ಗಾಜಿನಂತೆ ಹೊಳೆಯುವ ತ್ವಚೆ ನಿಮ್ಮದಾಗಲು ಪ್ರತಿದಿನ ಈ 6 ಪದಾರ್ಥಗಳನ್ನು ಸೇವಿಸಿ

By Reshma
Jul 03, 2024

Hindustan Times
Kannada

ಗಾಜಿನಂತೆ ಶುಭ್ರ, ಸ್ವಚ್ಛ ತ್ವಚೆ ತಮ್ಮದಾಗಬೇಕು ಎಂದು ಎಲ್ಲರೂ ಬಯಸುತ್ತಾರೆ. ಹೆಣ್ಣುಮಕ್ಕಳು ತ್ವಚೆಯ ಅಂದಕ್ಕಾಗಿ ಹಲವು ಫೇಸ್‌ಪ್ಯಾಕ್‌, ಸೌಂದರ್ಯ ಉತ್ಪನ್ನಗಳನ್ನು ಬಳಸುತ್ತಾರೆ.

ಗಾಜಿನಂತಹ ಚರ್ಮ ಎಂದರೆ ಕಲೆಗಳಿಲ್ಲದ, ಹೊಳೆಯುವ ಚರ್ಮ. ಇದು ಪಾರ್ಲರ್‌ ಅಥವಾ ಸೌಂದರ್ಯ ಉತ್ಪನ್ನಗಳಿಂದ ಸ್ವಲ್ಪ ಸಮಯದವರೆಗೆ ಮಾತ್ರ ಪಡೆಯಬಹುದು. ಇದು ಶಾಶ್ವತ ಖಂಡಿತ ಅಲ್ಲ.

ಆದರೆ ಪ್ರತಿದಿನ ನಾವು ಕೆಲವು ಆಹಾರಗಳನ್ನು ತಿನ್ನುವ ಮೂಲಕ ಶಾಶ್ವತವಾಗಿ ಗಾಜಿನಂತೆ ಹೊಳೆಯುವ ತ್ವಚೆ ಹೊಂದಲು ಸಾಧ್ಯ.

ಬೀಟ್ರೂಟ್‌ ಕಬ್ಬಿಣಾಂಶ, ಪೊಟ್ಯಾಶಿಯಂ, ಮೆಗ್ನೀಶಿಯಂನಂತಹ ಹಲವು ಪೋಷಕಾಂಶಗಳನ್ನು ಒಳಗೊಂಡಿದೆ. ಇದು  ದೇಹದಲ್ಲಿ ರಕ್ತವನ್ನು ಹೆಚ್ಚಿಸಿ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಪ್ರತಿದಿನ ಬಿಟ್ರೂಟ್‌ ಜ್ಯೂಸ್‌ ಕುಡಿಯುವುದು ಉತ್ತಮ.

ಸ್ಟ್ರಾಬೆರಿ ತಿನ್ನಲು ತುಂಬಾ ಒಳ್ಳೆಯದು, ಇದು ಚರ್ಮವನ್ನು ಸ್ವಚ್ಛಗೊಳಿಸುತ್ತದೆ.

ಕಬ್ಬಿಣಾಂಶ ಇರುವ ಖರ್ಜೂರವು ರಕ್ತದ ಕೊರತೆಯನ್ನು ಸರಿದೂಗಿಸುತ್ತದೆ. ಖರ್ಜೂರವು ಚರ್ಮಕ್ಕೆ ಹೊಳಪನ್ನು ನೀಡುತ್ತದೆ. ಪ್ರತಿದಿನ 3 ರಿಂದ 4 ಖರ್ಜೂರ ತಿನ್ನಿ.

ವಿಟಮಿನ್‌ ಸಿ ಸಮೃದ್ಧವಾಗಿರುವ ಕಿತ್ತಳೆಯನ್ನು ತಿನ್ನುವುದರಿಂದ ಚರ್ಮವು ಸ್ವಚ್ಛವಾಗಿ ಹೊಳಪು ಹೆಚ್ಚುತ್ತದೆ. ಇದರಿಂದ ದೇಹದಲ್ಲಿ ನೀರಿನ ಕೊರತೆ ಉಂಟಾಗುವುದಿಲ್ಲ.

ವಿಟಮಿನ್‌ ಎ, ಸಿ ಮತ್ತು ಆಂಟಿ ಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಕ್ಯಾರೆಟ್‌ ತ್ವಚೆಗೂ ಉತ್ತಮ. ಕ್ಯಾರೆಟ್‌ ಅನ್ನು ಹಾಗೆ ತಿನ್ನಬಹುದು ಅಥವಾ ಜ್ಯೂಸ್‌ ತಯಾರಿಸಿ ಕುಡಿಯಬಹುದು.

ಟೊಮೆಟೊವನ್ನು ಮುಖಕ್ಕೆ ಹಚ್ಚುವುದರಿಂದ ಹೊಳಪು ಬರುತ್ತದೆ. ಇದನ್ನು ಆಹಾರದೊಂದಿಗೆ ಬಳಸುವುದು ತ್ವಚೆಯ ಅಂದಕ್ಕೂ ಉತ್ತಮ.

ಈ ಲೇಖನವು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.

ಮಳೆಗಾಲದಲ್ಲಿ ಶುಂಠಿ ಟೀ ಕುಡಿಯುವುದರಿಂದಾಗುವ 7 ಅದ್ಭುತ ಪ್ರಯೋಜನಗಳು