಚು ಮಾಡಿ ಕ್ರೀಮ್‌, ಲೋಷನ್‌ಗಳನ್ನು ಬಳಸುತ್ತಾರೆ. ಆದರೆ ಹಲವು ಬಾರಿ ಇವು ನಾವು ಅಂದುಕೊಂಡ ಫಲಿತಾಂಶ ನೀಡುವುದಿಲ್ಲ. 

ನೀವು ಹೀಗೆ ತ್ವಚೆಯ ಅಂದ ಆರೋಗ್ಯಕ್ಕಾಗಿ ವಿವಿಧ ವಿಧಾನಗಳನ್ನು ಅನುರಿಸುತ್ತಿದ್ದರೆ ಈ ವಿಧಾನವನ್ನೊಮ್ಮೆ ಟ್ರೈ ಮಾಡಿ. ಇದರಿಂದ ನಿಮ್ಮ ಅಂದ ದುಪ್ಪಟ್ಟಾಗುವುದರಲ್ಲಿ ಅನುಮಾನವಿಲ್ಲ. 

ನೀವು ಮನೆಯಲ್ಲಿ ತಯಾರಿಸಿದ ಪಪ್ಪಾಯ ಫೇಸ್‌ಕ್ರೀಮ್‌ ಅನ್ನು ಬಳಸಬಹುದು. ಇದನ್ನು ತಯಾರಿಸುವುದು ಸುಲಭ. ಆದರೆ ಇದು ತ್ವಚೆಗೆ ತುಂಬಾ ಪರಿಣಾಮಕಾರಿ. 

ಮೊದಲನೇದಾಗಿ ಅಲೋವೆರಾ ಜೆಲ್‌ ಅನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಂಡು ಅದಕ್ಕೆ ಗ್ಲೀಸರಿನ್‌ ಸೇರಿಸಿ. ನಂತರ ವಿಟಮಿನ್‌ ಇ ಮತ್ತು ಕ್ಯಾಸ್ಟರ್‌ ಆಯಿಲ್‌ ಒಂದೆರಡು ಹನಿ ಹಾಕಿ ಮಿಶ್ರಣ ಮಾಡಿ. 

ನಂತರ ಸ್ವಲ್ಪ ಪಪ್ಪಾಯ ರಸವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದು ಕೆನೆಯಂತಾದಾಗ ಅದನ್ನು ಹಾಗೆ ಬಿಡಿ. 

ಮೃದುವಾದ ಹೊಳೆಯುವ ಚರ್ಮಕ್ಕೆ ಇದು ಬಹಳ ಉತ್ತಮ. ಇದು ಕಲೆಗಳು ಮತ್ತು ಸುಕ್ಕು ಕಡಿಮೆ ಮಾಡುತ್ತದೆ. ಇದನ್ನು ದಿನಕ್ಕೆ ಎರಡು ಬಾರಿ ಹಚ್ಚಿ.

ನಿಮ್ಮ ಮುಖಕ್ಕೆ ಈ ಕ್ರೀಮ್‌ ಹಚ್ಚುವ ಮುನ್ನ ಪ್ಯಾಚ್‌ ಪರೀಕ್ಷೆ ಮಾಡಿ. ಈ ಕ್ರೀಮ್‌ಗೆ ಬಳಸಿದ ಯಾವುದೇ ಅಂಶ ನಿಮಗೆ ಅಲರ್ಜಿಯಾಗಿದ್ದರೆ ಅಥವಾ ನೀವು ಸೂಕ್ಷ್ಮ ಚರ್ಮ ಹೊಂದಿದ್ದರೆ ಬಳಸದೇ ಇರುವುದು ಉತ್ತಮ ಅಥವಾ ತಜ್ಞರ ಸಲಹೆ ಪಡೆದು ಬಳಸಲು ಆರಂಭಿಸಿ. 

ಹೀರೋ ಕ್ಸೂಮ್ 125 ಭಾರತದ ಅತಿ ವೇಗದ ಸ್ಕೂಟರ್ ಇದು