ಹರಳೆಣ್ಣೆ ಮುಖಕ್ಕೆ ಹಚ್ಚೋದ್ರಿಂದ ಇಷ್ಟೆಲ್ಲಾ ಪ್ರಯೋಜನ
By Reshma
Sep 01, 2024
Hindustan Times
Kannada
ಹರಳೆಣ್ಣೆ ಕಟು ವಾಸನೆ ಹೊಂದಿದ್ದರೂ ಕೂಡ ಇದರ ಪ್ರಯೋಜನಗಳು ಮಾತ್ರ ಅಗಾಧ. ಇದರಿಂದ ಕೂದಲಿಗೆ ಮಾತ್ರವಲ್ಲ ಚರ್ಮಕ್ಕೂ ಸಾಕಷ್ಟು ಪ್ರಯೋಜನಗಳಿವೆ.
ಹರಳೆಣ್ಣೆ ವಿಟಮಿನ್ ಇ, ಒಮೆಗಾ–9, ಒಮೆಗಾ–6 ನಂತರ ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿದೆ. ಇದನ್ನು ಮುಖಕ್ಕೆ ಹಚ್ಚುವುದರಿಂದ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.
ಹಾಗಾದರೆ ಹರಳೆಣ್ಣೆಯನ್ನು ಮುಖಕ್ಕೆ ಹಚ್ಚುವುದರಿಂದಾಗುವ ಅದ್ಭುತ ಪ್ರಯೋಜನಗಳನ್ನು ತಿಳಿಯಿರಿ.
ಮುಖದಲ್ಲಿ ಮೊಡವೆ ಅಥವಾ ಕಲೆ ಇದ್ದರೆ ಹರಳೆಣ್ಣೆ ಹಚ್ಚುವುದರಿಂದ ಮುಕ್ತಿ ಸಿಗುತ್ತದೆ.
ಹರಳೆಣ್ಣೆ ಪಿಗ್ಮಂಟೇಷನ್, ಸುಕ್ಕುಗಳು ಮತ್ತು ಸೂಕ್ಷ್ಮರೇಖೆಗಳ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ
ಚರ್ಮವು ಶುಷ್ಕವಾಗಿದ್ದರೆ ಹರಳೆಣ್ಣೆಯಿಂದ ಪರಿಹಾರ ಪಡೆಯಬಹುದು. ಇದನ್ನು ಹಚ್ಚುವುದರಿಂದ ಚರ್ಮವು ಮೃದುವಾಗುತ್ತದೆ.
ಹರಳೆಣ್ಣೆ ಹಚ್ಚುವುದರಿಂದ ಚರ್ಮದ ಆಳದಲ್ಲಿ ಹೊಸ ಅಂಗಾಂಶಗಳು ವೃದ್ಧಿಯಾಗುತ್ತವೆ. ಇದು ಚರ್ಮವನ್ನು ತೇವಾಂಶದಿಂದ ಕೂಡಿರಲು ಸಹಾಯ ಮಾಡುತ್ತದೆ
ಕ್ಯಾಸ್ಟರ್ ಆಯಿಲ್ ಹಚ್ಚುವುದರಿಂದ ಚರ್ಮ ಬಿಗಿಯಾಗುತ್ತದೆ. ಮುಖದ ಚರ್ಮ ಜೋತು ಬಿದ್ದಂತೆ ಕಾಣುವುದನ್ನು ತಡೆಯುತ್ತದೆ
ಹರಳೆಣ್ಣೆ ಹಚ್ಚುವ ಮೊದಲು ಮುಖವನ್ನು ಹೆಚ್ಚಾಗಿ ಸ್ವಚ್ಛಮಾಡಬೇಕು. ನಂತರ 2 ರಿಂದ 3 ಹನಿ ಎಣ್ಣೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಬೇಕು.
ಯಾವಾಗಲೂ ರಾತ್ರಿ ಮಲಗುವ ಹರಳೆಣ್ಣೆ ಹಚ್ಚಿ. ಬೆಳಗೆದ್ದು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.
Horoscope: ಏಪ್ರಿಲ್ 22ರ ಮಂಗಳವಾರ 12 ರಾಶಿಯವರ ಫಲಾಫಲ ಹೀಗಿವೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ