ಕಂಕುಳ ಕಪ್ಪು ನಿವಾರಣೆಗೆ ಇಲ್ಲಿದೆ ಪರಿಣಾಮಕಾರಿ ಮನೆಮದ್ದು

By Reshma
Jan 31, 2025

Hindustan Times
Kannada

ಕಂಕುಳ ಕಪ್ಪಿನ ಕಾರಣದಿಂದ ಸಾಕಷ್ಟು ಮುಜುಗರ ಎದುರಿಸಬೇಕಾಗುತ್ತದೆ. ಇದರಿಂದ ಸ್ಲೀವ್‌ಲೆಸ್ ಡ್ರೆಸ್ ಹಾಕುವುದು ಕಷ್ಟವಾಗುತ್ತದೆ 

ಹಾರ್ಮೋನ್‌ಗಳಲ್ಲಿನ ಬದಲಾವಣೆ, ಅತಿಯಾದ ಡಿಯೋಡ್ರೆಂಟ್ ಬಳಕೆ, ಹೇರ್ ರಿಮೂವಲ್ ಕ್ರೀಮ್‌ಗಳ ಬಳಕೆಯು ಕಂಕುಳ ಕಪ್ಪಿಗೆ ಕಾರಣವಾಗಬಹುದು

ಈ ಸಮಸ್ಯೆ ನಿವಾರಣೆಗೆ ನೆರವಾಗುವ ಸರಳ ಹಾಗೂ ಪರಿಣಾಮಕಾರಿ ಮನೆಮದ್ದಿನ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ 

ಅಲೋವೆರಾ ಜೆಲ್ ತೆಗೆದುಕೊಂಡು ಅದರಲ್ಲಿ ಕಾಫಿ ಪುಡಿ ಮಿಶ್ರಣ ಮಾಡಿ 

ಈ ಮಿಶ್ರಣಕ್ಕೆ ಅಕ್ಕಿಹಿಟ್ಟು, ಜೇನುತುಪ್ಪ ಸೇರಿಸಿ ನಯವಾದ ಪೇಸ್ಟ್ ಮಾಡಿ, ನಂತರ ಇದನ್ನು ಕಂಕುಳಿಗೆ ಹಚ್ಚಿ ಕೆಲ ನಿಮಿಷಗಳ ಕಾಲ ಮಸಾಜ್ ಮಾಡಿ 

ಇದು ಪೇಸ್ಟ್ ಕಂಕುಳಿನ ಪಿಗ್ಮಂಟೇಷನ್ ಅನ್ನು ಕಡಿಮೆ ಮಾಡುತ್ತದೆ. ಇದು ಚರ್ಮದ ಕಿರಿಕಿರಿಯನ್ನು ನಿವಾರಿಸುತ್ತದೆ 

ಉತ್ತಮ ಪರಿಣಾಮಕಾರಿಯಾಗಿರುವ ಈ ಪೇಸ್ಟ್ ಅನ್ನು ವಾರದಲ್ಲಿ 3 ರಿಂದ 4 ಬಾರಿ ಹಚ್ಚಬೇಕು 

ಈ ಮಾಹಿತಿಯು ಸಾಮಾನ್ಯಜ್ಞಾನವನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ  ಚರ್ಮರೋಗ ತಜ್ಞರನ್ನು ಸಂಪರ್ಕಿಸಿ 

ಕೇಂದ್ರ ಬಜೆಟ್‌ 2025: ಹಿಂದಿನ ಬಜೆಟ್‌ ದಿನಗಳಲ್ಲಿ  ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಉಟ್ಟ ಸೀರೆಗಳು

Photo Credits: PTI