ಸಿಲಿಕಾನ್ ಸಿಟಿ ಬೆಂಗಳೂರಿಂದ ನಿಧಾನವಾಗಿ ಕಣ್ಮರೆಯಾದ ಅಂಶಗಳು
Photo Credit: Pexels
By Reshma
Apr 27, 2025
Hindustan Times
Kannada
ಮಹಾನಗರಿ ಬೆಂಗಳೂರು ಕಳೆದ 20 ವರ್ಷಗಳಲ್ಲಿ ಸಾಕಷ್ಟು ಬದಲಾಗಿದೆ. ಮೊದಲಿನ ಬೆಂಗಳೂರಿಗೆ ಹೋಲಿಸಿದರೆ ಹಲವು ಅಂಶಗಳು ನಿಧಾನಕ್ಕೆ ಕಣ್ಮರೆಯಾಗಿವೆ
Photo Credit: Pexels
ರೆಡ್ಡಿಟ್ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವಾಗಿ ಪ್ರಶ್ನೆ ಕೇಳಲಾಗಿತ್ತು. ಉತ್ತರ ನಗು, ಬೇಸರ, ನಿಟ್ಟುಸಿರಿಗೆ ಕಾರಣವಾಗಿದೆ
Photo Credit: Pexels
ಬೆಂಗಳೂರಿಂದ ಏನೆಲ್ಲಾ ಕಣ್ಮರೆಯಾಗಿದೆ ಎಂದು ನೆಟ್ಟಿಗರು ಹೇಳಿದ್ದಾರೆ ನೋಡಿ
Photo Credit: Pexels
ಗುಬ್ಬಚ್ಚಿಗಳಿಂದ ತುಂಬಿರುತ್ತಿದ್ದ ಬೆಂಗಳೂರಲ್ಲಿ ಈಗ ಗುಬ್ಬಚ್ಚಿಗಳು ಮರೀಚಿಕೆಯಾಗಿವೆ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ
Photo Credit: Pexels
ಧನ್ಯವಾದ ಹೇಳುವುದು ಅಥವಾ ಕೃತಜ್ಞತಾ ಭಾವ ಬದಲಾಗಿದೆ. ಕ್ಷಮಿಸಿ ಎನ್ನುವ ಪದವೂ ಮರೆಯಾಗಿದೆ. ಇದು ಜನರ ವರ್ತನೆ ಬದಲಾಗಿರುವುದನ್ನು ಸೂಚಿಸುತ್ತದೆ
Photo Credit: File Photo
ಮೆಲೊಡಿ ಸಂಗೀತಗಳು ಮರೆಯಾಗಿ ಡಿಂಕ್ ಚಿಕ್ ಮ್ಯೂಸಿಕ್ ಆ ಸ್ಥಾನವನ್ನು ಅಲಂಕರಿಸಿದೆ
Photo Credit: File Photo
ಹಿಂದೆಲ್ಲಾ ಪಬ್‌ಗಳು ಸಾಮಾನ್ಯರು ಪ್ರವೇಶ ಮಾಡುವಂತಿತ್ತು, ಆದರೆ ಈಗ ಎಲ್ಲಾ ಪಬ್‌ಗಳು ದುಬಾರಿಯಾಗಿವೆ
Photo Credit: File Photo
ಪೋಡಿ, ಘೀ ಇಡ್ಲಿ ಅಬ್ಬರದ ನಡುವೆ ಇಡ್ಲಿ ಕೂಡ ಬದಲಾಗಿದೆ ಎಂದು ನೆಟ್ಟಿಗರೊಬ್ಬರು ತಮಾಷೆ ಮಾಡಿದ್ದಾರೆ
Photo Credit: Pexels
ದೊಡ್ಡ ದೊಡ್ಡ ಮರಗಳು ಮತ್ತು ಬಂಗಲೆಗಳು ಗಾಜಿನ ಕಟ್ಟಡವಾಗಿ ರೂಪಾಂತರಗೊಳ್ಳುತ್ತಿವೆ
Photo Credit: Pexels
ಮನೆಗಳಲ್ಲಿ ಪಾರ್ಕಿಂಗ್ ಇಲ್ಲದ ಕಾರಣ ರಸ್ತೆಗಳನ್ನೇ ಪಾರ್ಕಿಂಗ್ ಜಾಗವನ್ನಾಗಿ ಮಾಡಿಕೊಳ್ಳುವುದು ಈಗ ಸಾಮಾನ್ಯವಾಗಿದೆ
Photo Credit: Pexels
ಐಷಾರಾಮಿ ವಸ್ತುಗಳಿಗೆ ಹಣ ಖರ್ಚು ಮಾಡಲಿದ್ದೀರಿ; ಮೇ 18ರ ದಿನಭವಿಷ್ಯ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ