ದೇವರ ನೋಡುವ ಮುನ್ನ ಸೈಫ್ ಆಲಿ ಖಾನ್ ನಟನೆಯ ಈ ಸಿನಿಮಾಗಳನ್ನು ನೋಡಿ
By Praveen Chandra B Sep 25, 2024
Hindustan Times Kannada
ದೇವರ ಭಾಗ 1 ಬಿಡುಗಡೆ ದಿನಾಂಕ: ಜೂನಿಯರ್ ಎನ್‌ಟಿಆರ್ ನಟನೆಯ ದೇವರ ಸಿನಿಮಾ ಸೆಪ್ಟೆಂಬರ್ 27ರಂದು ಬಿಡುಗಡೆಯಾಗಲಿದೆ. ಸೈಫ್ ಆಲಿ ಖಾನ್ ಇದರಲ್ಲಿ ವಿಲನ್ ರೋಲ್‌ನಲ್ಲಿ ನಟಿಸಿದ್ದಾರೆ. ಒಟಿಟಿಯಲ್ಲಿರುವ ಸೈಫ್ ಆಲಿ ಖಾನ್ ನಟನೆಯ ಇತರೆ ಚಿತ್ರಗಳ ವಿವರ ಇಲ್ಲಿದೆ.
ಹಮ್ ತುಮ್: ಕರಣ್ (ಸೈಫ್) ಮತ್ತು ರಿಯಾ (ರಾಣಿ ಮುಖರ್ಜಿ) ನಟಿಸಿರುವ ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿದೆ.
ಕಾಕ್‌ಟೇಲ್: ಜೀ 5ನಲ್ಲಿದೆ. ವಿಕ್ಟೋರಿಯಾ (ದೀಪಿಕಾ ಪಡುಕೋಣೆ) ತನ್ನ ಬಾಯ್ ಫ್ರೆಂಡ್ ಗೌತಮ್‌ಗೆ (ಸೈಫ್) ತನ್ನ ಗೆಳತಿ ಮೀರಾಳನ್ನು ಪರಿಚಯ ಮಾಡುತ್ತಾಳೆ. ಗೌತಮ್‌ಗೆ ಮೀರಾಳ ಮೇಲೆ ಲವ್ ಆಗುತ್ತದೆ.
ಗೋ ಗೋವಾ ಗೋನ್: ಜೀ 5ನಲ್ಲಿದೆ. ಗೋವಾಕ್ಕೆ ಪಾರ್ಟಿ ಹೋದ ಬಳಿಕ ಝೈಂಬೈಗಳ ದಾಳಿಗೆ ಈಡಾಗುವವರ ಕಥೆ.
ಸಲಾಮ್ ನಮಸ್ತೆ: ಅಮೆಜಾನ್ ಪ್ರೈಮ್ ವಿಡಿಯೋದಲ್ಲಿದೆ.
ಪರಿಣಿತ: ಇದು ಕೂಡ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿದೆ. ಬಾಲ್ಯದ ಪರಿಚಯ ಪ್ರೀತಿಯಾಗಿ ಮದುವೆಯಾಗಬೇಕೆನ್ನುವ ಸಮಯದಲ್ಲಿ ಕೆಲವೊಂದು ಘಟನೆಗಳು ನಡೆಯುತ್ತವೆ. ಇದೇ ಪರಿಣಿತ ಕಥೆ.
ವಿಕ್ರಮ್ ವೇದಾ: ಸೈಫ್ ಆಲಿ ಖಾನ್ ನಟ ಭಯಂಕರ ಪ್ರತಿಭೆಯನ್ನು ಈ ಚಿತ್ರದಲ್ಲಿ ನೋಡಬಹುದು. ಜಿಯೋ ಸಿನಿಮಾದಲ್ಲಿದೆ.