ಈ 2 ವಸ್ತು ಇದ್ರೆ ಚಳಿಗಾಲದಲ್ಲಿ ತುಟಿ ಒಡೆಯುತ್ತೆ ಅನ್ನೋ ಚಿಂತೆನೇ ಇರೋಲ್ಲ 

By Reshma
Nov 12, 2024

Hindustan Times
Kannada

ಚಳಿಗಾಲ ಶುರುವಾದ ಕೂಡಲೇ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಡಲು ಆರಂಭವಾಗುತ್ತದೆ. ತ್ವಚೆ ಶುಷ್ಕವಾಗಿ ಬಿರುಕು ಮೂಡುತ್ತದೆ 

ಅದರಲ್ಲೂ ತುಟಿ ತುಂಬಾ ಬಿರುಕು ಮೂಡುತ್ತದೆ. ಕೆಲವೊಮ್ಮೆ ತುಟಿ ಒಡೆದ ರಕ್ತ ಬರಲು ಆರಂಭವಾಗುತ್ತದೆ. ಈ ಸಮಸ್ಯೆಗೆ ಮನೆಮದ್ದುಗಳಿಂದಲೇ ಪರಿಹಾರ ಕಂಡುಕೊಳ್ಳಬಹುದು

ಚಳಿಗಾಲದಲ್ಲಿ ತುಟಿ ಒಡೆಯುವ ಸಮಸ್ಯೆ ನಿವಾರಣೆಗೆ ಕೇವಲ ಎರಡು ವಸ್ತುಗಳಿದ್ದರೆ ಸಾಕು 

ಒಂದು ಬಟ್ಟಲಿನಲ್ಲಿ ತುಪ್ಪವನ್ನು ತೆಗೆದುಕೊಂಡು ಅದಕ್ಕೆ ಅರ್ಧ ಚಮಚ ಅರಿಸಿನ ಸೇರಿಸಿ 

ಇದನ್ನು ಪ್ರತಿದಿನ ತುಟಿಗಳಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ಕೆಲವೇ ದಿನಗಳಲ್ಲಿ ನೀವು ತುಟಿಗಳಲ್ಲಿ ವ್ಯತ್ಯಾಸ ಕಾಣುತ್ತಿರಿ. ಇದನ್ನು ದಿನದಲ್ಲಿ ಮೂರ್ನ್ಕಾಲು ಬಾರಿಯೂ ಹಚ್ಚಬಹುದು

ತುಟಿಗಳ ಚರ್ಮ ಮೃದುವಾಗಿರುತ್ತದೆ. ಹಾಗಾಗಿ ತುಪ್ಪವನ್ನು ಹಚ್ಚುವುದರಿಂದ ತುಟಿಗಳಿಗೆ ಪೋಷಣೆ ಸಿಗುತ್ತದೆ 

ಅರಿಸಿನದ ನಂಜು ನಿರೋಧಕ ಗುಣಗಳು ತುಟಿಗಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಇದು ಪಿಗ್ಮಂಟೇಷನ್ ಕಡಿಮೆ ಮಾಡಿ ತುಟಿಗಳ ಕೆಂಪಾಗಿ ಹೊಳೆಯುವಂತೆ ಮಾಡುತ್ತದೆ 

ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನವನ್ನು ಆಧರಿಸಿದ್ದು, ಈ ಕುರಿತ ಹೆಚ್ಚಿನ ಮಾಹಿತಿಗೆ ತಜ್ಞರನ್ನು ಸಂಪರ್ಕಿಸುವುದು ಉತ್ತಮ 

ಭಾರತದ ದೇಸಿ ತಳಿ ರಾಸುಗಳ ಬಗ್ಗೆ ಗೊತ್ತೆ ಇದು ಮಹಾರಾಷ್ಟ್ರದ ಲಾಲ್‌ ಕಠಾರಿ