ಪ್ರತಿ ರಾಶಿಯವರು ಯಾವ ಆಭರಣ ಧರಿಸಿದರೆ ಲಾಭ?

By Prasanna Kumar P N
Nov 11, 2024

Hindustan Times
Kannada

ಭಾರತೀಯರು ಅತಿ ಹೆಚ್ಚು ಇಷ್ಟಪಡುವ ವಸ್ತುವೆಂದರೆ ಚಿನ್ನ. ಚಿನ್ನ ಧರಿಸುವುದು ಅದೃಷ್ಟ ಮತ್ತು ಸಂಪತ್ತಿನ ಸಂಕೇತವೆಂದು ನಂಬುತ್ತಾರೆ.

ಆದರೆ, ಯಾವ ರಾಶಿಯವರು, ಯಾವ ಆಭರಣ ಧರಿಸಿದರೆ ಉತ್ತಮ ಎಂಬುದರ ಕುರಿತು ಸಾಕಷ್ಟು ಮಂದಿಗೆ ತಿಳಿದಿಲ್ಲ. 

ಮೇಷ ರಾಶಿ: ಈ ರಾಶಿಯವರಿಗೆ ರಿಸ್ಕ್​ ತೆಗೆದುಕೊಳ್ಳುದು ತುಂಬಾ ಇಷ್ಟ. ಇವರು ಕಿವಿಗಳಿಗೆ ಮೊನಚಾದ, ದಪ್ಪನಾದ ಮತ್ತು ಚುಚ್ಚುವಿಕೆಯಂಥ ಆಭರಣ ಧರಿಸಿದರೆ ಉತ್ತಮ.

ವೃಷಭ ರಾಶಿ: ಈ ರಾಶಿಯವರು ಐಷರಾಮಿ ಆಭರಣ ಧರಿಸಿದರೆ ಉತ್ತಮ. ಸರಳವಾದ ಹೂಪ್ಸ್ ಅಥವಾ ಸಂಸ್ಕರಿಸಿದ ಡೈಮಂಡ್ ಪೆಂಡೆಂಟ್ ನೆಚ್ಚಿನವು.

ಮಿಥುನ ರಾಶಿ: ಲೇಯರ್ಡ್ ನೆಕ್ಲೇಸ್‌ ಅಥವಾ ಚಿನ್ನ-ಬೆಳ್ಳಿ ಮಿಶ್ರಿತ ಲೋಹ ಧರಿಸಿದರೆ, ಲಾಭವಾಗಲಿದೆ.

ಕರ್ಕಾಟಕ ರಾಶಿ: ಪುರಾತನ ಮತ್ತು ಸಾಂಪ್ರದಾಯಿಕ ಚಿನ್ನದ ಆಭರಣಗಳನ್ನು ಧರಿಸಿದರೆ ಒಳ್ಳೆಯದಾಗುತ್ತದೆ.

ಸಿಂಹ ರಾಶಿ: ಹೊಳೆಯುವ ರತ್ನ ಸುರುಳಿಯಾಕಾರದ ಅಥವಾ ಉಂಗುರದಂತಿರುವ ಕಿವಿಯೋಲೆ ಹಾಕಿಕೊಂಡರೆ ಉತ್ತಮ.

ಕನ್ಯಾ ರಾಶಿ: ಈ ರಾಶಿಯವರು ಪೆಂಡೆಂಟ್​ಗಳು ಮತ್ತು ಸರಳವಾದ ಕಿವಿ ಸ್ಟಡ್​ಗಳನ್ನು ಧರಿಸಿದರೆ ಅದೃಷ್ಟ ಒಲಿಯಲಿದೆ.

ತುಲಾ ರಾಶಿ: ನೆಕ್ಲೇಸ್‌ಗಳು, ಬ್ರೇಸ್​ಲೆಟ್​ಗಳನ್ನು ಧರಿಸಿದರೆ ಈ ರಾಶಿಯವರ ಜೀವನ ಉತ್ತಮವಾಗಿರಲಿದೆ.

ವೃಶ್ಚಿಕ ರಾಶಿ: ಗಾಢವಾದ ಶಕ್ತಿ ಹೊಂದಿರುವ ಈ ರಾಶಿಯವರು ಗೋಥಿಕ್ ಶೈಲಿಯ ಆಭರಣ ಧರಿಸಬೇಕು.

ಧನು ರಾಶಿ: ಈ ರಾಶಿಯವರು ಭೇಟಿ ಕೊಡುವ ಸ್ಥಳಗಳಲ್ಲಿ ಆಭರಣಗಳ ಸಂಗ್ರಹಕ್ಕೆ ಆದ್ಯತೆ ನೀಡುತ್ತಾರೆ. ಇದು ತುಂಬಾ ವೈವಿಧ್ಯಮಯವಾಗಿದೆ.

ಮಕರ ರಾಶಿ: ಕ್ಲಾಸಿಕ್ ಆಭರಣ ಧರಿಸಿದರೆ ಉತ್ತಮ. ಅದು ಟೈಮ್‌ಲೆಸ್ ರಿಂಗ್ ಅಥವಾ ಸೊಗಸಾದ ಬ್ರೇಸ್‌ಲೆಟ್ ಆಗಿರಬಹುದು.

ಕುಂಭ ರಾಶಿ: ನವೀನ ಮತ್ತು ಫ್ಯೂಚರಿಸ್ಟಿಕ್ ನೆಕ್ಲೇಸ್​​ಗಳು, ಬ್ರೇಸ್ಲೆಟ್​ಗಳಂತಹ ಅಸಾಂಪ್ರದಾಯಿಕ ವಿನ್ಯಾಸಗಳು ಧರಿಸಿದರೆ ಉತ್ತಮ.

ಮೀನ ರಾಶಿ: ವಿಚಿತ್ರವಾದ, ಸೊಗಸಾದ ಆಭರಣ ಧರಿಸಿದರೆ ಅದೃಷ್ಟ ಒಲಿಯಲಿದೆ. ಅದರಲ್ಲೂ ಕಿವಿಯೋಲೆಗಳೇ ಧರಿಸಿದರೆ ಉತ್ತಮ.

ಕಾವೇರಿ ವಿರುದ್ಧ ಸಾಕ್ಷಿ ಹೇಳಿದ ವೈಷ್ಣವ್