ಚರ್ಮ, ಕೂದಲಿನ ಕಾಳಜಿಯ ವಿಚಾರಕ್ಕೆ ಬಂದಾಗ ಹಲವರಿಗೆ ಮನೆಮದ್ದುಗಳೇ ಹೆಚ್ಚು ಇಷ್ಟವಾಗುತ್ತದೆ. ಇಲ್ಲೊಂದು ಮನೆಮದ್ದಿದೆ. ಇದು ಚರ್ಮ ಹಾಗೂ ಕೂದಲು ಎರಡಕ್ಕೂ ಹೊಂದಿಕೆಯಾಗುತ್ತೆ. ಈ ಎರಡರ ಅಂದ, ಆರೋಗ್ಯವನ್ನ ಹೆಚ್ಚಿಸುತ್ತೆ.
ಈ ವಿಶೇಷ ಮನೆಮದ್ದು ತಯಾರಿಸಲು ಬಾಳೆಹಣ್ಣು, ಜೇನುತುಪ್ಪ ಹಾಗೂ ಓಟ್‌ಮೀಲ್‌ನ ಅಗತ್ಯವಿರುತ್ತದೆ
ಮೊದಲು ಬಾಳೆಹಣ್ಣು ಸ್ಮ್ಯಾಶ್ ಮಾಡಿ ಅದಕ್ಕೆ ಜೇನುತುಪ್ಪ ಹಾಗೂ ಓಟ್‌ಮೀಲ್ ಸೇರಿಸಿ, ಅದರಿಂದ ದಪ್ಪ ಪೇಸ್ಟ್ ತಯಾರಿಸಿ
ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ ಕೈಗಳಿಂದ ನಿಧಾನಕ್ಕೆ ಮಸಾಜ್ ಮಾಡಿ. ಇದು ಒಣಗಿದ ನಂತರ ಮುಖ ತೊಳೆಯಿರಿ
ಬಾಳೆಹಣ್ಣು ಹೊಳೆಯುವ ತ್ವಚೆಗೆ ಸಹಕಾರಿ. ಇದು ಚರ್ಮದ ಕಾಂತಿ ಹೆಚ್ಚುತ್ತದೆ. ಓಟ್‌ಮೀಲ್ ಚರ್ಮವನ್ನು ಎಕ್ಸ್‌ಫೋಲಿಯೇಟ್ ಮಾಡುತ್ತದೆ. ಜೇನುತುಪ್ಪ ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ
ಬಾಳೆಹಣ್ಣು, ಓಟ್‌ಮೀಲ್ ಮತ್ತು ಜೇನುತುಪ್ಪದ ಪ್ಯಾಕ್ ಅನ್ನು ಕೂದಲಿಗೂ ಅನ್ವಯಿಸಬಹುದು. ಈ ಪ್ಯಾಕ್ ಕೂದಲಿಗೂ ಉತ್ತಮ
ಇದು ಕೂದಲನ್ನು ಮೃದುವಾಗಿ, ಹೊಳೆಯುವಂತೆ ಮಾಡುತ್ತದೆ. ಮಾತ್ರವಲ್ಲ ಇದು ಕೂದಲ ಬೆಳವಣಿಗೆಗೂ ಉತ್ತಮ
ಈ ಮಾಹಿತಿಯ ಸಾಮಾನ್ಯಜ್ಞಾನವನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗೆ ತಜ್ಞರನ್ನು ಸಂಪರ್ಕಿಸಿ
ಮದುವೆಯಾದ 3 ವರ್ಷಕ್ಕೇ ದಾಂಪತ್ಯ ನೀರಸ ಅನ್ನಿಸ್ತಿದ್ರೆ ಈ ಟಿಪ್ಸ್ ಮಿಸ್ ಮಾಡದೆ ಫಾಲೊ ಮಾಡಿ