ವಾರ್ಷಿಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೀರಾ? ಹಾರ್ವರ್ಡ್ ವಿವಿಯ ಈ 7 ಸ್ಟಡಿ ಟಿಪ್ಸ್ ಅನುಸರಿಸಿ
Photo Credit: HT Photos
By Praveen Chandra B Jan 30, 2025
Hindustan Times Kannada
ವಾರ್ಷಿಕ ಪರೀಕ್ಷೆಗಳು ಹತ್ತಿರದಲ್ಲಿವೆ. ಹಾರ್ವರ್ಡ್ ವಿಶ್ವವಿದ್ಯಾಲಯವು ಪರೀಕ್ಷಾ ಸಿದ್ಧತೆಗಾಗಿ ಏಳು ಅತ್ಯುತ್ತಮ ತಂತ್ರಗಳನ್ನು ಹಂಚಿಕೊಂಡಿದೆ. ಇದು ನಿಮಗೂ ನೆರವಾಗಬಹುದು.
Photo Credit: Unsplash
1. ಉತ್ತಮ ಅಧ್ಯಯನ ಅಭ್ಯಾಸವನ್ನು ಬೆಳೆಸಿಕೊಳ್ಳಿ:ಅಭ್ಯಾಸಗಳಲ್ಲಿನ ಸರಳ ಬದಲಾವಣೆಗಳು ದೀರ್ಘಾವಧಿಯಲ್ಲಿ ಸಹಾಯಕವಾಗಬಹುದು. ಸರಿಯಾದ ಸಮಯದಲ್ಲಿ ಹೋಂವರ್ಕ್ ಮಾಡಿ. ಪ್ರತಿದಿನ ನೋಟ್ಸ್ ಪರಿಶೀಲಿಸಿ. ಅಣಕು ಪರೀಕ್ಷೆ ಬರೆಯಿರಿ.
Photo Credit: Unsplash
2. 'ಕ್ರ್ಯಾಮ್' ಮಾಡಬೇಡಿ: ಪರೀಕ್ಷೆಯ ಕುರಿತು ಒತ್ತಡ ಬೇಡ. ಕ್ರ್ಯಾಮಿಂಗ್ ನಿದ್ದೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಪರೀಕ್ಷೆಗೆ ಸಿದ್ಧತೆ ನಡೆಸಲು ಅಡ್ಡಿಯಾಗುತ್ತದೆ.
Photo Credit: Unsplash
3. ಹಿಂದಿನ ರಾತ್ರಿ ಎಲ್ಲವನ್ನೂ ಸಿದ್ಧವಾಗಿಟ್ಟುಕೊಳ್ಳಿ: ಪರೀಕ್ಷೆಗೆ ಹೊರಡುವಾಗ ಪರೀಕ್ಷೆಗೆ ಅಗತ್ಯವಿರುವ ಪರಿಕರಗಳನ್ನು ಹುಡುಕುವುದಲ್ಲ. ಪರೀಕ್ಷೆಯ ಹಿಂದಿನ ದಿನವೇ ಎಲ್ಲವನ್ನೂ ಸಂಗ್ರಹಿಸಿ ಇಡಿ. ಇದು ಬೆಳಗ್ಗೆ ನಿಮಗೆ ಪರೀಕ್ಷೆ ಕುರಿತಾದ ಒತ್ತಡ ಕಡಿಮೆ ಮಾಡುತ್ತದೆ.
Photo Credit: Unsplash
4. ನಿದ್ರೆ ಸಮರ್ಪಕವಾಗಿರಲಿ: ಪರೀಕ್ಷೆಗೆ ಮೊದಲ ದಿನ ವಿದ್ಯಾರ್ಥಿಗಳು ಉತ್ತಮವಾಗಿ ನಿದ್ರೆ ಮಾಡಬೇಕು. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ. ನೆನಪಿನ ಶಕ್ತಿ ಉತ್ತಮವಾಗಿರುತ್ತದೆ.
Photo credit: Unsplash
5. ಆರೋಗ್ಯಕರ ಉಪಾಹಾರ: ಕಾರ್ಬೋಹೈಡ್ರೇಟ್‌ಗಳು ಮತ್ತು ಆರೋಗ್ಯಕರ ಪ್ರೋಟೀನ್‌ಗಳ ಆಹಾರ ನಿಮಗೆ ಮಂಕು ತರಿಸದು. ಗೋಧಿ ಧಾನ್ಯಗಳು, ಮೊಟ್ಟೆಗಳು, ಓಟ್ ಮೀಲ್, ಬೆರ್ರಿಗಳು ಮತ್ತು ನಟ್‌ಗಳ ಸೇವನೆ ಉತ್ತಮ.
Photo Credit: Unsplash
6. ಬೇಗನೆ ಬನ್ನಿ: ಪರೀಕ್ಷಾ ಸ್ಥಳಕ್ಕೆ ಬೇಗನೆ ಆಗಮಿಸುವುದು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪರೀಕ್ಷೆ ಪ್ರಾರಂಭವಾಗುವ ಮೊದಲು ಸಕಾರಾತ್ಮಕ ಮನಸ್ಥಿತಿಗೆ ಬರಲು ಇದು ನಿಮಗೆ ಅನುವು ಮಾಡಿಕೊಡುತ್ತದೆ.
Photo Credit: Unsplash
7. ಸಕಾರಾತ್ಮಕ ಮನಸ್ಥಿತಿ ಬೆಳೆಸಿಕೊಳ್ಳಿ: ಸಕಾರಾತ್ಮಕ ಮನಸ್ಥಿತಿಯು ಫಲಪ್ರದ ಫಲಿತಾಂಶ ನೀಡುತ್ತದೆ. ನಕಾರಾತ್ಮಕ ಚಿಂತನೆ, ಪರೀಕ್ಷಾ ಆತಂಕ ಮತ್ತು ಗಮನದ ಕೊರತೆಯನ್ನು ಎದುರಿಸಲು ಸಕಾರಾತ್ಮಕ ಚಿಂತನೆ ಸಹಾಯ ಮಾಡುತ್ತದೆ.
Photo Credit: Pixabay
ನೂತನ ಜೆರ್ಸಿಯಲ್ಲಿ ಭಾರತದ ಆಟಗಾರರು ಮಿಂಚು; ಫೋಟೋಸ್ ಇಲ್ಲಿವೆ