ಕಂಗಳ ಅಂದ ಹೆಚ್ಚಿಸುವ ಕಾಡಿಗೆಯನ್ನ  ನೈಸರ್ಗಿಕ ವಿಧಾನದಲ್ಲಿ ಮನೆಯಲ್ಲೇ  ತಯಾರಿಸಿ

By Reshma
Jul 18, 2024

Hindustan Times
Kannada

ಕಾಜಲ್‌ ಅಥವಾ ಕಾಡಿಗೆ ಕಣ್ಣಿನ ಅಂದವನ್ನು ಮಾತ್ರವಲ್ಲ, ಒಟ್ಟಾರೆ ಸೌಂದರ್ಯವನ್ನು ಹೆಚ್ಚಿಸುತ್ತದೆ. ಪ್ರತಿ ಹೆಣ್ಣುಮಕ್ಕಳ ಮೇಕಪ್‌ ಕಾಜಲ್‌ ಇಲ್ಲದೇ ಪರಿಪೂರ್ಣವಾಗುವುದಿಲ್ಲ.

ಕಣ್ಣಿನ ಕಾಳಜಿಗಾಗಿ ಹೆಣ್ಣುಮಕ್ಕಳು ಅತ್ಯಂತ ದುಬಾರಿ ಕಾಜಲ್‌ ಅನ್ನು ಮಾರುಕಟ್ಟೆಯಿಂದ ಖರೀದಿಸುತ್ತಾರೆ. ಆದರೆ ನೈಸರ್ಗಿಕ ವಿಧಾನದಲ್ಲಿ ಮನೆಯಲ್ಲೇ ಕಾಡಿಗೆ ತಯಾರಿಸಬಹುದು. 

ಮನೆಯಲ್ಲೇ ತಯಾರಿಸಿದ ಕಾಜಲ್‌ ಯಾವುದೇ ಹಾನಿ ಮಾಡುವುದಿಲ್ಲ. ಜೊತೆಗೆ ಇದು ಬೋಲ್ಡ್‌ ಲುಕ್‌ ಕೂಡ ನೀಡುತ್ತದೆ. ಇದನ್ನು ತಯಾರಿಸುವುದು ಸುಲಭ. 

ನೀವು ಮನೆಯಲ್ಲೇ ಕಾಜಲ್‌ ತಯಾರಿಸಲು ಬಯಸಿದರೆ ಅದನ್ನು ಮಾಡುವ ಸರಳ ವಿಧಾನಗಳ ಬಗ್ಗೆ ತಿಳಿಯಿರಿ. 

ಮೊದಲು ಖಾಲಿ ಮಣ್ಣಿನ ಹಣತೆಗಳನ್ನು ತೆಗೆದುಕೊಳ್ಳಿ. ದೀಪಾವಳಿಗೆ ಬಳಸುವ ಹಣತೆಗಳು ಬೆಸ್ಟ್‌. 

ಸಾಸಿವೆ ಎಣ್ಣೆಯಿಂದ ಹಣತೆಯನ್ನು ತುಂಬಿಸಿ. ನಂತರ ಹತ್ತಿಯಿಂದ ದಪ್ಪ ಬತ್ತಿ ತಯಾರಿಸಿ.

ಸಾಸಿವೆ ಎಣ್ಣೆ ಹಾಗೂ ಬತ್ತಿ ಇರುವ ಹಣತೆಗೆ ಬೆಂಕಿಕಡ್ಡಿ ಗೀರಿ ದೀಪ ಬೆಳಗಿಸಿ. 

ದೀಪ ಉರಿಯಲು ಆರಂಭಿಸಿದಾಗ ಮತ್ತೊಂದು ದೀಪ, ಸಣ್ಣ ಬೌಲ್‌ ಅಥವಾ ಪ್ಲೇಟ್‌ನಿಂದ ದೀಪವನ್ನು ಮುಚ್ಚಿ ಮತ್ತು 1 ಗಂಟೆಗಳ ಕಾಲ ಅದನ್ನು ಹಾಗೇ ಬಿಡಿ.

ಒಂದು ಗಂಟೆಯ ನಂತರ ದೀಪಕ್ಕೆ ಮುಚ್ಚಿದ ಪಾತ್ರೆಯ ಮೇಲ್ಭಾಗದಲ್ಲಿ ಕಾಜಲ್‌ನ ದಪ್ಪ ಪರದವು ಸಿದ್ಧವಾಗಿರುತ್ತದೆ. ಇದನ್ನು ನೀವು ಬಾಟಲಿ ಅಥವಾ ಚಿಕ್ಕ ಪೆಟ್ಟಿಗೆಯಲ್ಲಿ ಸಂಗ್ರಹಿಸಿ ಇಡಿ.  

ನೀವು ಮೇಕಪ್‌ ಮಾಡಿಕೊಂಡಾಗಲೆಲ್ಲಾ ಈ ಕಾಜಲ್‌ ಅನ್ನು ಬೆರಳು ಅಥವಾ ಪೆನ್ಸಿಲ್‌ ಸಹಾಯದಿಂದ ಕಣ್ಣಿಗೆ ಹಚ್ಚಿಕೊಳ್ಳಬಹುದು. ಇದು ನಿಮಗೆ ಪರಿಪೂರ್ಣ ನೋಟ ಸಿಗುವಂತೆ ಮಾಡುವುದರಲ್ಲಿ ಅನುಮಾನವಿಲ್ಲ. 

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS