ಹಾಲಿನಂಥ ಬಿಳುಪಿನ, ಸುಂದರ ತ್ವಚೆ ನಿಮ್ಮದಾಗಲು ಬಳಸಿ ಮಿಲ್ಕ್‌ ಪೌಡರ್‌ ಫೇಸ್‌ಪ್ಯಾಕ್‌

By Reshma
Jul 10, 2024

Hindustan Times
Kannada

ಪ್ರತಿಯೊಬ್ಬರಿಗೂ ಅಂದದ, ಬಿಳುಪಿನ ಸ್ವಚ್ಛ ತ್ವಚೆ ತಮ್ಮದಾಗಿರಬೇಕು ಎಂಬ ಬಯಕೆ ಇರುವುದು ಸಹಜ. ಆದರೆ ಶಾಶ್ವತವಾಗಿ ತ್ವಚೆಯ ಅಂದವನ್ನು ಕಾಪಾಡಿಕೊಳ್ಳುವುದು ಕಷ್ಟ. 

ಅದಕ್ಕಾಗಿ ದುಬಾರಿ ಕ್ರೀಮ್‌ಗಳನ್ನು ಬಳಸುವ ಬದಲು ಮನೆಯಲ್ಲೇ ಇರುವ ವಸ್ತುಗಳಿಂದ ಫೇಸ್‌ಪ್ಯಾಕ್‌ ತಯಾರಿಸಿ ಅಂದ ಹೆಚ್ಚಿಸಿಕೊಳ್ಳಬಹುದು. 

ಹಾಲಿನಂತೆ ಸ್ವಚ್ಛ ಹಾಗೂ ಬಿಳುಪಿನ ತ್ವಚೆ ನಿಮ್ಮದಾಗಲು ಹಾಲಿನ ಪುಡಿ ಫೇಸ್‌ಪ್ಯಾಕ್‌ ತಯಾರಿಸಿ ಬಳಸಬಹುದು. ಇದನ್ನು ಮುಖಕ್ಕೆ ಹಚ್ಚುವುದರಿಂದ ಅಂದ ಹೆಚ್ಚುತ್ತದೆ. 

ಈ ಫೇಸ್‌ಪ್ಯಾಕ್‌ ತಯಾರಿಸಲು ಹಾಲಿನ ಪುಡಿ, ಜೇನುತುಪ್ಪ, ಬಾಳೆಹಣ್ಣು, ಅಕ್ಕಿಹಿಟ್ಟು ಹಾಗೂ ಹಾಲು ಬೇಕಾಗುತ್ತದೆ.

ಮೊದಲು ಬಾಳೆಹಣ್ಣು ಸ್ಮ್ಯಾಶ್‌ ಮಾಡಿ. ಅದಕ್ಕೆ ಹಾಲಿನಪುಡಿ, ಅಕ್ಕಿಹಿಟ್ಟು, ಜೇನುತುಪ್ಪ ಮಿಶ್ರಣ ಮಾಡಿ. ಇದು ಪೇಸ್ಟ್‌ ರೂಪಕ್ಕೆ ಬರಲು ಸ್ವಲ್ಪ ಹಾಲು ಸೇರಿಸಿ. 

ಇದನ್ನು ಮುಖ ಹಾಗೂ ಕುತ್ತಿಗೆಯ ಭಾಗಕ್ಕೆ ಹಚ್ಚಿ ಸ್ವಚ್ಛ ಸಮಯದ ನಂತರ ತೊಳೆಯಿರಿ. 

ಈ ಫೇಸ್‌ಪ್ಯಾಕ್‌ಗೆ ಬಳಸುವ ಎಲ್ಲಾ ವಸ್ತುಗಳು ತ್ವಚೆಗೆ ಬಹಳ ಉತ್ತಮ. ಇದು ಡೆಡ್‌ ಸ್ಕಿನ್‌ ಅನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ಇದರಿಂದ ಹೊಳಪಿನಿಂದ ಕೂಡಿದ ಸ್ವಚ್ಛ ತ್ವಚೆ ನಿಮ್ಮದಾಗುತ್ತದೆ. 

ಆದರೆ ಈ ಫೇಸ್‌ಪ್ಯಾಕ್‌ ಹಚ್ಚುವ ಮುನ್ನ ತ್ವಚೆಯ ಪ್ಯಾಚ್‌ ಪರೀಕ್ಷೆ ಮಾಡಿ. ನಿಮ್ಮ ಚರ್ಮದಲ್ಲಿ ಯಾವುದಾದ್ರೂ ಅಲರ್ಜಿ ಇದ್ರೆ ಇದನ್ನು ಬಳಸುವ ಮುನ್ನ ತಜ್ಞರನ್ನು ಸಂಪರ್ಕಿಸುವುದು ಉತ್ತಮ. 

ಓದುವ ಗ್ರಹಿಕೆ ಸುಧಾರಿಸಲು ಸಪ್ತಸೂತ್ರಗಳಿವು

Pinterest