ಸೂಕ್ಷ್ಮ ಚರ್ಮದವರ ಅಂದ ಹೆಚ್ಚಿಸುವ ನೈಸರ್ಗಿಕ ಟೋನರ್‌ಗಳಿವು 

By Reshma
May 24, 2024

Hindustan Times
Kannada

ಬೇಸಿಗೆ ಕಾಲ ಎಂದಾಕ್ಷಣ ತ್ವಚೆ ಅಂದಗೆಡುವುದು ಸಾಮಾನ್ಯ, ಅದರಲ್ಲೂ ಸೂಕ್ಷ್ಮ ಚರ್ಮ ಎಂದರೆ ಇನ್ನಷ್ಟು ಕಾಳಜಿ ವಹಿಸಬೇಕು.

ಸೂಕ್ಷ್ಮ ಚರ್ಮದವರಿಗೆ ಬೇಸಿಗೆಯಲ್ಲಿ ತುರಿಕೆ, ಅಲರ್ಜಿ, ದದ್ದು ಇತ್ಯಾದಿ ಸಮಸ್ಯೆಗಳಾಗುವುದು ಸಹಜ. ಅಂತಹ ಸಮಯದಲ್ಲಿ ತ್ವಚೆಯ ಬಗ್ಗೆ ಸಾಕಷ್ಟು ಕಾಳಜಿ ವಹಿಸಬೇಕಾಗುತ್ತದೆ. 

ಸೂಕ್ಷ್ಮ ಚರ್ಮದವರು ಸಿಟಿಎಂ ಸೂತ್ರ ಬಳಸಬೇಕು. ಅಂದರೆ ಕ್ಲೆನ್ಸಿಂಗ್‌, ಟೋನಿಂಗ್‌ ಮತ್ತು ಮಾಯಿಶ್ಚರೈಸಿಂಗ್‌. 

ಚರ್ಮವನ್ನು ಟೋನಿಂಗ್‌ ಮಾಡುವುದು ಬಹಳ ಮುಖ್ಯ. ಅದಕ್ಕಾಗಿ ನೀವು ಮನೆಯಲ್ಲೇ ನಿಮ್ಮ ಚರ್ಮಕ್ಕಾಗಿ ಟೋನರ್‌ ಅನ್ನು ತಯಾರಿಸಬಹುದು. ಇದು ಸೂಕ್ಷ್ಮ ಚರ್ಮಕ್ಕೆ ಯಾವುದೇ ಹಾನಿ ಮಾಡುವುದಿಲ್ಲ. 

ಸೌತೆಕಾಯಿ ಟೋನರ್‌: ಸೌತೆಕಾಯಿಯನ್ನು ತುರಿದು ಅದರ ರಸ ತೆಗೆಯಿರಿ. ಅದಕ್ಕೆ ತಾಜಾ ಅಲೋವೆರಾ ಜೆಲ್‌ ಮಿಶ್ರಣ ಮಾಡಿ. ಇದು ಬೆಸ್ಟ್‌ ನೈಸರ್ಗಿಕ ಟೋನರ್‌. 

ಬಳಕೆ ಹೇಗೆ: ಮುಖವನ್ನು ಚೆನ್ನಾಗಿ ಸ್ವಚ್ಛ ಮಾಡಿದ ನಂತರ ಈ ಟೋನರ್‌ ಅನ್ನು ಮುಖಕ್ಕೆ ಹಚ್ಚಿ ಮೃದುವಾಗಿ ಮಸಾಜ್‌ ಮಾಡಿ. ದಿನಕ್ಕೆ ಎರಡು ಬಾರಿ ಈ ಟೋನರ್‌ ಬಳಸಬಹುದು. 

ಆಲೊವೆರಾ ಜೆಲ್‌ ಟೋನರ್‌: ಅರ್ಧ ಕಪ್‌ ಅಲೋವೆರಾ ಜೆಲ್‌ಗೆ ಸ್ವಲ್ಪ ರೋಸ್‌ ವಾಟರ್‌ ಮಿಶ್ರಣ ಮಾಡಿ. ಇದನ್ನು ಗಾಳಿಯಾಡದ ಸ್ಪ್ರೇ ಬಾಟಲ್‌ನಲ್ಲಿ ಸಂಗ್ರಹಿಸಿ ಇಡಿ. 

ದಿನಕ್ಕೆ ಎರಡು ಬಾರಿ ಈ ಸ್ಪ್ರೇಯನ್ನು ಮುಖಕ್ಕೆ ಹಚ್ಚಿ. ಇದು ನಿಮ್ಮ ಚರ್ಮಕ್ಕೆ ತಾಜಾತನ ನೀಡುತ್ತದೆ. 

ಒಂದು ಚಮಚ ವೆಜಿಟೇಬಲ್‌ ಗ್ಲಿಸರಿನ್‌, ಅರ್ಧ ಕಪ್‌ ರೋಸ್‌ ವಾಟರ್‌ ಹಾಗೂ ಕೆಲವು ಹನಿ ರೋಸ್ಮರಿ ಎಣ್ಣೆಯನ್ನು ಚೆನ್ನಾಗಿ ಮಿಶ್ರಣ ಮಾಡಿ. 

ಈ ಟೋನರ್‌ ಅನ್ನು ಗಾಳಿಯಾಡದ ಬಾಟಲಿಯಲ್ಲಿ ಸಂಗ್ರಹಿಸಿ. ಹತ್ತಿ ಸಹಾಯದಿಂದ ದಿನಕ್ಕೆ ಎರಡು ಬಾರಿ ಇದನ್ನು ಮುಖಕ್ಕೆ ಹಚ್ಚಿ.    

ಬಾಳೆಹೊನ್ನೂರು ರಂಭಾಪುರಿ ಸ್ವಾಮೀಜಿಗಳ ಇಷ್ಟಲಿಂಗಪೂಜೆ