ಮುಖದಲ್ಲಿ ಪದೇ ಪದೇ ಮೊಡವೆ ಆಗ್ತಾ ಇದ್ಯಾ, ಈ ಪದಾರ್ಥಗಳ ಸೇವನೆಗೆ ಇಂದೇ ಗುಡ್‌ಬೈ ಹೇಳಿ

By Reshma
May 15, 2024

Hindustan Times
Kannada

ಬೇಸಿಗೆಯಲ್ಲಿ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಹಜ. ಅದರಲ್ಲೂ ಧೂಳು, ಬೆವರಿನ ಕಾರಣದಿಂದ ಮುಖದಲ್ಲಿ ಮೊಡವೆಗಳು ಹೆಚ್ಚಾಗಬಹುದು. 

ಮೊಡವೆಗಳಿಂದ ಅಂದ ಕೆಡುತ್ತದೆ. ಆ ಕಾರಣಕ್ಕೆ ಹಲವರು ಮೊಡವೆ ನಿವಾರಣೆಗೆ ಮನೆಮದ್ದುಗಳ ಮೊರೆ ಹೋಗುತ್ತಾರೆ. ಆದರೆ ಇದು ಕೆಲವು ದಿನಗಳವರೆಗೆ ಮಾತ್ರ ಪರಿಹಾರ ನೀಡುತ್ತದೆ. ನಂತರ ಮತ್ತೆ ಮೊಡವೆಗಳಾಗುತ್ತವೆ. 

ಮೊಡವೆಗಳಿಗೆ ನಾವು ಸೇವಿಸುವ ಆಹಾರವೂ ಕಾರಣವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚು ಫಾಸ್ಟ್‌ಫುಡ್‌ ತಿನ್ನುತ್ತಾರೆ. ಇದು ಚರ್ಮ ಹಾಗೂ ಕೂದಲಿಗೆ ಒಳ್ಳೆಯದಲ್ಲ. 

ಮತ್ತೆ ಮತ್ತೆ ನಿಮ್ಮ ಮುಖದಲ್ಲಿ ಮೊಡವೆ ಆಗುತ್ತಿದ್ದರೆ ಈ ಕೆಲವು ಆಹಾರ ಪದಾರ್ಥಗಳ ಸೇವನೆಗೆ ಇಂದೇ ಗುಡ್‌ಬೈ ಹೇಳಿ. 

ಎಣ್ಣೆಯಂಶ ಇರುವ ಅಥವಾ ಸಂಸ್ಕರಿಸಿದ ಆಹಾರ ಪದಾರ್ಥಗಳ ಸೇವನೆಯನ್ನು ಸಂಪೂರ್ಣವಾಗಿ ತ್ಯಜಿಸಿ. ಕರಿದ ಆಹಾರ ಪದಾರ್ಥಗಳು ಸಾಮಾನ್ಯವಾಗಿ ಹಳೆಯ ಎಣ್ಣೆಯಿಂದ ಮಾಡಿರುತ್ತಾರೆ. ಇದು ಮೊಡವೆಗೆ ಕಾರಣವಾಗುತ್ತದೆ. 

ಚಾಕೊಲೇಟ್‌, ಕೇಕ್‌ನಂತಹ ಹೆಚ್ಚು ಸಕ್ಕರೆ ಅಂಶ ಇರುವ ಆಹಾರಗಳನ್ನು ಸೇವಿಸುವುದರಿಂದ ಮೊಡವೆ ಸಮಸ್ಯೆ ಹೆಚ್ಚುತ್ತದೆ. 

ಚೀಸ್‌, ಹೆಚ್ಚು ಕೆನೆಭರಿತ ಹಾಲು, ಮೊಸರು ಹಾಗೂ ಐಸ್‌ಕ್ರೀಮ್‌ನಂತಹ ಡೈರಿ ಉತ್ಪನ್ನಗಳು ಮೊಡವೆ ಉಂಟು ಮಾಡಬಹುದು. ಇವುಗಳಲ್ಲಿ ಕ್ಯಾಸಿನ್‌ ಎಂಬ ಅಂಶವಿದ್ದು, ಇದು ಹಾರ್ಮೋನ್‌ಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ. 

ಪ್ಯಾಕ್‌ ಮಾಡಿ ಇಟ್ಟಿರುವ ಆಹಾರಗಳು ಹಾಗೂ ಗ್ಲೈಸೆಮಿಕ್‌ ಇಂಡೆಕ್ಸ್‌ ಇರುವ ಆಹಾರ ಸೇವನೆಯಿಂದ ಕೂಡ ಮೊಡವೆ ಉಂಟಾಗುತ್ತದೆ. 

ಒಮೆಗಾ 6 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿರುವ ಆಹಾರ ಸೇವನೆಯಿಂದ ಕೂಡ ಮೊಡವೆ ಉಂಟಾಗುತ್ತದೆ. ನೈಸರ್ಗಿಕ ಎಣ್ಣೆಯಂಶ ಇರುವ ಆಹಾರಗಳ ಸೇವನೆ ಕಡಿಮೆ ಮಾಡಿ. 

ನಿಮ್ಮ ಮುಖದಲ್ಲಿ ಪದೇ ಪದೇ ಮೊಡವೆ ಆಗುತ್ತಿದ್ದರೆ ಕೆಲ ದಿನಗಳ ಕಾಲ ಪ್ರೊಟೀನ್‌ ಅಂಶ ಇರುವ ಆಹಾರ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಿ. 

ಸೋಲೋ ಟ್ರಿಪ್‌ ಮಾಡುವ ಮಹಿಳೆಯರು ತಪ್ಪದೇ ಪಾಲಿಸಬೇಕಾದ ನಿಯಮಗಳಿವು