ಈ 2 ರೀತಿಯ ರಾಗಿಹಿಟ್ಟಿನ ಫೇಸ್‌ಪ್ಯಾಕ್‌ನಿಂದ ನಿಮ್ಮ ಚರ್ಮ ಎಲ್ಲಾ ಕಾಲದಲ್ಲೂ ಹೊಳೆಯುತ್ತದೆ
By Rakshitha Sowmya
Jun 07, 2024
Hindustan Times
Kannada
ರಾಗಿ ಆರೋಗ್ಯಕ್ಕೆ ಬಹಳ ಒಳ್ಳೆಯದು, ಇದನ್ನು ಸೇವಿಸುವುದರಿಂದ ಪ್ರೋಟೀನ್, ಫೈಬರ್ ಸೇರಿದಂತೆ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳು ದೊರೆಯುತ್ತದೆ
ಈ ಪೋಷಕಾಂಶಗಳಿಂದ ಜೀರ್ಣಕ್ರಿಯೆ ಹಾಗೂ ಚರ್ಮದ ಆರೋಗ್ಯ ಎರಡಕ್ಕೂ ಬಹಳ ಒಳ್ಳೆಯದು
ರಾಗಿಹಿಟ್ಟನ್ನು ಬಳಸಿ ಮನೆಯಲ್ಲೇ ಸುಲಭವಾಗಿ ಫೇಸ್ ಪ್ಯಾಕ್ ತಯಾರಿಸಬಹುದು, ತಯಾರಿಸುವ ವಿಧಾನ ಹೀಗಿದೆ
2 ಚಮಚ ರಾಗಿಹಿಟ್ಟನ್ನು ಶುದ್ಧವಾದ ಬಟ್ಟೆಯಲ್ಲಿ ಶೋಧಿಸಿಕೊಳ್ಳಿ, ಹೀಗೆ ಮಾಡುವುದರಿಂದ ಹೊಟ್ಟು ಬಿಡುತ್ತದೆ, ನಂತರ ಇದಕ್ಕೆ ಹಸಿ ಹಾಲು ಬೆರೆಸಿ
ರಾಗಿಹಿಟ್ಟು, ಹಸಿ ಹಾಲು ಎರಡನ್ನೂ ಚೆನ್ನಾಗಿ ಮಿಕ್ಸ್ ಮಾಡಿ ಕುತ್ತಿಗೆ ಹಾಗೂ ಮುಖಕ್ಕೆ ಹಚ್ಚಿ
20 ನಿಮಿಷಗಳ ನಂತರ ಮುಖ ತೊಳೆದರೆ ಮುಖ ಹೊಳೆಯುವುದನ್ನು ನೀವು ಗಮನಿಸಬಹುದು
ಶೋಧಿಸಿಕೊಂಡ ರಾಗಿಹಿಟ್ಟಿಗೆ ತಾಜಾ ಅಲೊವೆರಾ ಜೆಲ್ ಸೇರಿಸಿ ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ
ಕುತ್ತಿಗೆ, ಮುಖಕ್ಕೆ ಈ ಪೇಸ್ಟ್ ಲೇಪಿಸಿ ಸುಮಾರು 20 ನಿಮಿಷ ಬಿಡಿ
ನಿಧಾನವಾಗಿ ಮಸಾಜ್ ಮಾಡುತ್ತಾ ಮುಖ ತೊಳೆಯಿರಿ, ರಾಗಿ ಹಾಗೂ ಅಲೊವೆರಾ ಮುಖದ ಕೊಳೆಯನ್ನು ಸ್ವಚ್ಛಗೊಳಿಸುತ್ತದೆ, ಟ್ಯಾನಿಂಗ್ ಕಡಿಮೆ ಮಾಡುತ್ತದೆ
ರಾಗಿ ಫೇಸ್ ಪ್ಯಾಕ್‌ನಿಂದ ಚರ್ಮಕ್ಕೆ ಯಾವುದೇ ಹಾನಿಯಾಗುವುದಿಲ್ಲ, ಆದರೆ ಸೂಕ್ಷ್ಮ ಚರ್ಮ ಹೊಂದಿರುವವರು ಬಳಸುವ ಮುನ್ನ ಒಮ್ಮೆ ಪ್ಯಾಚ್ ಟೆಸ್ಟ್ ಮಾಡಿ
ಅಮೆರಿಕ ನೂತನ ಅಧ್ಯಕ್ಷ ಟ್ರಂಪ್ಗೆ ಸಿಗುವ ವೇತನ, ಸೌಲಭ್ಯಗಳೇನು?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ