‘ಎಲ್ಲದಕ್ಕೂ ಸಿದ್ಧರಿದ್ದೀರಾ?’ ಬಾಲಿವುಡ್ ನಟಿಗೆ ಪರೋಕ್ಷವಾಗಿ ಮಂಚಕ್ಕೆ ಕರೆದ ಸೌತ್ ನಿರ್ಮಾಪಕ
By Manjunath B Kotagunasi
Jan 31, 2025
Hindustan Times
Kannada
ಬಾಲಿವುಡ್ ಖ್ಯಾತ ನಟಿಯೊಬ್ಬರು ಇದೀಗ ದಕ್ಷಿಣ ಭಾರತದ ಚಿತ್ರರಂಗದಲ್ಲಿನ ಕಾಸ್ಟಿಂಗ್ ಕೌಚ್ ಬಗ್ಗೆ ನೇರವಾಗಿಯೇ ಮಾತನಾಡಿದ್ದಾರೆ.
ಬಾಲಿವುಡ್‌ನ ಹಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಫಾತಿಮಾ ಸನಾ ಶೇಖ್, ಸೌತ್ ಚಿತ್ರರಂಗದ ಬಗ್ಗೆ ಬೇಸರ ಹೊರಹಾಕಿದ್ದಾರೆ.
ನೀವು ದಕ್ಷಿಣ ಭಾರತದ ಚಿತ್ರಗಳಲ್ಲಿ ನಟಿಸಿದರೆ, ಬಾಲಿವುಡ್‌ನಲ್ಲಿ ಉತ್ತಮ ಆಫರ್‌ಗಳು ಸಿಗುತ್ತವೆ ಎಂಬ ಮಾತಂತೆ ದಕ್ಷಿಣದತ್ತ ಮುಖಮಾಡಿದ್ದರು ಸನಾ.
ಅದೇ ಕಾರಣಕ್ಕಾಗಿ, ನಾನು ಕೆಲವು ದಕ್ಷಿಣ ಭಾರತೀಯ ಚಿತ್ರಗಳಲ್ಲಿ ನಟಿಸಲು ನಿರ್ಧರಿಸಿದೆ. ಆದರೆ, ಅಲ್ಲಿ ಕೆಟ್ಟ ಅನುಭವಗಳೇ ಆದವು ಎಂದಿದ್ದಾರೆ ಸನಾ.
ಆಡಿಷನ್‌ಗೂ ಮೊದಲೇ ನನ್ನ ಬಯೋ ಡೇಟಾ ಮತ್ತು ಫೋಟೋಗಳೆಲ್ಲವನ್ನೂ ಆ ತಂಡಕ್ಕೆ ಕಳುಹಿಸಿದೆ. ಆದರೆ ಅಲ್ಲಿಂದ ಶಾಕಿಂಗ್ ರಿಪ್ಲೈ ಸಿಕ್ಕಿತು.
ಈ ಪಾತ್ರಕ್ಕಾಗಿ ನೀವು ಏನು ಬೇಕಾದರೂ ಮಾಡಲು ಸಿದ್ಧರಿದ್ದೀರಾ? ಎಂದು ಆ ನಿರ್ಮಾಪಕರು ಪದೇ ಪದೆ ಕೇಳಿದರು.
ನಿರ್ಮಾಪಕರ ಮಾತಿನ ಮರ್ಮ ಅರಿತ ಫಾತಿಮಾ, ಪಾತ್ರಕ್ಕೆ ಎಷ್ಟು ಬೇಕೋ ಅಷ್ಟು ಕೆಲಸ ಮಾಡುತ್ತೇನೆ ಎಂದಿದ್ದರು.
ಮಾತನ್ನು ಕೇಳಿಸಿಕೊಂಡು ಸುಮ್ಮನಿದ್ದಾಗ, ಕೊನೆಗೆ ಕೇಳಿ ಕೇಳಿ ಸುಸ್ತಾಗಿ ನಿರ್ಮಾಪಕರೇ ಫೋನ್ ಕಟ್ ಮಾಡಿದರಂತೆ. ಹೀಗೆ ತಮ್ಮ ಅನುಭವ ಹೇಳಿಕೊಂಡಿದ್ದಾರೆ ಸನಾ
ಜಿಎಸ್ ಶಿವರುದ್ರಪ್ಪ ಜನ್ಮದಿನದಂದು ಅವರ 10 ಜನಪ್ರಿಯ ಭಾವಗೀತೆಗಳು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ