ದಟ್ಟ, ಕಪ್ಪು ಕೂದಲು ನಿಮ್ಮದಾಗಬೇಕು ಅಂದ್ರೆ ಈ 5 ಆಹಾರಗಳನ್ನು ನಿಯಮಿತವಾಗಿ ಸೇವಿಸಿ 

By Reshma
May 28, 2024

Hindustan Times
Kannada

ಪ್ರತಿ ಹೆಣ್ಣುಮಕ್ಕಳು ಕಪ್ಪನೆಯ ದಟ್ಟ, ನೀಳಕೂದಲು ಬಯಸುವುದು ಸಹಜ. ಕೂದಲಿನ ಆರೈಕೆಗಾಗಿ ಅವರು ಹಲವು ಕ್ರಮಗಳನ್ನು ಅನುಸರಿಸುತ್ತಾರೆ. 

ಆದರೆ ಎಷ್ಟೇ ಆರೈಕೆ ಮಾಡಿದ್ರು ವಯಸ್ಸು 30 ಆದ ತಕ್ಷಣ ಕೂದಲು ಬಿಳಿಯಾಗಲು ಆರಂಭವಾಗುತ್ತದೆ. ಅಕಾಲಿಕ ಬಾಲನೆರೆ ಅಂದಗೆಡಿಸುವ ಜೊತೆಗೆ ವಯಸ್ಸಾದಂತೆ ಕಾಣುವಂತೆ ಮಾಡುತ್ತದೆ. 

ಹಾಗಂತ ಕೂದಲಿಗೆ ಬಣ್ಣ ಹಚ್ಚಬೇಕು ಎಂದೇನಿಲ್ಲ. ನೈಸರ್ಗಿಕವಾಗಿ ಕೂದಲಿನ ಬಣವನ್ನು ಕಪ್ಪಾಗಿಸುವ ಒಂದಿಷ್ಟು ಆಹಾರಗಳಿವೆ. ಅವುಗಳ ಬಗ್ಗೆ ಇಲ್ಲಿದೆ ಮಾಹಿತಿ. 

ಅವಕಾಡೊದಲ್ಲಿ ಆರೋಗ್ಯಕರ ಕೊಬ್ಬಿನಾಂಶ ಹಾಗೂ ವಿಟಮಿನ್‌ ಇ ಹೇರಳವಾಗಿದೆ. ಪ್ರತಿನಿತ್ಯ ಇದನ್ನು ತಿಂದರೆ ಕೂದಲು ಬಿಳಿಯಾಗುವುದಿಲ್ಲ. 

ಕಪ್ಪುಎಳ್ಳು ಕೊಬ್ಬು ಹಾಗೂ ಪ್ರೊಟೀನ್‌ಗಳಿಂದ ಸಮೃದ್ಧವಾಗಿದೆ. ಕೂದಲಿನ ಆರೈಕೆಗಾಗಿ ಪ್ರತಿದಿನ ಕಪ್ಪು ಎಳ್ಳು ಸೇವಿಸುವುದನ್ನು ರೂಢಿಸಿಕೊಳ್ಳಬಹುದು. 

ಗೆಣಸು: ಗೆಣಸು ಕೂಡ ಕೂದಲು ಕಪ್ಪಾಗಲು ನೆರವಾಗುತ್ತದೆ. ಇದರಲ್ಲಿ ಬೀಟಾ ಕ್ಯಾರೊಟಿನ್‌ ಅಂಶವಿದ್ದು ಇದು ಕೂದಲಿನ ಬಹುತೇಕ ಸಮಸ್ಯೆಗಳನ್ನು ನಿವಾರಿಸುತ್ತದೆ. 

ಅರಿಸಿನವು ಉತ್ಕರ್ಷಣ ನಿರೋಧಕ ಹಾಗೂ ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದು ಕೂದಲು ಉದುರುವುದು ಹಾಗೂ ಸೀಳುವುದನ್ನು ತಡೆಯುತ್ತದೆ. ಅರಿಸಿನ ಸೇವನೆಯಿಂದ ಕೂದಲಿನ ಬೆಳವಣಿಗೆ ವೃದ್ಧಿಯಾಗುತ್ತದೆ. 

ನೀವು ಮಾಂಸಾಹಾರಿಗಳಾಗಿದ್ದರೆ ಮೀನು, ಚಿಕನ್‌ ಕೂಡ ತಿನ್ನಬಹುದು. ಇದು ಗರಿಷ್ಠ ಪ್ರೊಟೀನ್‌ ಹೊಂದಿದ್ದು ಕೂದಲಿನ ಬಣ್ಣದ ಜೊತೆಗೆ ಬೆಳವಣಿಗೆಯನ್ನೂ ಉತ್ತೇಜಿಸುತ್ತದೆ. 

ಆಹಾರಗಳು ಹಾಗೂ ಪಾನೀಯಗಳ ಹೊರತಾಗಿಯೂ ನಿಮ್ಮ ಕೂದಲಿನ ಬಗ್ಗೆ ಕಾಳಜಿ ವಹಿಸಿ. ವಾರಕ್ಕೆ ಎರಡು ಬಾರಿ ಶಾಂಪೂವಿನಿಂದ ತಲೆಸ್ನಾನ ಮಾಡಿ. ಎಣ್ಣೆ ಹಚ್ಚುವುದನ್ನು ಮರೆಯಬೇಡಿ. ಮನೆಯಲ್ಲೇ ತಯಾರಿಸಿದ ಹೇರ್‌ಪ್ಯಾಕ್‌ಗಳನ್ನು ಕೂಡ ಬಳಸಬಹುದು. 

2024ರ ಭಾರತದ ಟಾಪ್‌ 10 ಸಿರಿವಂತರು ಯಾರು