ಬಾಕ್ಸ್ ಆಫೀಸಿನಲ್ಲಿ ದೊಡ್ಡ ಫ್ಲಾಪ್ ಆದ ಬಾಲಿವುಡ್ ಚಿತ್ರಗಳು
By Rakshitha Sowmya Sep 04, 2024
Hindustan Times Kannada
120 ಕೋಟಿ ರೂ ಬಜೆಟ್‌ನಲ್ಲಿ ತಯಾರಾದ ಬಾಂಬೆ ವೆಲ್ವೆಟ್ ಸಿನಿಮಾ, ಬಾಲಿವುಡ್‌ನ ಫ್ಲಾಪ್ ಸಿನಿಮಾಗಳಲ್ಲಿ ಒಂದಾಗಿದೆ. ಈ ಚಿತ್ರ ಗಳಿಸಿದ್ದು ಕೇವಲ 20 ಕೋಟಿ ರೂ. ಮಾತ್ರ
ಕಂಗನಾ ರಣಾವತ್ ಅಭಿನಯದ ಬಹಳ ನಿರೀಕ್ಷೆ ಹುಟ್ಟಿಸಿದ್ದ ಸಿನಿಮಾ ಧಾಕಡ್. ಈ ಸಿನಿಮಾ ಕೂಡಾ ಭಾರೀ ಸೋಲು ಕಂಡಿತು. 90 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗಿದ್ದ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಗಳಿಸಿದ್ದು 4 ಕೋಟಿ ರೂ.
150 ಕೋಟಿ ರೂ ಬೃಹತ್ ವೆಚ್ಚದಲ್ಲಿ ಕರಣ್ ಚೋಪ್ರಾ ನಿರ್ಮಾಣ ಮಾಡಿದ್ದ ಕಳಂಕ್ ಸಿನಿಮಾ ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆದರೂ ಬಾಕ್ಸ್ ಆಫೀಸ್ ದೋಚುವಲ್ಲಿ ವಿಫಲವಾಯ್ತು. ಸಿನಿಮಾ ಸಂಗ್ರಹಿಸಿದ್ದು 80 ಕೋಟಿ ರೂ.
ಹೃತಿಕ್ ರೋಷನ್ ಅಭಿನಯದ ಕೈಟ್ಸ್ ಸಿನಿಮಾಗೆ ಖರ್ಚು ಮಾಡಿದ್ದು 80 ಕೋಟಿ ರೂ. ಆದರೆ ಸಿನಿಮಾ ಕಲೆಕ್ಷನ್ ಮಾಡಿದ್ದು ಅರ್ಧದಷ್ಟು ಮಾತ್ರ
ಹರ್ಷವರ್ಧನ್ ಕಪೂರ್ ಅಭಿನಯದ ಮೊದಲ ಸಿನಿಮಾ ಮಿರ್ಜ್ಯಾ, ಬಾಲಿವುಡ್‌ನಲ್ಲಿ ದುರಂತ ಸೋಲುಂಡ ಸಿನಿಮಾಗಳಲ್ಲಿ ಇದೂ ಒಂದು. 70 ಕೋಟಿ ಖರ್ಚು ಮಾಡಲಾಗಿದ್ದ ಸಿನಿಮಾ, ಕೊನೆಗೆ ಗಳಿಸಿದ್ದು 10 ಕೋಟಿ ಅಷ್ಟೇ.
ಅನುಷ್ಕಾ ಶರ್ಮಾ, ಶಾರುಖ್ ಖಾನ್ ನಟಿಸಿದ್ದ ಜೀರೋ ಸಿನಿಮಾ ಆರಂಭದಲ್ಲಿ ಬಹಳ ಸುದ್ದಿಯಾಗಿತ್ತು. ಸಿನಿಮಾ ದೊಡ್ಡ ಹಿಟ್ ಆಗುತ್ತದೇ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಸಿನಿಮಾ ಗಳಿಸಿದ್ದು 89 ಕೋಟಿ ರೂ. ಚಿತ್ರಕ್ಕಾಗಿ ಖರ್ಚು ಮಾಡಿದ್ದು270 ಕೋಟಿ ರೂ.
ಪ್ರಿಯಾಂಕಾ ಚೋಪ್ರಾ, ಹರ್ಮನ್ ಬವೇಜಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ ಲವ್ ಸ್ಟೋರಿ 2050 ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಕಮಾಲ್ ಮಾಡುವುದರಲ್ಲಿ ಸೋತಿತ್ತು. 40 ಕೋಟಿ ಬಜೆಟ್‌ನಲ್ಲಿ ತಯಾರಾದ ಸಿನಿಮಾ ಗಳಿಸಿದ್ದು 10 ಕೋಟಿ ರೂ.
ರಣಬೀರ್ ಕಪೂರ್ ನಾಯಕನಾಗಿ ನಟಿಸಿದ್ದ ಮೊದಲ ಸಿನಿಮಾ ಸಾವರಿಯಾ ಚಿತ್ರವನ್ನು ಸಂಜಯ್ ಲೀಲಾ ಬನ್ಸಾಲಿ ನಿರ್ಮಿಸಿ, ನಿರ್ದೇಶಿಸಿದ್ದರು. ಚಿತ್ರ ಬಾಕ್ಸ್ ಆಫೀಸಿನಲ್ಲಿ ಗಳಿಸಿದ್ದು 20 ಕೋಟಿ. ಇದರ ಬಜೆಟ್ 45 ಕೋಟಿ ರೂ.