ಚಳಿಗಾಲದಲ್ಲಿ ತ್ವಚೆಯ ಕಾಂತಿ ಹೆಚ್ಚಲು ಸ್ನಾನದ ನಂತರ ಏನು ಹಚ್ಚಬೇಕು?  

By Reshma
Dec 25, 2024

Hindustan Times
Kannada

ಚಳಿಗಾಲದಲ್ಲಿ ತ್ವಚೆಯ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಈ ಸಮಯದಲ್ಲಿ ಚರ್ಮ ಒಣಗಿ ನಿರ್ಜೀವವಾಗಿ ಕಾಣುತ್ತದೆ

ಚಳಿಗಾಲದಲ್ಲಿ ಚರ್ಮಕ್ಕೆ ಏನನ್ನು ಹಚ್ಚಬಹುದು ಎಂದು ಜನ ಯೋಚಿಸುತ್ತಾರೆ. ಅದರಲ್ಲೂ ಸ್ನಾನ ನಂತರ ಏನು ಹಚ್ಚಬೇಕು ಎಂಬ ಪ್ರಶ್ನೆ ಹಲವರಿಗಿದೆ 

ಸ್ನಾನದ ನಂತರ ಮುಖಕ್ಕೆ ಏನು ಹಚ್ಚಬೇಕು ಎಂಬ ಪ್ರಶ್ನೆ ನಿಮ್ಮಲ್ಲೂ ಮೂಡಿದ್ದರೆ ಆ ಪ್ರಶ್ನೆಗೆ ಉತ್ತರ ಇಲ್ಲಿದೆ 

ಮನೆಮದ್ದಿನ ಮೂಲಕ ನೀವು ತ್ವಚೆಯ ಅಂದ ಹೆಚ್ಚಿಸಿಕೊಳ್ಳಲು ಬಯಸಿದರೆ ಕೆನೆ ಮತ್ತು ನಿಂಬೆ ರಸವನ್ನು ಮಿಶ್ರಣ ಮಾಡಿ ಮುಖಕ್ಕೆ ಮಸಾಜ್ ಮಾಡಿ 

ಕೊಬ್ಬರಿ ಎಣ್ಣೆಯಲ್ಲಿ ರೋಸ್‌ವಾಟರ್ ಮಿಶ್ರಣ ಮಾಡಿ ಚರ್ಮಕ್ಕೆ ಹಚ್ಚಬಹುದು. ಆದರೆ ಹೊರಗಡೆ ಹೋಗುವಾಗ ಇದನ್ನು ಹಚ್ಚದಿರಿ 

ಸ್ನಾನದ ನಂತರ ತ್ವಚೆಗೆ ತುಪ್ಪ ಹಚ್ಚುವುದರಿಂದ ಕೂಡ ಒಣಚರ್ಮದ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಸಾಧ್ಯವಿದೆ 

ಚಳಿಗಾಲದಲ್ಲಿ ಸ್ನಾನದ ನಂತರ ಸಾಸಿವೆ ಎಣ್ಣೆಯನ್ನು ಹಚ್ಚುವ ಅಭ್ಯಾಸ ಮಾಡಿಕೊಳ್ಳಬಹುದು 

ಜೇನುತುಪ್ಪ ಮತ್ತು ಗ್ಲಿಸರಿನ್ ಮಿಶ್ರಣ ಮಾಡಿ ಹಚ್ಚುವುದರಿಂದ ಕೂಡ ಒಣ ಚರ್ಮದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು 

ಸ್ನಾನದ ನಂತರ ಆಲಿವ್ ಎಣ್ಣೆಯನ್ನು ಮುಖಕ್ಕೆ ಹಚ್ಚಬಹುದು. ಇದರಿಂದ ಚರ್ಮದ ಬಿರುಕು ತಡೆಯಬಹುದು

ನಿಮ್ಮ ಚರ್ಮವು ಅಲರ್ಜಿ ಗುಣವನ್ನು ಹೊಂದಿದ್ದರೆ ಈ ಯಾವುದೇ ವಸ್ತುವನ್ನು ಬಳಸುವ ಮೊದಲು ತಜ್ಞರಿಂದ ಸಲಹೆ ಪಡೆಯಿರಿ 

ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟ ರಿಷಭ್ ಪಂತ್, ಏನದು?