ಚರ್ಮದ ಆರೈಕೆಗೆ ಬಹಳಷ್ಟು ಜನರು ಕೊರಿಯನ್ ಬ್ಯೂಟಿ ಟಿಪ್ಸ್‌ಗಳನ್ನು ಹೆಚ್ಚು ಬಳಸುತ್ತಿದ್ದಾರೆ
ಅಕ್ಕಿ ನೀರಿನಿಂದ ನೀವು ಸುಲಭವಾಗಿ ಈ ಕೊರಿಯನ್ ನೈಸರ್ಗಿಕ ಸೌಂದರ್ಯ ಸಾಧನಗಳನ್ನು ತಯಾರಿಸಬಹುದು
ಟೋನರ್ ತಯಾರಿಸಲು ನಿಮಗೆ ಗುಲಾಬಿ ದಳಗಳು, ಅಕ್ಕಿ ನೀರು, ವಿಟಮಿನ್ ಇ ಕ್ಯಾಪ್ಸೂಲ್ ಬೇಕಾಗುತ್ತದೆ
ಗುಲಾಬಿ ದಳಗಳಿಗೆ ಅಕ್ಕಿ ನೀರನ್ನು ಸೇರಿಸಿ ಗ್ರೈಂಡ್ ಮಾಡಿಕೊಂಡು ಅದನ್ನು ಶೋಧಿಸಿಕೊಳ್ಳಿ
ಸಿದ್ದಪಡಿಸಿದ ಮಿಶ್ರಣಕ್ಕೆ ವಿಟಮಿನ್ ಇ ಕ್ಯಾಪ್ಸೂಲ್ ಸೇರಿಸಿ ಮಿಕ್ಸ್ ಮಾಡಿ ಸ್ಪ್ರೇ ಬಾಟಲಿಯಲ್ಲಿ ಸಂಗ್ರಹಿಸಿ
ಟೋನರನ್ನು ದಿನಕ್ಕೆ 2-3 ಬಾರಿ ಮುಖಕ್ಕೆ ಸ್ಪ್ರೇ ಮಾಡಿಕೊಳ್ಳಿ, ಇದರಿಂದ ಚರ್ಮ ಹೈಡ್ರೇಟ್ ಆಗಿರುತ್ತದೆ
ಈ ಟೋನರ್, ಚರ್ಮಕ್ಕೆ ಹೊಳಪು ನೀಡುತ್ತದೆ, ಸದಾ ನೀವು ಯಂಗ್ ಇರುವಂತೆ ಕಾಣುವಿರಿ, ಇತರ ಚರ್ಮದ ಸಮಸ್ಯೆಗಳೂ ಗುಣವಾಗುತ್ತದೆ
ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ