ದಪ್ಪಗೆ ಇದ್ದ ಸೋನಾಕ್ಷಿ ಸಿನ್ಹಾ ಮತ್ತೆ ಫಿಟ್‌ ಆದದ್ದು ಹೇಗೆ?

By Praveen Chandra B
Jun 19, 2024

Hindustan Times
Kannada

ಚಿತ್ರರಂಗದಲ್ಲಿ ಸಿನಿಮಾ ಕಲಾವಿದರು ಫಿಟ್ನೆಸ್‌ಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.  

ದಬಾಂಗ್‌ ಚಿತ್ರದ ಮೂಲಕ ಸೋನಾಕ್ಷಿ ಸಿನ್ಹಾ ಚಿತ್ರರಂಗಕ್ಕೆ  ಪದಾರ್ಪಣೆ ಮಾಡಿದರು.

ಆ ಸಮಯದಲ್ಲಿ ಸುಮಾರು 30 ಕೆಜಿ ತೂಕ ಇಳಿಸಿಕೊಂಡಿದ್ದರು.

ಸೋನಾಕ್ಷಿ ಸಿನ್ಹಾ ಅವರಿಗೆ ಆಹಾರಗಳೆಂದರೆ ಅಚ್ಚುಮೆಚ್ಚು. ಡಯೆಟ್‌ ಮಾಡುವುದು ತುಂಬಾ ಕಷ್ಟಕರವಾಗಿತ್ತಂತೆ.

ತನಗೆ ಇಷ್ಟವಾದ ಎಲ್ಲವನ್ನೂ ಕಡಿಮೆ ಪ್ರಮಾಣದಲ್ಲಿ ತಿನ್ನುವಂತಹ ಕ್ರಮವನ್ನು ಅಳವಡಿಸಿಕೊಂಡರು. 

ಈ ಮೂಲಕ ತನ್ನ ಇಷ್ಟದ ಆಹಾರ ತಪ್ಪಿಸಿಕೊಳ್ಳದೆ ಫಿಟ್ನೆಸ್‌ ಕಾಪಾಡಿಕೊಳ್ಳಲು ಇವರಿಗೆ ಸಾಧ್ಯವಾಯಿತು. 

ಎರಡು ಗಂಟೆಗೊಮ್ಮೆ ಏನಾದರೂ ತಿನ್ನುತ್ತಿದ್ದರು. ಅದು ಸ್ವಲ್ಪ ಪ್ರಮಾಣದಲ್ಲಿ ಮಾತ್ರ. 

ಇದೇ ಸಮಯದಲ್ಲಿ ಜಿಮ್‌ನಲ್ಲಿ ದೇಹವನ್ನು ಸಾಕಷ್ಟು ದಂಡಿಸಿದರು. ಕಾರ್ಡಿಯೊ, ಸೈಕ್ಲಿಂಗ್‌ ಸೇರಿದಂತೆ ಎಲ್ಲವನ್ನೂ ಮಾಡುತ್ತಿದ್ದರು.

ಎಲ್ಲಾದರೂ ಡಯೆಟ್‌ ತುಸು ತಪ್ಪಿಸಿದರೆ ಮರುದಿನ 20 ನಿಮಿಷ ಹೆಚ್ಚು ವರ್ಕೌಟ್‌ ಮಾಡುತ್ತಿದ್ದರಂತೆ.

ಒಲಿಂಪಿಕ್ಸ್‌: ಡ್ರಗ್ ಪ್ರಕರಣದಲ್ಲಿ ಅನರ್ಹಗೊಂಡ ಮೊದಲ ಕ್ರೀಡಾಪಟು ಯಾರು?