ಕಣ್ಣಿನ ಸುತ್ತಲ ಕಪ್ಪುವೃತ್ತ ಹೋಗಲಾಡಿಸಲು ಆಲೂಗೆಡ್ಡೆ ರಸವನ್ನ ಹೀಗೆ ಬಳಸಿ
By Reshma Jul 14, 2024
Hindustan Times Kannada
ಅನಾರೋಗ್ಯಕರ ಜೀವನಶೈಲಿ ಹಾಗೂ ಒತ್ತಡದ ಕಾರಣದಿಂದ ಕಣ್ಣಿನ ಸುತ್ತಲೂ ಕಪ್ಪು ಕಲೆಗಳು ಕಾಣಿಸುತ್ತವೆ. ಇದರ ನಿವಾರಣೆಗೆ ಆಲೂಗೆಡ್ಡೆ ರಸವನ್ನು ಬಳಸುವುದು ಪರಿಣಾಮಕಾರಿ. ಇದನ್ನು ಬಳಸುವ ವಿಧಾನ ತಿಳಿಯಿರಿ
ಆಲೂಗೆಡ್ಡೆ ಸಿಪ್ಪೆ ತೆಗೆದು ರುಬ್ಬಿಕೊಂಡು ರಸ ಹಿಂಡಿಕೊಳ್ಳಿ. ಈ ರಸವನ್ನು ಹತ್ತಿ ಉಂಡೆಯ ಸಹಾಯದಿಂದ ಕಣ್ಣಿನ ಸುತ್ತಲೂ ಕಪ್ಪಾಗಿರುವ ಜಾಗಕ್ಕೆ ಹಚ್ಚಿ, 10 ರಿಂದ 15 ನಿಮಿಷ ಒಣಗಲು ಬಿಡಿ. ನಂತರ ತಣ್ಣೀರಿನಿಂದ ತೊಳೆಯಿರಿ. ಇದನ್ನು ಪ್ರತಿದಿನ ಮಾಡಿ.
ಆಲೂಗೆಡ್ಡೆ, ಸೌತೆಕಾಯಿ ರಸ: ಅರ್ಧ ಆಲೂಗೆಡ್ಡೆ ಹಾಗೂ ಅರ್ಧ ಸೌತೆಕಾಯಿ ಸೇರಿಸಿ ರುಬ್ಬಿಕೊಳ್ಳಿ. ಈ ಎರಡರ ಮಿಶ್ರಣದ ರಸವನ್ನು ಕಣ್ಣಿಗೆ ಹಚ್ಚಿ 15 ರಿಂದ 20 ನಿಮಿಷ ಬಿಡಿ. ಪ್ರತಿದಿನ ಇದನ್ನು ತಪ್ಪದೇ ಹಚ್ಚಿದರೆ ಕಣ್ಣಿನ ಸುತ್ತಲಿನ ಕಲೆ ಮಾಯವಾಗುತ್ತದೆ.
ನಿಂಬೆರಸ ಮತ್ತು ಆಲೂಗೆಡ್ಡೆ ರಸ: ಅರ್ಧ ಆಲೂಗೆಡ್ಡೆ ರುಬ್ಬಿಕೊಂಡು ರಸ ತಯಾರಿಸಿಕೊಳ್ಳಿ. ಇದಕ್ಕೆ ನಿಂಬೆ ರಸ ಸೇರಿಸಿ ಮಿಶ್ರಣ ಮಾಡಿ. ಈ ಮಿಶ್ರಣವನ್ನ ಕಣ್ಣಿನ ಸುತ್ತಲಿನ ಕಪ್ಪುಕಲೆಗೆ ಹಚ್ಚಿ. 15 ರಿಂದ 20 ನಿಮಿಷ ಬಿಟ್ಟು ತೊಳೆಯಿರಿ.
ಆಲೂಗೆಡ್ಡೆಯನ್ನು ಸ್ಲೈಸ್ ರೂಪದಲ್ಲಿ ಕತ್ತರಿಸಿಕೊಳ್ಳಿ. ಇದನ್ನು ಫ್ರಿಜ್‌ನಲ್ಲಿಡಿ. ಆ ಆಲೂಗೆಡ್ಡೆ ತುಂಡುಗಳನ್ನು ಕಣ್ಣಿನ ಮೇಲೆ ಇರಿಸಿ. ಪ್ರತಿದಿನ 10 ರಿಂದ 15 ನಿಮಿಷಗಳ ಕಾಲ ಆಲೂಗೆಡ್ಡೆ ತುಂಡನ್ನು ಕಣ್ಣಿನ ಮೇಲೆ ಇರಿಸಿಕೊಳ್ಳುವುದರಿಂದ ನಿಧಾನಕ್ಕೆ ಕಣ್ಣಿನ ಸುತ್ತಲಿನ ಕಲೆ ನಿವಾರಣೆಯಾಗುತ್ತದೆ.
ಆಲೂಗೆಡ್ಡೆ ಹಾಗೂ ಜೇನುತುಪ್ಪ ಮಿಶ್ರಣ: ಆಲೂಗೆಡ್ಡೆ ರಸದೊಂದಿಗೆ ಜೇನುತುಪ್ಪವನ್ನು ಮಿಶ್ರಣ ಮಾಡಿ. ಇದನ್ನು ಕಣ್ಣಿನ ಸುತ್ತಲಿನ ಕಪ್ಪು ಕಲೆಗಳು ಇರುವ ಜಾಗದಲ್ಲಿ ಇರಿಸಿ. ಮರುದಿನ ತೊಳೆಯಿರಿ.
ಆಲೂಗೆಡ್ಡೆ ಹಾಗೂ ರೋಸ್‌ವಾಟರ್: 2 ಚಮಚ ಆಲೂಗೆಡ್ಡೆ ರಸದೊಂದಿಗೆ 2 ಚಮಚ ರೋಸ್ ವಾಟರ್ ಸೇರಿಸಿ. ಇದನ್ನು ಕಣ್ಣಿನ ಸುತ್ತಲೂ ಹಚ್ಚಿ. 15 ರಿಂದ 20 ನಿಮಿಷ ಬಿಟ್ಟು ತೊಳೆಯಿರಿ, ಹೀಗೆ ಮಾಡುವುದರಿಂದ ಕಣ್ಣಿನ ಸುತ್ತಲಿನ ಕಪ್ಪುಕಲೆ ನಿವಾರಣೆಯಾಗುತ್ತದೆ.
ಯಾವುದೇ ಆ ಕಾರಣಕ್ಕೂ ಈ ಮಿಶ್ರಣವು ಕಣ್ಣಿನ ಒಳಗೆ ಸೋಕದಂತೆ ನೋಡಿಕೊಳ್ಳಿ. ಚರ್ಮದ ಅಲರ್ಜಿ ಹೊಂದಿರುವವರು ಈ ಮಿಶ್ರಣವನ್ನು ಬಳಸುವ ಮೊದಲು ತಜ್ಞರಿಂದ ಅಭಿಪ್ರಾಯ ಪಡೆಯುವುದು ಉತ್ತಮ.