ಬೆಂಗಳೂರಿನಲ್ಲಿ ಕುಡಿಯುವ ನೀರು ಸಮಸ್ಯೆಗೆ 5 ಮುಖ್ಯ ಕಾರಣಗಳಿವು
By Raghavendra M Y Mar 06, 2024
Hindustan Times Kannada
ಪೈಪ್‌ಲೈನ್ ಹಾಕದಿರುವುದು - ಬೆಂಗಳೂರಿನ ಹೊರ ವಲಯಗಳಲ್ಲಿ ನೀರಿನ ಪೈಪ್‌ಗಳನ್ನು ಹಾಕಲು ಬಿಡಬ್ಲ್ಯುಎಸ್‌ಎಸ್‌ಬಿಗೆ ಇನ್ನೂ ಸಾಧ್ಯವಾಗಿಲ್ಲ
ನೀರಿನ ಯೋಜನೆ ಅನುಷ್ಠಾನಗೊಳಿಸದಿರುವುದು - ಸರ್ಕಾರಗಳು ನೀರಿನ ಸಮಸ್ಯೆಗಳ ಪರಿಹಾರಕ್ಕಾಗಿ ಜಾರಿಗೊಳಿಸಿರುವ ಯೋಜನೆಗಳನ್ನು ಸರಿಯಾಗಿ ಅನುಷ್ಠಾನಗೊಳಿಸಿಲ್ಲ
ಮಳೆ ನೀರಿನ ಮೇಲೆ ಹೆಚ್ಚಿನ ಅವಲಂಬನೆ - ಬೆಂಗಳೂರು ಇಂದಿಗೂ ಹೆಚ್ಚಾಗಿ ಮಳೆ ನೀರಿನ ಮೇಲೆ ಅವಲಂಬಿಸಿದೆ. ಕೃಷ್ಣರಾಜ ಸಾಗರ-ಕೆಆರ್‌ಎಸ್ ಮತ್ತು ಕಬಿನಿಯನ್ನು ನೆಚ್ಚಿಕೊಂಡಿದೆ
ಜಲಮೂಲಗಳ ಅತಿಕ್ರಮಣ - ನಗರದಲ್ಲಿ ಕಾಂಕ್ರೀಟ್ ಕಾಡು ವಿಸ್ತಾರಗೊಳ್ಳುತ್ತಿದೆ. ದಶಕಗಳ ಹಿಂದೆ ನೀರಿಗೆ ಆಧಾರವಾಗಿದ್ದ ಕೆರೆ, ಕುಂಟೆಗಳನ್ನ ಒತ್ತುವರಿ ಮಾಡಿ ಕಟ್ಟಡ ನಿರ್ಮಿಸಲಾಗಿದೆ
ಅಂತರ್ಜಲ ಅತಿಯಾದ ಬಳಕೆ - ಜಲಮೂಲಗಳ ಅತಿಕ್ರಮಣದಿಂದಾಗಿ ನೀರಿಗೆ ಅಂತರ್ಜಲವನ್ನೇ ನೆಚ್ಚಿಕೊಳ್ಳುವಂತಾಗಿದೆ. ಕುಡಿಯಲು ಹಾಗೂ ಬಳಕೆಗೆ ಅಂತರ್ಜಲವನ್ನೇ ಅವಲಂಬಿಸಲಾಗಿದೆ
ಅಂತರ್ಜಲ ಮಟ್ಟ ಕುಸಿತ-ಬೆಂಗಳೂರಿನಲ್ಲಿ 150 ರಿಂದ 200 ಅಡಿಗಳಷ್ಟು ಬೋರ್‌ವೆಲ್ ಕೊರೆಸಿದರೆ ನೀರು ಸಿಗುತ್ತಿತ್ತು. ಆದರೆ ಈಗ 800 ರಿಂದ 1000 ಅಡಿ ಕೊರೆಸಿದರು ನೀರು ಸಿಗೋದು ಅಪರೂಪವಾಗಿದೆ
ಮುಂಗಾರು ಕೊರತೆ - ಬೆಂಗಳೂರಿನಲ್ಲಿ ನೀರಿನ ಕೊರೆತೆಯಾಗಲು ಮುಂಗಾರು ಕೊರತೆಯೂ ಕಾರಣವಾಗಿದೆ. ವಾಡಿಕೆಗಿಂತ ಕಡಿಮೆ ಮಳೆಯಾಗುತ್ತಿದೆ
ನಟಿ ಜ್ಯೋತಿ ರೈ ಹಂಚಿಕೊಂಡ ಸ್ಪೂರ್ತಿದಾಯಕ ನುಡಿಮುತ್ತುಗಳು; ನಿಮಗೂ ಸ್ಪೂರ್ತಿಯಾಗಬಲ್ಲದು