50ನೇ ವಯಸ್ಸಿನಲ್ಲೂ ನವ ತರುಣಿಯಂತಿರುವ ಐಶ್ವರ್ಯಾ ರೈ ಸೌಂದರ್ಯ ರಹಸ್ಯ ಇಲ್ಲಿದೆ 

By Reshma
May 18, 2024

Hindustan Times
Kannada

1994ರಲ್ಲಿ ವಿಶ್ವ ಸುಂದರಿ ಪಟ್ಟ ಗಳಿಸಿರುವ ಐಶ್ವರ್ಯ ರೈ ಬಚ್ಚನ್‌ ಅವರ ಸೌಂದರ್ಯ ಇಂದಿಗೂ ಹಾಗೇ ಉಳಿದುಕೊಂಡಿದೆ. ಅವರ ಚರ್ಮದ ಚಾರ್ಮ್‌ ಹಾಗೇ ಇರುವುದನ್ನು ನೀವೂ ಗಮನಿಸಿರಬಹುದು.

ವಿಶ್ವದ ಅತ್ಯಂತ ಸುಂದರ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಗಳಿಸಿರುವ ಐಶ್ವರ್ಯಾ ರೈ ಅವರ ಹೊಳೆಯುವ ಚರ್ಮದ ಹಿಂದಿನ ರಹಸ್ಯವನ್ನು ತಿಳಿದುಕೊಳ್ಳುವ ಆಸೆ ಪ್ರತಿ ಮಹಿಳೆಯರಿಗೂ ಇರುವುದು ಸಹಜ. 

ಐಶ್ವರ್ಯಾ ರೈ ಅವರ ತ್ವಚೆಯ ಆರೈಕೆ ಸರಳವಾಗಿರುತ್ತದೆ. ಮನೆಯಲ್ಲೇ ಸಿಗುವ ವಸ್ತುಗಳಿಂದ ಅವರು ಸೌಂದರ್ಯ ಹೆಚ್ಚಿಸಿಕೊಳ್ಳುತ್ತಾರೆ. 

ನಿರ್ಜೀವ ಕೋಶಗಳನ್ನು ತೊಡೆದು ಹಾಕಲು ಬೇಳೆಗಳ ಹಿಟ್ಟು, ಹಾಲು ಹಾಗೂ ಅರಿಸಿನದಿಂದ ಮಾಡಿದ ಫೇಸ್‌ಪ್ಯಾಕ್‌ ಅನ್ನು ಬಳಸುತ್ತಾರೆ. 

ಇದರಲ್ಲದೇ ಮೊಸರಿನಿಂದ ಮಾಡಿದ ಫೇಸ್‌ಪ್ಯಾಕ್‌ ಅನ್ನೂ ಬಳಸುತ್ತಾರೆ ಐಶ್ವರ್ಯಾ ರೈ. ಇದು ಚರ್ಮವನ್ನು ಎಕ್ಸ್‌ಪ್ಫೋಲಿಯೇಟ್‌ ಮಾಡಿ, ಚರ್ಮಕ್ಕೆ ಹೊಳಪು ನೀಡುತ್ತದೆ. 

ಚರ್ಮವನ್ನು ತೇವಾಂಶದಿಂದ ಇಡುವುದು ಬಹಳ ಮುಖ್ಯ. ಅದಕ್ಕಾಗಿ ಸೌತೆಕಾಯಿಯನ್ನು ಬಳಸುತ್ತಾರೆ. ಸೌತೆಕಾಯಿ ಚೂರು ಹಾಗೂ ರಸವನ್ನು ಮುಖಕ್ಕೆ ಹಚ್ಚಿಕೊಳ್ಳಬೇಕು. 

ನಮ್ಮ ಆಹಾರಪದ್ಧತಿಯು ಚರ್ಮದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಐಶ್ವರ್ಯಾ ರೈ ಆರೋಗ್ಯಕರ ಆಹಾರ ಸೇವನೆಗೆ ಒತ್ತು ನೀಡುತ್ತಾರೆ. 

ರಾತ್ರಿ ಮಲಗುವ ಮುನ್ನ ಸ್ವಚ್ಛವಾಗಿ ಮೇಕಪ್‌ ತೆಗೆದು ಮಲಗುವ ಐಶ್ವರ್ಯಾ ನೈಟ್‌ ಕ್ರೀಮ್‌ ಹಚ್ಚಿಕೊಳ್ಳುತ್ತಾರಂತೆ. 

ಸಂಜೆ ಮಳೆಯ ಖುಷಿ ಹೆಚ್ಚಿಸುವ ಗರಿಗರಿ ಪಕೋಡ ಹೀಗೆ ಮನೆಯಲ್ಲೇ ತಯಾರಿಸಿ ಸವಿಯಿರಿ