ಎಂಎಸ್ ಸುಬ್ಬುಲಕ್ಷ್ಮೀ ಹುಟ್ಟುಹಬ್ಬಕ್ಕೆ ವಿದ್ಯಾಬಾಲನ್ ವಿಶೇಷ ಫೋಟೋಶೂಟ್
By Rakshitha Sowmya
Sep 18, 2024
Hindustan Times
Kannada
ಪ್ರತಿದಿನ ಬೆಳಗ್ಗೆ ಎಂಎಸ್ ಸುಬ್ಬುಲಕ್ಷ್ಮೀ ಹಾಡಿರುವ ವೆಂಕಟೇಶ್ವರ ಸುಪ್ರಭಾತ ಕೇಳಲು ಖುಷಿ ಎನಿಸುತ್ತದೆ
ಸ್ವರ ಸಾಮ್ರಾಜ್ಞಿ ಎಂಎಸ್ ಸುಬ್ಬುಲಕ್ಷ್ಮೀ ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಸಂಗೀತದ ಪ್ರತಿ ಸ್ವರದಲ್ಲೂ ಅವರು ಜೀವಂತವಾಗಿದ್ದಾರೆ
ಸೆಪ್ಟೆಂಬರ್ 16, ಎಂಎಸ್ ಸುಬ್ಬುಲಕ್ಷ್ಮೀ ಅವರ 108ನೇ ಹುಟ್ಟುಹಬ್ಬ
ಈ ವಿಶೇಷ ಸಂದರ್ಭದಲ್ಲಿ ಬಾಲಿವುಡ್ ನಟಿ ವಿದ್ಯಾ ಬಾಲನ್ ಸುಬ್ಬುಲಕ್ಷ್ಮೀ ಅವರಂತೆ ಕಾಸ್ಟ್ಯೂಮ್ ಧರಿಸಿ ಫೋಟೋ ಶೂಟ್ ಮಾಡಿಸಿದ್ದಾರೆ
ಈ ಫೋಟೋಗಳನ್ನು ವಿದ್ಯಾ ಬಾಲನ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ
ವಿದ್ಯಾ ಬಾಲನ್ ಲುಕ್ ನೋಡಿ ಫಾಲೋವರ್‌ಗಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ
ಜೊತೆಗೆ ವಿದ್ಯಾಗೆ, ಎಂಎಸ್ ಸುಬ್ಬುಲಕ್ಷ್ಮೀ ಅವರ ಮೇಲಿನ ಅಭಿಮಾನ ಕಂಡು ಸಂತೋಷ ವ್ಯಕ್ತಪಡಿಸಿದ್ದಾರೆ
ಫೋಟೋದಲ್ಲಿ ವಿದ್ಯಾ ಬಾಲನ್ ನಿಜವಾಗಿಯೂ ಸುಬ್ಬುಲಕ್ಷ್ಮೀ ಅವರಂತೇ ಕಾಣುತ್ತಿದ್ದಾರೆ
ಎಂಎಸ್ ಸುಬ್ಬುಲಕ್ಷ್ಮೀ ತಮಿಳುನಾಡು ಮೂಲದವರು
ಬಾಲ್ಯದಲ್ಲೇ ತಾಯಿ ಬಳಿ ಸಂಗೀತ ಕಲಿಯಲು ಆರಂಭಿಸಿದ ಸುಬ್ಬುಲಕ್ಷ್ಮೀ, 10ನೇ ವಯಸ್ಸಿಗೆ ಮೊದಲ ಆಡಿಯೋ ಬಿಡುಗಡೆ ಮಾಡಿದರು
ಭಾರತರತ್ನ, ಪದ್ಮಭೂಷಣ, ರಾಮೊನ್ ಮ್ಯಾಗ್ಸೆಸೆ ಸೇರಿದಂತೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳು ಎಂಎಸ್ ಸುಬ್ಬುಲಕ್ಷ್ಮೀ ಅವರಿಗೆ ದೊರೆತಿದೆ
ಮೈಸೂರು ದಸರಾ ಅಂಬಾರಿ ವೇಳೆ ಕಂಡ ಖುಷಿ ಕ್ಷಣಗಳು ಚಿತ್ರ : ಮನೋರಂಜನ್ ಸುರೇಶ್
ಮುಂದಿನ ಸ್ಟೋರಿ ಕ್ಲಿಕ್ ಮಾಡಿ