ಚರ್ಮದ ಸುಕ್ಕು, ನೆರಿಗೆ ನಿವಾರಿಸಿ ಅಂದ ಹೆಚ್ಚಿಸುವ ಹೋಮ್‌ಮೇಡ್‌ ಸೀರಮ್‌

By Reshma
Jun 24, 2024

Hindustan Times
Kannada

ಚರ್ಮದಲ್ಲಿ ಮೂಡುವ ಸುಕ್ಕು, ನೆರಿಗೆ ಅಂದ ಕೆಡಿಸುವುದು ಖಂಡಿತ. ಕೆಲವೊಮ್ಮೆ ವಯಸ್ಸಾಗದೇ ಇದ್ದರೂ ಈ ಲಕ್ಷಣಗಳು ಕಾಣಿಸುತ್ತವೆ. 

ಹಲವು ಮಹಿಳೆಯರು ಈ ಸಮಸ್ಯೆಯಿಂದ ಬಳಲುತ್ತಾರೆ. ಇದರಿಂದ ಅವರಿಗೂ ನೆಮ್ಮದಿ ಕೆಡುತ್ತದೆ. ವಯಸ್ಸಿಗೂ ಮೊದಲೇ ಕಾಣಿಸುವ ಸುಕ್ಕು, ನೆರಿಗೆ ನಿವಾರಣೆಗೆ ಮನೆಯಲ್ಲೂ ತಯಾರಿಸಬಹುದು ಸೀರಮ್‌. 

ಮಾರುಕಟ್ಟೆಯಲ್ಲಿ ಹಲವು ಸೀರಮ್‌ಗಳು ಲಭ್ಯವಿದ್ದರೂ ಮನೆಯಲ್ಲೇ ಸುಲಭವಾಗಿ ಆಂಟಿ ಏಜಿಂಗ್‌ ಸೀರಮ್‌ ತಯಾರಿಸಬಹುದು.

ಈ ಸೀರಮ್‌ ತಯಾರಿಸಲು ಆಲೊವೆರಾ ಜೆಲ್‌, ಗ್ಲೀಸರಿನ್‌, ಅಕ್ಕಿನೀರು ಮತ್ತು ವಿಟಮಿನ್‌ ಇ ಕ್ಯಾಪ್ಸೂಲ್‌ಗಳ ಅಗತ್ಯವಿರುತ್ತದೆ. 

ಮೊದಲು ಎರಡರಿಂದ ಮೂರು ಚಮಚ ಅಕ್ಕಿಯನ್ನು ರಾತ್ರಿಯಿಡಿ ನೆನೆಸಿಡಿ ಮತ್ತು ಬೆಳಿಗ್ಗೆ ಆ ನೀರನ್ನು ಬೇರ್ಪಡಿಸಿ. 

ಈಗ ಒಂದು ಬಟ್ಟಲಿನಲ್ಲಿ ಆಲೋವೆರಾ ಜೆಲ್‌ ತೆಗೆದುಕೊಂಡು ಅದಕ್ಕೆ ಸ್ವಲ್ಪ ಗ್ಲೀಸರಿನ್‌ ಸೇರಿಸಿ. ಅದರ ನಂತರ ಅಕ್ಕಿ ನೀರು ಮತ್ತು ವಿಟಮಿನ್‌ ಕ್ಯಾಪ್ಸೂಲ್‌ಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. 

ಈಗ ಸೀರಮ್‌ ಸಿದ್ಧವಾಗಿದೆ. ಇದನ್ನು ಪ್ರತಿದಿನ ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. ಕೆಲವೇ ದಿನಗಳಲ್ಲಿ ನಿಮ್ಮ ಚರ್ಮವು ಮೊದಲಿನಿಂದ ಉತ್ತಮವಾಗಿ ಕಾಣುತ್ತದೆ. 

ಈ ಮಾಹಿತಿಯು ಸಾಮಾನ್ಯಜ್ಞಾನವನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರಿಂದ ಅಭಿಪ್ರಾಯ ಪಡೆಯಿರಿ. 

ಹೊಸ ಫೋಟೋಗಳನ್ನು ಹಂಚಿಕೊಂಡ ಅನುಪಮಾ ಗೌಡ