ಏಪ್ರಿಲ್‌ನಲ್ಲಿ ಜೋಡಿಹಕ್ಕಿಗಳಂತೆ ವಿಹರಿಸಲು ರೊಮ್ಯಾಂಟಿಕ್ ತಾಣಗಳಿವು
By Prasanna Kumar PN Mar 27, 2025
Hindustan Times Kannada
ಏಪ್ರಿಲ್ ತಿಂಗಳಲ್ಲಿ ಬಿಸಿಲೂ ಕಡಿಮೆ, ಚಳಿಯೂ ಇರುವುದಿಲ್ಲ. ಪ್ರವಾಸ ಕೈಗೊಳ್ಳಲು ಇದು ಸೂಕ್ತ ಸಮಯವೂ ಹೌದು.
ನೀವು ಬೇಸಿಗೆ ಸುತ್ತಾಟ ಪ್ರಿಯರೇ? ನಿಮ್ಮ ಸಂಗಾತಿಯೊಂದಿಗೆ ಏಪ್ರಿಲ್ ತಿಂಗಳಲ್ಲಿ ಸುತ್ತಾಡುವ ಪ್ಲಾನ್ ಹಾಕಿಕೊಂಡಿದ್ದೀರಾ?
ಹಾಗಿದ್ದರೆ ನಿಮ್ಮ ಬಜೆಟ್ಗೆ ತಕ್ಕ ಮತ್ತು ಸೊಬಗಿನಿಂದಲೇ ಕೈಬೀಸಿ ಕರೆಯುವ ಭಾರತದ ನಿಸರ್ಗ ರಮಣೀಯ ತಾಣಗಳು ಇಲ್ಲಿದೆ.
ಏಪ್ರಿಲ್ ತಿಂಗಳಿನ ಬಿಸಿಲಿನಿಂದ ದೂರವಿರಲು ನೀವು ಜಮ್ಮು ಮತ್ತು ಕಾಶ್ಮೀರದ ಸುಂದರ ಕಣಿವೆಗಳಿಂದ ತುಂಬಿರುವ ಸೋನಾಮಾರ್ಗ್ ನಗರಕ್ಕೆ ಭೇಟಿ ನೀಡಬೇಕು. ಇದು ದಂಪತಿಗಳಿಗೆ ಅತ್ಯುತ್ತಮ ಸ್ಥಳವಾಗಿದೆ.
ಸೋನಾಮಾರ್ಗ್ ತಾಪಮಾನವು ಸುಮಾರು 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ಇಲ್ಲಿ ನೀವು ಹೆಚ್ಚು ಬಿಸಿಲು ಇರುವುದಿಲ್ಲ. ಅಲ್ಲದೆ, ನೈಸರ್ಗಿಕ ಸೌಂದರ್ಯವು ನಿಮ್ಮ ಮನಸ್ಸನ್ನು ಆಕರ್ಷಿಸುತ್ತದೆ.
ನೀವು ಪೂರ್ವ ಭಾರತದ ಕಡೆ ಪ್ರಯಾಣಿಸಲು ಇಚ್ಛಿಸಿದರೆ ಸಿಕ್ಕಿಂ ರಾಜಧಾನಿ ಗ್ಯಾಂಗ್ಟಾಕ್‌ಗೆ ಹೋಗಬಹುದು. ಅದ್ಭುತ ನೈಸರ್ಗಿಕ ಸೌಂದರ್ಯದಿಂದ ಕಂಗೊಳಿಸುವ ಈ ಪ್ರವಾಸಿ ತಾಣಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ.
ಎತ್ತರದ ಪರ್ವತ, ದಟ್ಟವಾದ ಕಾಡುಗಳು, ಸರೋವರಗಳು, ಜಲಪಾತಗಳನ್ನು ಇಲ್ಲಿ ಕಣ್ತುಂಬಿಕೊಳ್ಳಲು ಗ್ಯಾಂಗ್ಟಾಕ್ಗಿಂತ ಉತ್ತಮ ಸ್ಥಳ ಮತ್ತೊಂದಿಲ್ಲ. ತಾಣಗಳು ನಿಮ್ಮ ನಿರೀಕ್ಷೆಯನ್ನು ಹುಸಿ ಮಾಡುವುದಿಲ್ಲ.
ಚೋಪ್ಟಾ ಉತ್ತರಾಖಂಡ ರಾಜ್ಯದ ಕೇದಾರನಾಥದ ಬಳಿ ಇರುವ ಒಂದು ಸಣ್ಣ ಹಳ್ಳಿ. ಮೋಡಗಳು ನೆಲವನ್ನು ಮುತ್ತಿಕ್ಕುವ ರಮಣೀಯ ದೃಶ್ಯವನ್ನು ಕಾಣಬಹುದು.
ನೀವು ದಕ್ಷಿಣ ಭಾರತಕ್ಕೆ ಹೋಗಲು ಬಯಸಿದರೆ ಕೂರ್ಗ್‌ಗೆ ಪ್ರಯಾಣ ಬೆಳೆಸಿ. ಇದು ದಂಪತಿಗಳಿಗೆ ಅತ್ಯಂತ ಪ್ರಣಯ ಸ್ಥಳಗಳಲ್ಲಿ ಒಂದಾಗಿದೆ. ಸುಂದರ ಭೂದೃಶ್ಯಗಳು ನಿಮ್ಮನ್ನು ತನ್ಮಯರನ್ನಾಗಿಸುತ್ತವೆ.
ಪಂಗೋಟ್ ಉತ್ತರಾಖಂಡದ ನೈನಿತಾಲ್ ಬಳಿಯಿರುವ ಒಂದು ಸಣ್ಣ ಹಳ್ಳಿ. ನೀವು ನಗರದ ಗದ್ದಲದಿಂದ ದೂರವಿರುವ ಶಾಂತ ಸ್ಥಳಕ್ಕೆ ಹೋಗಲು ಬಯಸಿದರೆ, ಪಂಗೋಟ್‌ಗೆ ಹೋಗಿ.
ಕೇರಳದ ಪ್ರಸಿದ್ಧ ಗಿರಿಧಾಮ ಮುನ್ನಾರ್, ಪ್ರಣಯಕ್ಕೆ ಉತ್ತಮ ಸ್ಥಳವಾಗಿದೆ. ಏಪ್ರಿಲ್‌ನಲ್ಲಿ ದಂಪತಿಗಳು ಇಲ್ಲಿಗೆ ಪ್ರವಾಸಕ್ಕೆ ಹೋಗಬಹುದು.