ಹೆಣ್ಣುಮಕ್ಕಳು ಅಲಂಕಾರ ಪ್ರಿಯರು. ಇತ್ತೀಚಿನ ಮಹಿಳೆಯರಿಗೆ ಲಿಪ್‌ಸ್ಟಿಕ್ ಇಲ್ಲದೇ ಅಲಂಕಾರ ಪೂರ್ಣಗೊಳ್ಳುವುದಿಲ್ಲ. ಕೆಲವೊಮ್ಮೆ ಎಷ್ಟೇ ಅಲಂಕಾರ ಮಾಡಿಕೊಂಡರೂ ಲಿಪ್‌ಸ್ಟಿಕ್ ಇಲ್ಲ ಎಂದರೆ ನೋಟ ಅಪೂರ್ಣವಾಗುತ್ತದೆ.
ಆದರೆ ಬೇಸಿಗೆಯಲ್ಲಿ ಯಾರೂ ಅತಿಯಾಗಿ ಮೇಕಪ್ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ಬೆವರು ಹೆಚ್ಚುವ ಕಾರಣ ಅತಿಯಾದ ಮೇಕಪ್ ಅಂದ ಕೆಡಿಸುತ್ತದೆ.
ಬೇಸಿಗೆ ಕಾಲಕ್ಕೆ ತಕ್ಕಂತೆ ಲಿಪ್ ಶೇಡ್ ಬಳಸಿದರೆ ನಿಮ್ಮ ಲುಕ್ ಸುಧಾರಿಸುವುದು ಮಾತ್ರವಲ್ಲ, ಆರಾಮದಾಯಕ ನೋಟಕ್ಕೂ ಇದು ಬೆಸ್ಟ್, ಅಂತಹ ಲಿಪ್ ಶೇಡ್‌ಗಳು ಯಾವುವು ನೋಡಿ.
ನ್ಯೂಡ್ ಪಿಂಕ್ ಕಲರ್: ನಿಮ್ಮದು ಫೇರ್ ಸ್ಕಿನ್ ಆಗಿರಲಿ, ಡಾರ್ಕ್ ಸ್ಕಿನ್ ಆಗಿರಲಿ ನ್ಯೂಡ್ ಪಿಂಕ್ ಶೇಡ್ ಬೇಸಿಗೆಯಲ್ಲಿ ಸ್ಕಿನ್ ಟೋನ್ ಮೇಲೆ ಚೆನ್ನಾಗಿ ಕಾಣುತ್ತದೆ. ಕ್ಯಾಶುವಲ್ ಲುಕ್‌ನಿಂದ ಮದುವೆಯಂತಹ ಗ್ರ್ಯಾಂಡ್ ಫಂಕ್ಷನ್‌ಗೂ ಇದು ಬೆಸ್ಟ್.
ಪೀಚ್ ಶೇಡ್: ಪೀಚ್ ಪಿಂಕ್ ಶೇಡ್ ಇರುವ ಲಿಪ್‌ಸ್ಟಿಕ್ ಬೇಸಿಗೆಗೆ ಹೇಳಿ ಮಾಡಿಸಿದ್ದು. ನಿಮ್ಮ ಡ್ರೆಸ್ ಕಲರ್ ಲೈಟ್ ಆಗಿರಲಿ, ಬ್ರೈಟ್ ಆಗಿರಲಿ ಈ ಶೇಡ್ ಎಲ್ಲದ್ದಕ್ಕೂ ಹೊಂದುತ್ತದೆ.
ಲಿಪ್ ಗ್ಲಾಸ್: ಬೇಸಿಗೆಯಲ್ಲಿ ತುಟಿಗಳು ಹೊಳೆಯುವಂತಿರುವುದು ಎಲ್ಲರಿಗೂ ಇಷ್ಟ. ಅದಕ್ಕಾಗಿ ಯಾವುದೇ ಲಿಪ್‌ಸ್ಟಿಕ್‌ನೊಂದಿಗೆ ಲಿಪ್‌ಗ್ಲಾಸ್ ಬಳಸಬಹುದು. ಇದು ನಿಮ್ಮ ಅಂದ ಹೆಚ್ಚಿಸುವುದರಲ್ಲಿ ಎರಡು ಮಾತಿಲ್ಲ.
ಲೈಟ್ ಬ್ರೌನ್ ಕಲರ್: ಎಲ್ಲಾ ಚರ್ಮದವರಿಗೂ ಲೈಟ್ ಬ್ರೌನ್ ಶೇಡ್ ಇರುವ ಲಿಪ್‌ಸ್ಟಿಕ್ ಹೊಂದುತ್ತದೆ. ಇದು ಆಫೀಸ್ ಲುಕ್‌ಗೂ ಹೇಳಿ ಮಾಡಿಸಿದ್ದು.
ಮನೆಯಲ್ಲಿ ಮೊಲ ಸಾಕಬಹುದೇ? ಜ್ಯೋತಿಷ್ಯದ ಪ್ರಕಾರ ಶುಭವೋ, ಅಶುಭವೋ?