ಹೊಳಪಿನ ತ್ವಚೆಗೆ ಮನೆಯಲ್ಲೇ ತಯಾರಿಸಿ ಗುಲಾಬಿ ದಳದ ಫೇಸ್‌ಕ್ರೀಮ್‌, ಇಲ್ಲಿದೆ ವಿಧಾನ 

By Reshma
Jan 17, 2025

Hindustan Times
Kannada

ಚಳಿಗಾಲದಲ್ಲಿ ಚರ್ಮ ಒಣಗುವುದು ಸಾಮಾನ್ಯ. ಚರ್ಮದಲ್ಲಿ ತೇವಾಂಶ ಕಾಪಾಡಿಕೊಳ್ಳಲು ನಿಯಮಿತವಾಗಿ ಫೇಸ್‌ಕ್ರೀಮ್ ಹಚ್ಚಬೇಕು

ಚರ್ಮದ ಪ್ರಕಾರಕ್ಕೆ ಅನುಗುಣವಾಗಿ ವಿವಿಧ ರೀತಿ ಕ್ರೀಮ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ ನೀವು ಮನೆಯಲ್ಲಿ ರಾಸಾಯನಿಕ ಮುಕ್ತ ಕ್ರೀಮ್ ತಯಾರಿಸಬಹುದು 

ಗುಲಾಬಿ ದಳಗಳನ್ನು ಅನೇಕ ತ್ವಚೆಯ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಇದರಿಂದ ಸುಲಭವಾಗಿ ಫೇಸ್‌ಕ್ರೀಮ್ ತಯಾರಿಸಬಹುದು 

ಮೊದಲು ಗುಲಾಬಿ ದಳಗಳನ್ನು ತೊಳೆದು ನಂತರ ರೋಸ್ ವಾಟರ್ ಸೇರಿಸಿ ರುಬ್ಬಿಕೊಳ್ಳಿ 

ಈಗ ಈ ಮಿಶ್ರಣವನ್ನು ಫಿಲ್ಟರ್ ಮಾಡಿ, ಅದಕ್ಕೆ ಅಲೊವೆರಾ ಜೆಲ್‌ ಮತ್ತು ಗ್ಲಿಸರಿನ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅದು ಕೆನೆಯಂತಾಗಬೇಕು 

ಈಗ ಈ ಕ್ರೀಮ್ ಅನ್ನು ಮುಖಕ್ಕೆ ಹಚ್ಚಿ ಮೃದುವಾಗಿ ಮಸಾಜ್ ಮಾಡಿ. ದಿನಕ್ಕೆ 2 ರಿಂದ 3 ಬಾರಿ ಹಚ್ಚಬಹುದು 

ಇದು ಹೆಚ್ಚು ಜಿಗುಟಾಗಿರುವುದಿಲ್ಲ. ಜೊತೆಗೆ ತ್ವಚೆಯನ್ನು ಹೈಡ್ರೇಟ್ ಆಗಿರಿಸುತ್ತದೆ 

ಮನೆಮದ್ದುಗಳ ಅಡ್ಡಪರಿಣಾಮ ಕಡಿಮೆಯಾದರೂ, ಚರ್ಮ ಸೂಕ್ಷ್ಮವಾಗಿದ್ದರೆ ಇದನ್ನು ಬಳಸುವ ಮುನ್ನ ತಜ್ಞರು ಸಲಹೆ ಪಡೆಯಿರಿ 

ಕೆಲಸ ಮಾಡುವಾಗ ಉಲ್ಲಾಸ ಹೆಚ್ಚಿಸಲು ಸರಳ ಡೆಸ್ಕ್ ವ್ಯಾಯಾಮ

PEXELS