ಮಿಲ್ಕಿ ಸ್ಕಿನ್ ಫೇಸ್‌ಪ್ಯಾಕ್‌ನಲ್ಲಿದೆ ಹಾಲಿನಂತೆ ಹೊಳೆಯುವ ತ್ವಚೆಯ ರಹಸ್ಯ, ಬಳಸಿ ನೋಡಿ
By Reshma Aug 11, 2024
Hindustan Times Kannada
ಪ್ರತಿಯೊಬ್ಬರು ಸುಂದರ ಹಾಗೂ ಹೊಳೆಯುವ ತ್ವಚೆ ತಮ್ಮದಾಗಬೇಕು ಎಂದು ಬಯಸುವುದು ಸಹಜ. ಆದರೆ ಅಂತಹ ತ್ವಚೆಯನ್ನು ಕಾಪಾಡಿಕೊಳ್ಳುವುದು ಕಷ್ಟ.
ಹೊಳೆಯುವ, ಹಾಲಿನಂಥ ಬಿಳುಪಿನ ತ್ವಚೆ ತಮ್ಮದಾಗಬೇಕು ಎಂದು ಹಲವರು ಹಲವು ಪ್ರಯತ್ನ ಮಾಡುತ್ತಾರೆ. ಆದರೆ ಅದು ಸಾಧ್ಯವಾಗುವುದಿಲ್ಲ.
ಆದರೆ ಈ ರಹಸ್ಯ ಫೇಸ್‌ಪ್ಯಾಕ್ ಬಳಸಿದ್ರೆ ಹಾಲಿನಂತೆ ಹೊಳೆಯುವ ಚರ್ಮ ನಿಮ್ಮದಾಗುವುದರಲ್ಲಿ ಸಂಶಯವಿಲ್ಲ. ಈ ಮಿಲ್ಕಿ ಸ್ಕಿನ್ ಫೇಸ್‌ಪ್ಯಾಕ್ ಇತ್ತೀಚೆಗೆ ಬಾರಿ ವೈರಲ್ ಆಗುತ್ತಿದೆ.
ಈ ಫೇಸ್‌ಪ್ಯಾಕ್ ತಯಾರಿಸಲು ಅಕ್ಕಿಹಿಟ್ಟು, ಜೇನುತುಪ್ಪ ಮತ್ತು ಹಾಲು ಬೇಕಾಗುತ್ತದೆ.
ಈ ಮೂರನ್ನು ಮಿಶ್ರಣ ಮಾಡಿ ದಪ್ಪ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ, ಮೃದುವಾಗಿ ಮಸಾಜ್ ಮಾಡಿ.
ಇದರಲ್ಲಿರುವ ಪ್ರತಿ ಅಂಶವು ಚರ್ಮಕ್ಕೆ ತುಂಬಾ ಉತ್ತಮ. ಇದರ ಬಳಕೆಯಿಂದ ಸ್ವಚ್ಛ ಹೊಳಪಿನ ತ್ವಚೆ ನಮ್ಮದಾಗುತ್ತದೆ.
ಅಕ್ಕಿಹಿಟ್ಟು ಟ್ಯಾನಿಂಗ್ ಕಡಿಮೆ ಮಾಡುತ್ತದೆ. ವಯಸ್ಸಾದಂತೆ ಲಕ್ಷಣಗಳನ್ನು ಇದು ಕಡಿಮೆ ಮಾಡುತ್ತದೆ. ಜೇನುತುಪ್ಪವು ಚರ್ಮಕ್ಕೆ ತೇವಾಂಶ ಒದಗಿಸುತ್ತದೆ. ಹಾಲು ಚರ್ಮವನ್ನು ಎಕ್ಸ್‌ಫೋಲಿಯೇಟ್ ಮಾಡುತ್ತದೆ.
ಈ ಫೇಸ್‌ಪ್ಯಾಕ್‌ನ ಅಡ್ಡಪರಿಣಾಮಗಳು ಕಡಿಮೆಯಾದರೂ ನಿಮ್ಮದು ಸೂಕ್ಷ್ಮ ಚರ್ಮವಾಗಿದ್ದರೆ ಇದನ್ನು ಬಳಸುವ ಮುನ್ನ ತಜ್ಞರನ್ನು ಸಂಪರ್ಕಿಸಿ.
ಖಾಲಿ ಹೊಟ್ಟೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಸೇವಿಸುವುದರಿಂದ ಆಗುವ ಲಾಭಗಳು