ಮೇಕಪ್ ಮಾಡಿಕೊಳ್ಳುವುದೆಂದರೆ ಹೆಣ್ಣುಮಕ್ಕಳಿಗೆ ಬಹಳ ಇಷ್ಟ. ಆದರೆ ಮೇಕಪ್‌ನಲ್ಲಿ ಕೊಂಚ ವ್ಯತ್ಯಾಸವಾದ್ರೂ ಅಂದ ಕೆಡುತ್ತೆ. ಲಿಪ್‌ಸ್ಟಿಕ್ ಹಚ್ಚಿಕೊಳ್ಳುವುದು ಕೂಡ ಇದಕ್ಕೆ ಅಪ್ಲೈ ಆಗುತ್ತದೆ.
ತೆಳ್ಳನೆಯ ತುಟಿಗಳ ಮೇಲೆ ಲಿಪ್‌ಸ್ಟಿಕ್ ಚೆನ್ನಾಗಿ ಕಾಣುತ್ತದೆ. ಆದರೆ ಅದನ್ನು ಹಚ್ಚಿಕೊಳ್ಳುವ ರೀತಿಯ ಮೇಲೆ ಅವಲಂಬಿತವಾಗಿರುತ್ತದೆ.
ತುಟಿ ತೆಳ್ಳಗಿದ್ದರೂ ಲಿಪ್‌ಸ್ಟಿಕ್ ಅನ್ನು ಚೆನ್ನಾಗಿ ಹಚ್ಚಿಕೊಳ್ಳಬಹುದು. ಲಿಪ್‌ಸ್ಟಿಕ್ ಅನ್ನು ಸರಿಯಾಗಿ ಹಚ್ಚಿಕೊಳ್ಳುವ ವಿಧಾನ ಇಲ್ಲಿದೆ.
ಮೊದಲು ಲಿಪ್ ಲೈನರ್ ಮೂಲಕ ಆಕಾರವನ್ನು ಮೂಡಿಸಿಕೊಳ್ಳಿ. ಆ ಆಕಾರದಲ್ಲೇ ಲಿಪ್‌ಸ್ಟಿಕ್ ಅನ್ನು ಹಚ್ಚಿಕೊಳ್ಳಿ.
ನಂತರ ಅದರ ಮೇಲೆ ಲಿಕ್ವಿಡ್ ಅಥವಾ ಮ್ಯಾಟ್ ಕಲರ್ ಹಚ್ಚಿ. ಇದರಿಂದ ತೆಳ್ಳನೆಯ ತುಟಿ ಕೂಡ ದಪ್ಪವಾಗಿ ಕಾಣಿಸುತ್ತದೆ.
ಲಿಪ್‌ಸ್ಟಿಕ್ ಹಚ್ಚಿದ ತುಟಿಗಳನ್ನು ಹೈಲೈಟ್ ಮಾಡಲು ಹೈಲೈಟರ್ ಅನ್ನು ಬಳಸಬಹುದು. ಲಿಪ್‌ಸ್ಟಿಕ್ ಹಚ್ಚಿಕೊಂಡ ಮೇಲೆ ತುಟಿಗಳ ಮೇಲೆ ಹೈಲೈಟರ್ ಹಚ್ಚಿ.
ನಿಮ್ಮ ತುಟಿಗಳು ತೆಳ್ಳಗಿದ್ದರೆ ಬಾಹ್ಯರೇಖೆಯನ್ನು ಹಚ್ಚುವಾಗ ದಪ್ಪನಾಗಿ ಹಚ್ಚಿ. ಇದರಿಂದ ತುಟಿಯ ಅಂದ ಹೆಚ್ಚುತ್ತದೆ.
ನೀವು ಗಡಿಬಿಡಿಯಲ್ಲಿದ್ದರೆ ಲಿಪ್‌ಗ್ಲಾಸ್ ಸಹಾಯದಿಂದ ಲಿಪ್‌ಸ್ಟಿಕ್ ಅಂದವನ್ನು ಹೆಚ್ಚಿಸಿಕೊಳ್ಳಬಹುದು. ಇದರಿಂದ ತುಟಿಗಳು ಎದ್ದು ಕಾಣುತ್ತವೆ.
ತೆಳ್ಳನೆಯ ತುಟಿ ಹೊಂದಿರುವವರು ಲೈಟ್ ಅಥವಾ ನ್ಯೂಡ್ ಕಲರ್ ಲಿಪ್‌ಸ್ಟಿಕ್ ಹಚ್ಚಿಕೊಳ್ಳಬೇಕು. ಗಾಢ ಬಣ್ಣವು ನಿಮ್ಮ ನೋಟವನ್ನು ಕೆಡಿಸಬಹುದು.
ಲಿಪ್‌ಸ್ಟಿಕ್ ದೀರ್ಘಕಾಲ ಉಳಿಯಲು ಬಯಸಿದರೆ ಮೊದಲು ತುಟಿಗಳ ಮೇಲೆ ಲೈಟ್ ಫೌಂಡೇಶನ್ ಹಚ್ಚಬೇಕು. ನಂತರ ಲಿಪ್‌ಸ್ಟಿಕ್ ಹಚ್ಚಿ.