ವಿನ್ನರ್ ಆದ್ರೆ ಹಣವನ್ನು ಹೀಗೆ ಉಪಯೋಗಿಸ್ತಾರಂತೆ ಭವ್ಯಾಗೌಡ
By Rakshitha Sowmya
Jan 22, 2025
Hindustan Times
Kannada
ಬಿಗ್‌ಬಾಸ್ ಕನ್ನಡ ಸೀಸನ್ 11 ಇದೇ ಭಾನುವಾರ ಕೊನೆಯಾಗುತ್ತಿದೆ. ಜನವರಿ 26 ರಂದು ಫಿನಾಲೆಗೆ ಸಕಲ ಸಿದ್ದತೆ ನಡೆದಿದೆ
ಸದ್ಯಕ್ಕೆ ದೊಡ್ಮನೆಯಲ್ಲಿ ಆರು ಮಂದಿ ಕಂಟಸ್ಟಂಟ್ ಉಳಿದುಕೊಂಡಿದ್ದಾರೆ. ಅದರಲ್ಲಿ ಭವ್ಯಾ ಗೌಡ ಕೂಡಾ ಒಬ್ಬರು
ಗೀತಾ ಧಾರಾವಾಹಿ ಖ್ಯಾತಿಯ ಭವ್ಯಾಗೌಡ, ಮೊದಲ ದಿನದಿಂದಲೂ ದೊಡ್ಮನೆಯಲ್ಲಿ ಉತ್ತಮ ಆಟ ಆಡುತ್ತಾ ಬಂದಿದ್ದಾರೆ
ಇತರ ಸ್ಪರ್ಧಿಗಳನ್ನು ಹಿಂದಿಕ್ಕಿ ಭವ್ಯಾ ಗೌಡ ಟಿಕೆಟ್ ಟು ಫಿನಾಲೆ ಟಾಸ್ಕ್‌ಗಾಗಿ ಆಯ್ಕೆಯಾಗಿದ್ದರು
ಇದುವರೆಗೂ ಶ್ರುತಿ ಹೊರತುಪಡಿಸಿ ಮಹಿಳಾ ಸ್ಪರ್ಧಿಗಳು ವಿನ್ ಆಗಿಲ್ಲ, ಈ ಬಾರಿ ಭವ್ಯಾಗೌಡಗೆ ಟ್ರೋಫಿ ದೊರೆಯಲಿ ಎಂದು ಅಭಿಮಾನಿಗಳು ಆಸೆ ಪಟ್ಟಿದ್ದಾರೆ
ಬಿಗ್‌ಬಾಸ್‌ಗೆ ಬರುವಾಗ ಇದರಿಂದ ಎಷ್ಟು ಹಣ ದೊರೆಯಬಹುದು ಎಂದು ಲೆಕ್ಕಾಚಾರ ಹಾಕುತ್ತಿದ್ದೆ
ಇಷ್ಟು ದಿನ ಸಹಸ್ಪರ್ಧಿಗಳ ಜೊತೆ ಫೈಟ್ ಮಾಡಿಕೊಂಡು ಇಲ್ಲಿವರೆಗೂ ಬಂದಿರುವುದು ದೊಡ್ಡ ಸಾಧನೆ
ನಾನು ವಿನ್ನರ್ ಆಗಿ ಹಣ ಸಿಕ್ಕರೆ ನನ್ನ ತಂಗಿಯನ್ನು ಚೆನ್ನಾಗಿ ಓದಿಸಬೇಕೆಂಬ ಆಸೆ ಇದೆ. ಅಷ್ಟೇ ಅಲ್ಲ, ಅಕ್ಕನ ಮದುವೆ ಮಾಡಬೇಕೆಂಬ ದೊಡ್ಡ ಆಸೆ ಕೂಡಾ ಇದೆ
ಅಪ್ಪ, ಬಿದ್ದು ಪೆಟ್ಟಾಗಿರುವುದರಿಂದ ಅವರ ಧ್ವನಿ ಸಮಸ್ಯೆ ಇದೆ, ದುಡ್ಡು ದೊರೆತರೆ ಅವರ ಧ್ವನಿ ಸರಿಪಡಿಸುತ್ತೇನೆ ಎಂದು ಭವ್ಯಾ ಆಸೆ ವ್ಯಕ್ತಪಡಿಸಿದ್ದಾರೆ
ಕೆಲಸ ಮಾಡುವಾಗ ಉಲ್ಲಾಸ ಹೆಚ್ಚಿಸಲು ಸರಳ ಡೆಸ್ಕ್ ವ್ಯಾಯಾಮ
PEXELS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ