ಈ ಒಂದೇ ಒಂದು ವಸ್ತು ಬಳಸಿದ್ರೆ ಸಾಕು  ಟ್ಯಾನ್‌ ನಿವಾರಣೆಯಾಗಿ ತ್ವಚೆಯ ಅಂದ ಹೆಚ್ಚುತ್ತೆ   

By Reshma
May 17, 2024

Hindustan Times
Kannada

ಬೇಸಿಗೆಯಲ್ಲಿ ಸೂರ್ಯನ ವಿಕಿರಣಗಳು ಸೋಕಿ ಚರ್ಮ ಟ್ಯಾನ್‌ ಆಗುವುದು ಸಹಜ. ಇದರಿಂದ ಮೈಬಣ್ಣ ಕಳೆಗುಂದುತ್ತದೆ. ತ್ವಚೆಯ ಅಂದ ಕೆಡುತ್ತದೆ. 

ಮಾರುಕಟ್ಟೆಯಲ್ಲಿ ಹಲವು ಡಿ-ಟ್ಯಾನ್‌ ಕ್ರೀಮ್‌ಗಳು ಲಭ್ಯವಿವೆ. ಆದರೆ ಅವುಗಳಲ್ಲಿ ಬಳಸುವ ರಾಸಾಯನಿಕಗಳು ಚರ್ಮಕ್ಕೆ ಹಾನಿಯುಂಟು ಮಾಡಬಹುದು. 

ಈ ವರ್ಷ ಬಿರುಬಿಸಿಲಿನ ಕಾರಣದಿಂದ ನಿಮ್ಮ ಚರ್ಮ ಟ್ಯಾನ್‌ ಆಗಿದ್ದರೆ ಮೊಸರು ಬಳಸಿ ಸುಲಭವಾಗಿ ಟ್ಯಾನ್‌ ನಿವಾರಿಸಬಹುದು. 

ಮೊಸರು ಲ್ಯಾಕ್ಟಿಕ್‌ ಆಮ್ಲವನ್ನು ಹೊಂದಿರುತ್ತದೆ. ಇದು ಚರ್ಮವನ್ನು ತಂಪಾಗಿಸುವ ಗುಣವನ್ನು ಹೊಂದಿದೆ. ಇದು ಚರ್ಮವನ್ನು ಪೋಷಿಸಿ ಮೈಬಣ್ಣವನ್ನು ಸುಧಾರಿಸುತ್ತದೆ.

ಮೊಸರಿಗೆ ಈ ಒಂದು ವಸ್ತು ಸೇರಿಸಿ ಮುಖಕ್ಕೆ ಹಚ್ಚಿದ್ರೆ ಸಾಕು ಟ್ಯಾನ್‌ ನಿವಾರಣೆಯಾಗಿ ಮುಖದ ಅಂದ ದುಪ್ಪಟ್ಟು ಹೆಚ್ಚುತ್ತದೆ. ಹಾಗಾದರೆ ಆ ವಸ್ತು ಯಾವುದು? 

ಮೊಸರಿನೊಂದಿಗೆ ಅರಿಸಿನವನ್ನು ಬೆರೆಸಿ ಫೇಸ್‌ಪ್ಯಾಕ್‌ ಆಗಿ ಹಚ್ಚಿಕೊಳ್ಳಬಹುದು. ಇದು ಟ್ಯಾನಿಂಗ್‌ನಿಂದ ಉಪಶಮನ ನೀಡುತ್ತದೆ. ಜೊತೆಗೆ ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ. 

ಮೊಸರು, ಅರಿಸಿನವನ್ನು ಬೆರೆಸಿ ಫೇಸ್‌ಪ್ಯಾಕ್‌ ತಯಾರಿಸಿ, ಈ ಪ್ಯಾಕ್‌ ಅನ್ನು ಮುಖದ ಮೇಲೆ 20 ನಿಮಿಷಗಳ ಕಾಲ ಇರಿಸಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ನಂತರ ಮಾಯಿಶ್ಚರೈಸರ್‌ ಹಚ್ಚಿ. 

ಮೊಸರು ಹಾಗೂ ಜೇನಿನ ಫೇಸ್‌ಮಾಸ್ಕ್‌ ಟ್ಯಾನಿಂಗ್‌ ನಿವಾರಿಸಲು ಸಹಾಯ ಮಾಡುತ್ತದೆ. ಜೇನುತುಪ್ಪವು ಆಂಟಿಆಕ್ಸಿಡೆಂಟ್‌ಗಳನ್ನು ಹೊಂದಿದೆ. ಇದು ಮೊಡವೆ, ಟ್ಯಾನ್‌, ಕಪ್ಪುಕಲೆಗಳ ನಿವಾರಣೆಗೆ ಸಹಾಯ ಮಾಡುತ್ತದೆ. 

ಮೊಸರು ಜೇನುತುಪ್ಪ ಬೆರೆಸಿ ಮುಖಕ್ಕೆ ಹಚ್ಚಿ, ಅರ್ಧ ಗಂಟೆ ಬಿಟ್ಟು ತಣ್ಣೀರಿನಿಂದ ಮುಖ ತೊಳೆದು, ಕ್ರೀಮ್‌ ಹಚ್ಚಿ. 

ಮೊಸರು ಚರ್ಮಕ್ಕೆ ತುಂಬಾ ಒಳ್ಳೆಯದು. ಆದರೆ ಮೊಸರಿನಲ್ಲಿ ಜೇನುತುಪ್ಪ, ಅರಿಸಿನ ಕಲೆಸಿ ಫೇಸ್‌ಪ್ಯಾಕ್‌ ಆಗಿ ಬಳಸುವ ಮುನ್ನ ಚರ್ಮದ ಪ್ಯಾಚ್‌ ಪರೀಕ್ಷಿಸಿ. 

ಅತಿಯಾದ ಜಾಮೂನ್ ತಿನ್ನುವುದರಿಂದ ಆಗುವ 7 ಆರೋಗ್ಯ ಸಮಸ್ಯೆಗಳಿವು