ಬೇಸಿಗೆಯಲ್ಲಿ ಇಂಥ ತಪ್ಪು ಮಾಡಿದ್ರೆ ನಿಮ್ಮ ಚರ್ಮದ ಸೌಂದರ್ಯ ಹಾಳಾಗುತ್ತೆ 

By Reshma
Apr 17, 2024

Hindustan Times
Kannada

ಬೇಸಿಗೆಯಲ್ಲಿ ಆರೋಗ್ಯದಷ್ಟೇ ತ್ವಚೆಯ ಕಾಳಜಿಯೂ ಬಹಳ ಮುಖ್ಯ. ಬಿಸಿಲಿನ ತಾಪಕ್ಕೆ ಚರ್ಮದ ಕಳೆಗುಂದುವುದು ಮಾತ್ರವಲ್ಲ ಹಲವು ಸಮಸ್ಯೆಗಳು ಎದುರಾಗುತ್ತವೆ. ಬೇಸಿಗೆಯಲ್ಲಿ ತ್ವಚೆಯ ವಿಚಾರದಲ್ಲಿ ಈ 7 ತಪ್ಪುಗಳನ್ನು ಎಂದಿಗೂ ಮಾಡಬಾರದು.

ಅತಿಯಾದ ಮಾಯಿಶ್ಚರೈಸರ್‌ ಬಳಕೆ ಸಲ್ಲ 

ಬೇಸಿಗೆಯಲ್ಲಿ ಚರ್ಮ ಒಣಗುವುದು ಹಾಗೂ ಕಳೆಗುಂದುವುದನ್ನು ತಡೆಯಲು ಮಾಯಿಶ್ಚರೈಸರ್‌ ಬಳಕೆ ಉತ್ತಮ. ಆದರೆ ಅತಿಯಾಗಿ ಬಳಸುವುದರಿಂದ ಚರ್ಮದ ರಂಧ್ರಗಳು ಮುಚ್ಚಿಕೊಳ್ಳಬಹುದು. ಚರ್ಮದ ಉಸಿರಾಟಕ್ಕೆ ತೊಂದರೆಯಾಗಬಹುದು. 

ಎಸ್‌ಪಿಎಫ್‌ ಅಂಶ ಬಳಸದೇ ಇರುವುದು 

ಸನ್‌ಬರ್ನ್‌, ಬೇಗನೆ ವಯಸ್ಸಾದಂತೆ ಕಾಣುವುದು, ಚರ್ಮದ ಕ್ಯಾನ್ಸರ್‌ನಂತರ ಗಂಭೀರ ಅಪಾಯಗಳಿಗೂ ಕಾರಣ ಸೂರ್ಯನ ಯುವಿ ಕಿರಣಗಳು. ಇದರಿಂದ ಚರ್ಮವನ್ನು ರಕ್ಷಿಸಲು ಸನ್‌ಸ್ಕ್ರೀನ್‌ ಲೋಷನ್‌ ಬಳಸುವುದು ಬಹಳ ಅವಶ್ಯ. ಆದರೆ ನೀವು ಬಳಸುವ ಸನ್‌ಸ್ಕ್ರೀನ್‌ನಲ್ಲಿ ಎಸ್‌ಪಿಎಫ್‌ ಅಂಶ ಇರುವುದು ಅತೀ ಮುಖ್ಯ. 

ಮೇಕಪ್‌ನಲ್ಲಿ ಮಲಗುವುದು ತಪ್ಪು 

ಬೇಸಿಗೆಯಲ್ಲಿ ಮೇಕಪ್‌ನಲ್ಲೇ ಮಲಗುವುದು ಚರ್ಮದ ರಂಧ್ರಗಳು ಮುಚ್ಚಲು ಕಾರಣವಾಗುತ್ತದೆ. ಇದರಿಂದ ಬ್ಯಾಕ್ಟೀರಿಯಾಗಳು ವೃದ್ಧಿಯಾಗಬಹುದು. ಹಾಗಾಗಿ ಪ್ರತಿದಿನ ಮಲಗುವ ಮುನ್ನ ತಪ್ಪದೇ ಮುಖವನ್ನು ಚೆನ್ನಾಗಿ ತೊಳೆಯಿರಿ. 

ಅತಿಯಾದ ಅಥವಾ ಕಡಿಮೆ ಎಕ್ಸ್‌ಫೋಲಿಯೇಷನ್‌ ಸಲ್ಲ 

ಎಕ್ಸ್‌ಫೋಲಿಯೇಟ್‌ ಮಾಡುವುದರಿಂದ ಚರ್ಮದ ನಿರ್ಜೀವ ಕೋಶಗಳನ್ನು ತೊಡೆದು ಹಾಕಬಹುದು. ಇದರಿಂದ ಚರ್ಮವು ಮೃದುವಾಗಿ, ಒಳಗಿನಿಂದಲೇ ಕಾಂತಿ ಹೆಚ್ಚಲು ಸಹಕಾರಿಯಾಗುತ್ತದೆ. ಇದು ಚರ್ಮದ ಕಿರಿಕಿರಿಯನ್ನು ನಿವಾರಿಸಿ, ಕಾಂತಿ ಮರಳುವಂತೆ ಮಾಡುತ್ತದೆ. 

ಹೈಡ್ರೇಟ್‌ ಆಗಿರದೇ ಇರುವುದು 

ಬೇಸಿಗೆಯಲ್ಲಿ ಬೆವರು ಮೂತ್ರದಿಂದ ಸಾಕಷ್ಟು ನೀರು ಹೊರ ಹೋಗುತ್ತದೆ. ಹಾಗಾಗಿ ಈ ಸಮಯದಲ್ಲಿ ಆಗಾಗ ನೀರು ಕುಡಿಯುತ್ತಲೇ ಇರಬೇಕು. ಚರ್ಮದ  ತೇವಾಂಶ ಹೆಚ್ಚಲು ನೀರು ಕುಡಿಯುವುದು ಬಹಳ ಮುಖ್ಯ.  

ಐಪಿಎಲ್ 2024ರ ಟಾಪ್ 5 ಅತಿ ಉದ್ದದ ಸಿಕ್ಸರ್