ಸೀರೆ ಸರಳವಾಗಿದ್ದು ಕುಪ್ಪಸ ಆಕರ್ಷಕವಾಗಿದ್ದರೆ ಇಡೀ ಲುಕ್ ಚೆನ್ನಾಗಿರುತ್ತದೆ. ಈಗಂತೂ ವೆರೈಟಿ ವೆರೈಟಿ ಡಿಸೈನ್ ಬ್ಲೌಸ್‌ಗಳು ಲಭ್ಯವಿದೆ.
ಏಕ್ ದೋ ತೀನ್ ಹುಡುಗಿ ಮಾಧುರಿ ದೀಕ್ಷಿತ್ ಬಾರ್ಡರ್ ಫುಲ್ ಸ್ಲೀವ್ ಬ್ಲೌಸ್ ಧರಿಸಿದ್ದಾರೆ. ನೀವು ಯಾವುದೇ ಸೀರೆಯ ಮೇಲೂ ಈ ರೀತಿ ವಿನ್ಯಾಸದ ಕುಪ್ಪಸ ಧರಿಸಬಹುದು.
ತಮನ್ನಾ ಭಾಟಿಯಾ ಅವರ ಓಪನ್ ಲುಕ್ ಬ್ಲೌಸ್ ವಿನ್ಯಾಸ ಎಷ್ಟು ಚೆಂದ ಅಲ್ಲವೇ? ಇದರ ಮೇಲೆ ಪಾರದರ್ಶಕ ಸೀರೆಯಂತೂ ನಟಿಗೆ ಹೇಳಿ ಮಾಡಿಸಿದಂತೆ ಇದೆ.
ಶಿಲ್ಪಾ ಶೆಟ್ಟಿ ಧರಿಸಿರುವ ಸೀರೆ ಬಹಳ ಸುಂದರವಾಗಿದೆ. ಆದರೆ ಅದಕ್ಕೆ ಒಪ್ಪುವ ಕೆಂಪು ಬಣ್ಣದ ಪೂರ್ತಿ ತೋಳಿನ ಸೀರೆಯಂತೂ ಶಿಲ್ಪಾ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ.
ಲಾಂಗ್ ಸ್ಲೀವ್ ಬ್ಲೌಸ್ ತುಂಬಾ ಟ್ರೆಂಡ್ ಆಗಿದೆ. ಸ್ಲೀವ್ ಲೆಸ್ ಬ್ಲೌಸ್ ಇಷ್ಟಪಡದ ಅಥವಾ ದಪ್ಪ ಕೈ ಇರುವವರಿಗೆ ಈ ಬ್ಲೌಸ್ ಬೆಸ್ಟ್.
ಕಂಗನಾ ರಣಾವತ್ ಕ್ಯಾಪ್ ಸ್ಟೈಲ್‌ನಲ್ಲಿ ಬ್ಲೌಸ್ ಧರಿಸಿದ್ದಾರೆ. ಈ ಬ್ಲೌಸ್ ವಿನ್ಯಾಸದಲ್ಲಿ, ನಿಮ್ಮ ದಪ್ಪ ಕೈಗಳು ಗೋಚರಿಸುವುದಿಲ್ಲ ಮತ್ತು
ಸ್ಟೈಲಿಶ್ ಆಗಿ ಕಾಣುತ್ತವೆ.
ಡೀಪ್ ವಿ ಶೇಪ್‌ನ ಫುಲ್ ಸ್ಲೀವ್ಸ್ ಕುಪ್ಪಸ, ಸೀರೆಯ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ
ರೂಪಾಲಿ ಗಂಗೂಲಿ ಧರಿಸಿರುವ ಬ್ರೊಕೇಡ್ ಫುಲ್ ಸ್ಲೀವ್ ಬ್ಲೌಸ್ ಬನಾರಸ್ ಸೀರೆಯೊಂದಿಗೆ ಬಹಳ ಆಕರ್ಷಕವಾಗಿ ಕಾಣುತ್ತದೆ.
ಬಾಲಿವುಡ್ ಕೃಷ್ಣ ಸುಂದರಿ ಕಾಜೋಲ್ ಫುಲ್ ಸ್ಲೀವ್ ಇರುವ ಪ್ರಿಂಟೆಡ್ ಬ್ಲೌಸ್ ಧರಿಸಿದ್ದಾರೆ. ನೀವು ಸಿಂಪಲ್ ಆಗಿ ಡ್ರೆಸ್ ಆಗಬೇಕು ಎಂದುಕೊಂಡಿದ್ದರೆ ಈ ರೀತಿಯ ಬ್ಲೌಸ್ ಹೇಳಿ ಮಾಡಿಸಿದಂತಿದೆ.
ಚಾಣಕ್ಯ ನೀತಿ: ಇಂಥ ಪುರುಷರನ್ನು ಮಹಿಳೆಯರು ಬೇಗ ಇಷ್ಟಪಡ್ತಾರೆ