ಅಕ್ಕಿ ನೀರು ಅಂದ ಹೆಚ್ಚಿಸೋದಷ್ಟೇ ಅಲ್ಲ ಈ ಅಡ್ಡಪರಿಣಾಮಗಳನ್ನು ಉಂಟು ಮಾಡಬಹುದು ಎಚ್ಚರ 

By Reshma
Aug 26, 2024

Hindustan Times
Kannada

ಇತ್ತೀಚಿನ ದಿನಗಳಲ್ಲಿ ಕೊರಿಯನ್ ಬ್ಯೂಟಿ ಟ್ರೆಂಡ್ ಫಾಲೋ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲಿ ಅಕ್ಕಿ ನೀರಿನ ಬಳಕೆಯೂ ಒಂದು

ಕೊರಿಯನ್ ಸ್ಕಿನ್ ಕೇರ್‌ನಲ್ಲಿ  ಅಕ್ಕಿ ಪ್ರಮುಖ ಪಾತ್ರ ವಹಿಸುತ್ತದೆ. ಗಾಜಿನಂತೆ ಹೊಳೆಯುವ ತ್ವಚೆ ರಹಸ್ಯ ಅಕ್ಕಿನೀರಿನಲ್ಲಿದೆ 

ಅಕ್ಕಿನೀರು ವಯಸ್ಸಾದ ವಿರೋಧಿ ಗುಣಗಳನ್ನು ಹೊಂದಿದೆ. ಇದು ಚರ್ಮಕ್ಕೆ ಹೊಳಪು ನೀಡುತ್ತದೆ. ಆದರೆ ಇದರ ಅತಿಯಾದ ಬಳಕೆಯಿಂದ ಹಾನಿಯಾಗುವುದು ಸುಳ್ಳಲ್ಲ 

ಅಕ್ಕಿ ನೀರು ತ್ಚಚೆಗೆ ಅತಿಯಾಗಿ ಬಳಸುವುದರಿಂದ ಚರ್ಮ ಒಣಗಬಹುದು 

ಸೂಕ್ಷ್ಮ ಚರ್ಮ ಹೊಂದಿರುವವರು ಅಲರ್ಜಿ, ತುರಿಕೆ, ಕೆಂಪಾಗುವುದು ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ 

ಅಕ್ಕಿ ನೀರನ್ನು ಪದೇ ಪದೇ ಮುಖಕ್ಕೆ ಹಚ್ಚುವುದರಿಂದ ಅದು ಚರ್ಮದ ಮೇಲೆ ಪದರ ರಚಿಸಬಹುದು. ಇದರಿಂದ ಚರ್ಮದ ರಂಧ್ರಗಳು ಮುಚ್ಚಿಕೊಳ್ಳುತ್ತವೆ. ಇದರಿಂದ ಮೊಡವೆಯಾಗುವ ಸಾಧ್ಯತೆ ಹೆಚ್ಚು 

ನೀವು ತ್ವಚೆಗೆ ಅಕ್ಕಿನೀರು ಬಳಸುತ್ತಿದ್ದರೆ ವಾರದಲ್ಲಿ ಒಂದೆರಡು ಬಾರಿ ಮಾತ್ರ ಹಚ್ಚಿ. ನಂತರ ಮುಖವನ್ನು ಚೆನ್ನಾಗಿ ಸ್ವಚ್ಛ ಮಾಡಿ 

ಈ ಸುದ್ದಿಯು ಸಾಮಾನ್ಯಜ್ಞಾನವನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗೆ ತಜ್ಞರನ್ನು ಸಂಪರ್ಕಿಸಿ 

ಗರ್ಭಿಣಿಯರು ಅವಶ್ಯವಾಗಿ ಸೇವಿಸಬೇಕಾದ ಆಹಾರಗಳಿವು