ಮುಖ ಸದಾ ಕನ್ನಡಿಯಂತೆ ಹೊಳೆಯುತ್ತಿರಬೇಕಾ, ಪ್ರತಿದಿನ ಈ ಮ್ಯಾಜಿಕ್ ಜ್ಯೂಸ್ ಕುಡಿಯಿರಿ 

By Reshma
Oct 01, 2024

Hindustan Times
Kannada

ನವತರುಣಿಯಂತಹ ಹೊಳೆಯುವ ತ್ವಚೆ ಯಾರಿಗೆ ಇಷ್ಟವಿಲ್ಲ ಹೇಳಿ, ಮುಖದ ಅಂದ ಹೆಚ್ಚಿಸಿಕೊಳ್ಳಲು ನಾವು ಹಲವಾರು ವಿಧಾನಗಳನ್ನು ಅನುಸರಿಸುತ್ತೇವೆ

ಅದರಲ್ಲೂ ಮಹಿಳೆಯರು ತ್ವಚೆಯ ಅಂದ ಹೆಚ್ಚಿಸಿಕೊಳ್ಳಲು ಸಾಕಷ್ಟು ಹಣ ಖರ್ಚು ಮಾಡುತ್ತಾರೆ. ಆದರೆ ತಾವು ಸೇವಿಸುವ ಆಹಾರದ ಬಗ್ಗೆ ಗಮನ ಹರಿಸುವುದಿಲ್ಲ. 

ನೀವು ಸದಾ ಹೊಳೆಯುವ ಕಲೆಗಳಿಲ್ಲದ ಸುಂದರ ತ್ವಚೆಯನ್ನು ಬಯಸುತ್ತಿದ್ದರೆ ಈ ಮ್ಯಾಜಿಕ್ ಪಾನೀಯವನ್ನು ಕುಡಿಯಬಹುದು. ಇದು ತ್ವಚೆಗೆ ತುಂಬಾ ಪ್ರಯೋಜನಕಾರಿ. ಇದನ್ನು ತಯಾರಿಸುವುದು ಸುಲಭ 

ಏನಿದು ಮ್ಯಾಜಿಕ್ ಜ್ಯೂಸ್ ಅಂತ ಯೋಚಿಸ್ತಾ ಇದೀರಾ, ಅದುವೇ ಬೀಟ್‌ರೂಟ್ ಪಾನೀಯ. ಇದನ್ನು ಪ್ರತಿದಿನ ಕುಡಿಯುವುದರಿಂದ ತ್ವಚೆಗೆ ಸಾಕಷ್ಟು ಪ್ರಯೋಜನಗಳಿವೆ 

ಬೀಟ್ರೂಟ್‌ನಲ್ಲಿ ಲೈಕೋಪಿನ್ ಮತ್ತು ಸ್ಕ್ವಾಲೆನ್‌ ಅಂಶವಿದೆ. ಇದರ ರಸವನ್ನು ಪ್ರತಿದಿನ ಕುಡಿಯುವುದರಿಂದ ಸುಕ್ಕುಗಳನ್ನು ತಡೆಯಬಹುದು 

ಪ್ರತಿದಿನ ಒಂದು ಲೋಟ ಬೀಟ್‌ರೂಟ್ ರಸ ಸೇವಿಸುವುದರಿಂದ ಚರ್ಮಕ್ಕೆ ದೃಢತೆ ಹಾಗೂ ಹೊಳಪು ಸಿಗುತ್ತದೆ. ಇದರಿಂದ ಚರ್ಮವು ಟೊಮೆಟೊದಂತೆ ಕೆಂಪು ಬಣ್ಣಕ್ಕೆ ತಿರುಗುತ್ತದೆ 

ಬೀಟ್ರೂಟ್ ಚರ್ಮವನ್ನು ತೇವಾಂಶದಿಂದ ಇಡಲು ಸಹಾಯ ಮಾಡುತ್ತದೆ. ಈ ಕಾರಣದಿಂದಾಗಿ ಚರ್ಮದ ಜೊತೆಗೆ ದೇಹವು ತೇವಾಂಶದಿಂದ ಕೂಡಿರುತ್ತದೆ 

ಬೀಟ್ರೂಟ್ ಜ್ಯೂಸ್ ಅನ್ನು ಪ್ರತಿದಿನ ಕುಡಿಯುವುದರಿಂದ ಮೊಡವೆ ಹಾಗೂ ಕಲೆಗಳಿಂದ ಪರಿಹಾರ ಸಿಗುತ್ತದೆ. ಚರ್ಮವು ಆಳದಿಂದಲೇ ಶುದ್ಧವಾಗಿದ್ದರೆ ಮೊಡವೆಗಳಾಗುವುದಿಲ್ಲ 

ಬೀಟ್ರೂಟ್‌ ಜ್ಯೂಸ್ ಮಾಡುವ ವಿಧಾನ: ಬೀಟ್ರೂಟ್ ಅನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆಯಿರಿ. ಇದನ್ನು ತುಂಡುಗಳಾಗಿ ಕತ್ತರಿಸಿ ಮಿಕ್ಸಿ ನೀರು ಸೇರಿಸಿ ರುಬ್ಬಿಕೊಳ್ಳಿ 

ಈ ಜ್ಯೂಸ್ ಅಥವಾ ಬೆಳಿಗ್ಗೆ ಅಥವಾ ಮಧ್ಯಾಹ್ನದ ಹೊತ್ತು ಸೇವಿಸಬೇಕು. ರಾತ್ರಿ ವೇಳೆ ಕುಡಿಯುವುದು ಒಳಿತಲ್ಲ 

ಜೈಪುರ ಪಿಂಕ್ ಪ್ಯಾಂಥರ್ಸ್​ಗೆ ನೂತನ ನಾಯಕ ಘೋಷಣೆ