ಚಳಿಗಾಲದಲ್ಲಿ ಎಣ್ಣೆ ಚರ್ಮ ಇರುವವರ ತ್ವಚೆಯ ಆರೈಕೆ ಹೇಗೆ, ಇಲ್ಲಿದೆ ಟಿಪ್ಸ್‌ 

By Reshma
Jan 28, 2025

Hindustan Times
Kannada

ಚಳಿಗಾಲದಲ್ಲಿ ಒಣ ಚರ್ಮ ಹೊಂದಿರುವವರು ಮಾತ್ರವಲ್ಲ ಎಣ್ಣೆ ಚರ್ಮದವರು ವಿಶೇಷ ಕಾಳಜಿ ಮಾಡಬೇಕು. ಇಲ್ಲದಿದ್ದರೆ ಮೊಡವೆಯಂತಹ ಸಮಸ್ಯೆಗಳು ಎದುರಾಗಬಹುದು 

ಚಳಿಗಾಲದಲ್ಲಿ ಮೇದೋಗ್ರಂಥಿಗಳ ಸ್ರಾವ ಹೆಚ್ಚಬಹುದು. ಇದರಿಂದಾಗಿ ಮೊಡವೆ, ಕಪ್ಪುಕಲೆಗಳು ಉಂಟಾಗುತ್ತವೆ 

ನೀವು ಕೂಡ ಎಣ್ಣೆ ಚರ್ಮವನ್ನು ಹೊಂದಿದ್ದರೆ ತ್ವಚೆಯ ಕಾಳಜಿಗೆ ಅನುಸರಿಸಬೇಕಾದ ಕ್ರಮಗಳೇನು ಎಂಬುದನ್ನು ನೋಡಿ

ಬೆಳಗೆದ್ದು ಉತ್ತಮ ಫೇಸ್‌ವಾಶ್‌ನಿಂದ ಮುಖ ತೊಳೆಯಿರಿ. ಫೇಶ್‌ವಾಶ್ ಬಳಸುವುದರಿಂದ ತ್ವಚೆಯಲ್ಲಿನ ತೇವಾಂಶ ನಿವಾರಣೆಯಾಗುತ್ತದೆ 

ಎಣ್ಣೆಯುಕ್ತ ಚರ್ಮಕ್ಕೆ ಸ್ಕ್ರಬ್ ಕೂಡ ಬಹಳ ಮುಖ್ಯ. ವಾಲ್‌ನಟ್ ಅಥವಾ ಓಟ್ಸ್‌ ಸ್ಕ್ರಬ್‌ ಬಳಸಿ ನೈಸರ್ಗಿಕ ಸ್ಕ್ರಬ್‌ ಬಳಸಬಹುದು 

ಎಣ್ಣೆಯುಕ್ತ ಚರ್ಮದವರು ಅತಿಯಾಗಿ ಮಾಯಿಶ್ಚರೈಸರ್ ಬಳಸುವುದು ಒಳ್ಳೆಯದಲ್ಲ, ಇದರಿಂದ ಚರ್ಮದಲ್ಲಿ ಮೊಡವೆಗಳಾಗಬಹುದು 

ಮುಲ್ತಾನಿ ಮಿಟ್ಟಿ ಮತ್ತು ಪಪ್ಪಾಯ ಬಳಸಿ ಫೇಸ್‌ಪ್ಯಾಕ್ ಮಾಡಿಕೊಳ್ಳಬಹುದು. ಇದರಿಂದ ತೇವಾಂಶ ಕಡಿಮೆಯಾಗುತ್ತದೆ 

ಚಳಿಗಾಲದಲ್ಲೂ ಸನ್‌ಸ್ಕ್ರೀನ್ ಹಚ್ಚುವುದು ಬಹಳ ಮುಖ್ಯ. ಇದರಿಂದ ಟ್ಯಾನ್ ಆಗುವುದನ್ನು ತಡೆಯಬಹುದು

ಚಳಿಗಾಲದಲ್ಲಿ ಎಣ್ಣೆ ಚರ್ಮದವರು ರೋಸ್‌ ವಾಟರ್ ಬಳಸುವುದು ಉತ್ತಮ. ಇದು ಚರ್ಮವನ್ನು ಹೈಡ್ರೇಟ್ ಮಾಡುತ್ತದೆ. ಆದರೆ ಎಣ್ಣೆಯುಕ್ತವಾಗಿಸುವುದಿಲ್ಲ 

ರಾತ್ರಿ ಮಲಗುವಾಗ ತಪ್ಪದೇ ಮೇಕಪ್ ಅಳಿಸಿ. ಇಲ್ಲದಿದ್ದರೆ ಮುಖದಲ್ಲಿ ಮೊಡವೆ, ಕಲೆಗಳು ಉಂಟಾಗಬಹುದು  

ಅರಿಶಿನದಲ್ಲಿ ಮಿಂದೆದ್ದ ನಟ ಧನಂಜಯ್ ಮತ್ತು ಧನ್ಯತಾ; ಹಳದಿ ಶಾಸ್ತ್ರ ಫೋಟೋಸ್‌